ಸಂಭ್ರಮ ಸಡಗರದೊಂದಿಗೆ ಕೊಳವಂಕ ಸುಡಗಿ ಜಾತ್ರೋತ್ಸವ ಸಂಪನ್ನ

0 349

ರಿಪ್ಪನ್‌ಪೇಟೆ: ಕೊಳವಂಕ ಬಳಿ ಕುಮದ್ವತಿ ನದಿ ತಟದಲ್ಲಿರುವ ಶ್ರೀ ಯಕ್ಷಮ್ಮ ದೇವಿ ಮತ್ತು ಶ್ರೀಬಸವೇಶ್ವರ ಸ್ವಾಮಿಯ ಜಾತ್ರೋತ್ಸವವು ಸಂಭ್ರಮ ಸಡಗರದೊಂದಿಗೆ ಸಂಪನ್ನಗೊಂಡಿತು.

ಅರಸಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳವಂಕ ಶ್ರೀಯಕ್ಷಮ್ಮ ಮತ್ತು ಬಸವೇಶ್ವರ ಸೇವಾ ಸಮಿತಿಯ 58ನೇ ವರ್ಷದ ಸುಡಗಿ ಜಾತ್ರೋತ್ಸವ ಮತ್ತು ಎಳ್ಳಾಮಾವಾಸ್ಯೆ ದೀಪೋತ್ಸವ ಕಾರ್ಯಕ್ರಮವು ಶ್ರದ್ದಾಭಕ್ತಿಯಿಂದ ಜರುಗಿತು.

ದೇವಸ್ಥಾನದ ಅರ್ಚಕರಾದ ಯೋಗೇಂದ್ರಗೌಡ ಪುರೋಹಿತತ್ವದಲ್ಲಿ ಇಂದು ಮುಂಜಾನೆ ಶ್ರೀಯಕ್ಷಮ್ಮ ಮತ್ತು ಬಸವೇಶ್ವರ ಸ್ವಾಮಿಗೆ ಪಂಚಾಮೃತಾಭಿಷೇಕ ವಿಶೇಷ ಪೂಜೆ ಮಹಾಮಂಗಳಾರತಿ ಪ್ರಸಾದ ವಿತರಣೆ ನಂತರ ಸಾಮೂಹಿಕ ಆನ್ನಸಂತರ್ಪಣೆ ಜರುಗಿತು.

ಈ ಸಂದರ್ಭದಲ್ಲಿ ದೇವಸ್ಥಾನ ಸೇವಾ ಸಮಿತಿಯ ಆಧ್ಯಕ್ಷ ಧರ್ಮೇಂದ್ರ ಹೆಚ್, ನಾರಾಯಣ, ನಾರಾಯಣಸ್ವಾಮಿ, ಕೆ.ಎಂ.ನಾಗರಾಜ, ಹೆಚ್.ಬಿ.ಯೋಗೇಂದ್ರಪ್ಪ, ಕೆ.ಬಿ.ಸತೀಶ್, ಚೇತನ, ಉದಯಚಾರ್, ಸುಬ್ರಹ್ಮಣ್ಯ, ಜೆ.ವಾಸು,ಹೆಚ್ ರವಿ, ದೇವೇಂದ್ರ ಬಿ,ಸುರೇಶ್, ನಾರಾಯಣಪ್ಪ, ರಾಮಚಂದ್ರ, ವಾಸುದೇವ, ಶಿವಪ್ಪ, ಕೃಷ್ಣಮೂರ್ತಿ ಇನ್ನಿತರರು ಹಾಜರಿದ್ದರು.

ಇಂದು ರಾತ್ರಿ 8 ಗಂಟೆಗೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಂತರ ಸಾಗರ ತಾಲ್ಲೂಕು ಗುತ್ತನಹಳ್ಳಿ ಶ್ರೀಬಸವೇಶ್ವರ ತರುಣ ಕಲಾ ನಾಟ್ಯ ಸಂಘದವರಿದ “ಸಾವು ತಂದ ಸೌಭಾಗ್ಯ’’ಎಂಬ ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶನ ನಡೆಯಲಿದೆ.

Leave A Reply

Your email address will not be published.

error: Content is protected !!