Hosanagara | ಜ 14ರಿಂದ 22ರವರೆಗೆ ರಾಮಭಜನೆ, ಹವನ ಮತ್ತು ರಾಮ ವಸಂತ ಪೂಜೆ ; ಶಶೀಧರ್‌ನಾಯ್ಕ್

0 321

ಹೊಸನಗರ: ತಾಲ್ಲೂಕಿನ ಕೋಟೆಗಾರ್ ವಿದ್ಯಾವರ್ಧಕ ಸಂಘದ ಸಮಾಜ ಬಾಂಧವರಿಂದ ಹೊಸನಗರದ ಶ್ರೀ ಸೀತಾರಾಮಚಂದ್ರ ಸಬಾಭವನದ ಆವರಣದಲ್ಲಿ ಜನವರಿ 14ರಿಂದ 22ರವರೆಗೆ ಪ್ರತಿದಿನ ಸಂಜೆ 6 ಗಂಟೆಯಿಂದ ರಾತ್ರಿ 8;30 ರವರೆಗೆ ಶ್ರೀರಾಮ ಭಜನೆ, ಶ್ರೀರಾಮತಾರಕ ಮತ್ತು ಮಂತ್ರಪಠಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಶಿಧರ್‌ನಾಯ್ಕ್ ಹೇಳಿದರು.

ಅವರು ಶ್ರೀ ಸೀತಾರಾಮಚಂದ್ರ ಸಭಾಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ಜ‌. 22 ಶುಕ್ರವಾರ ಶ್ರೀರಾಮನ ಭವ್ಯ ಮಂದಿರ ಲೋಕಾರ್ಪಣೆಗೊಳ್ಳುತ್ತಿರುವುದು ನಮಗೆಲ್ಲ ಸಂತೋಷದಾಯಕವಾಗಿದೆ. ಇಡೀ ವಿಶ್ವವೇ ಸಂಭ್ರಮದಲ್ಲಿ ಭಕ್ತಿಯಲ್ಲಿ ಪುನೀತರಾಗುವ ಪುಣ್ಯ ಸಂದರ್ಭವಿದು ಆದ್ದರಿಂದ ಜನವರಿ 14ರ ಭಾನುವಾರದಿಂದ ಪ್ರತಿದಿನ ಸಂಜೆ ರಾಮಭಜನೆ ಶ್ರೀರಾಮತಾರಕ ಮಂತ್ರಪಠಣ ಕಾರ್ಯಕ್ರಮ ಅತೀ ಅದ್ದೂರಿಯಾಗಿ ನಡೆಸಲು ಸಂಘ ತೀರ್ಮಾನಿಸಿದೆ ಎಂದರು.

ಸಾರ್ವಜನಿಕ ಅನ್ನಸಂತರ್ಪಣೆ:
ಜ. 22 ರಂದು ಶ್ರೀರಾಮ ದೇವರ ದೇವಸ್ಥಾನ ಲೋಕಾರ್ಪಣೆಗೊಂಡ ಬಳಿಕ ಹೊಸನಗರದ ಸೀತಾರಾಮಚಂದ್ರ ಸಭಾಭವನದಲ್ಲಿ ಶ್ರೀರಾಮಚಂದ್ರ ದೇವರಿಗೆ ವಿಶೇಷ ಪೂಜೆ ಶ್ರೀರಾಮ ವಸಂತ ಪೂಜೆ ಕಾರ್ಯಕ್ರಮ ನಂತರ ಮಧ್ಯಾಹ್ನ 1ಗಂಟೆಗೆ ಮಹಾಮಂಗಳಾರತಿ, ಪಾನಕ, ಕೊಸಂಬರಿ ವಿತರಣೆ, ಲಘು ಉಪಹಾರ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಪ್ರತಿಯೊಬ್ಬರ ಮನೆಯಲ್ಲಿಯೂ ಸಂಜೆ 5 ದೀಪಗಳನ್ನು ಬೆಳಗಿಸಬೇಕೆಂದು ಕೇಳಿಕೊಳ್ಳಲಾಗಿದೆ ಎಲ್ಲ ಕಾರ್ಯಕ್ರಮಗಳಿಗೆ ಕುಲ ಭಾಂದವರು ಪೂಜೆ ಕಾರ್ಯದಲ್ಲಿ ಪ್ರತಿದಿನ ಸಂಜೆ ಭಾಗವಹಿಸಬೇಕು ಹಾಗೂ ಜ. 22ರ ಸೋಮವಾರ ಕುಲ ಬಾಂಧವರು ಹಾಗೂ ಸಾರ್ವಜನಿಕರು ಪೂಜಾ ಕಾರ್ಯಕ್ರದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಬೇಕೆಂದು ಈ ಮೂಲಕ ಕೇಳಿಕೊಂಡರು.

ಈ ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷರಾದ ಬಿ ಗೋವಿಂದಪ್ಪ, ಉಪಾಧ್ಯಕ್ಷೆ ದಿನಮಣಿ, ಪಿ.ಆರ್ ಸಂಜೀವಣ್ಣ, ಕಾರ್ಯದರ್ಶಿಗಳಾದ ಹೆಚ್. ಶ್ರೀನಿವಾಸ್, ಹೆಚ್.ಆರ್ ಸುರೇಶ್, ನಿರ್ದೇಶಕರಾದ ವಿಠೋಭಾನಾಯ್ಕ್, ಗುತ್ತಿಗೆದಾರರಾದ ಹೆಚ್ ಮಹಾಬಲ, ಸತ್ಯನಾರಾಯಣ, ಹೆಚ್.ಎಂ ನಿತ್ಯಾನಂದ, ಕೆ.ಜಿ ನಾಗೇಶ್, ಬೃಂದಾವನ ಪ್ರವೀಣ್, ಗಣೇಶ್, ಕೋಡಿ ಚಂದ್ರಶೇಖರ, ನಾರಾಯಣ, ಮನೋಹರ, ಗೋವಿಂದರಾಯ, ಅನಿಲ್ ಕುಮಾರ್, ಮಂಜುನಾಥ್, ಸುಬ್ರಹ್ಮಣ್ಯ ದ್ಯಾವರ್ಸ, ಹಾಡಿ ಗೋಪಾಲ, ನಾಗರಾಜ್ ಕಕ್ರು, ಹೆಚ್.ಎಸ್. ಮಹಾದೇವ, ಶಾರದ ರಾಜು, ಸುವರ್ಣ ಹಿರಿಯಣ್ಣ, ಸೌಭಾಗ್ಯ ಮಂಜುನಾಥ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!