ಪರಿಸರ ನಾಶವಾದರೇ ಇಡೀ ಮನುಕುಲವೇ ನಾಶವಾದಂತೆ ; ತಹಶೀಲ್ದಾರ್ ಡಿ.ಜಿ ಕೋರೆ

0 47


ಹೊಸನಗರ: ಪರಿಸರ ನಾಶವಾದರೆ ಇಡೀ ವಿಶ್ವವೇ ನಾಶವಾದಂತೆ ಪ್ರತಿಯೊಬ್ಬ ಮನುಜರು ಮನೆಗೊಂದು ಮಕ್ಕಳು ಹೇಗೋ ಮನೆಗೊಂದು ಮರವನ್ನು ಬೆಳಸಬೇಕು ಗಿಡಗಳನ್ನು ನೆಟ್ಟು ಮರವಾಗಿ ಬೆಳೆಸುವ ಕಾಯಕ ಬೆಳೆಸಿಕೊಳ್ಳಬೇಕೆಂದು ಹೊಸನಗರದ ತಹಶೀಲ್ದಾರ್ ಡಿ.ಜಿ ಕೋರೆಯವರು ಹೇಳಿದರು.

ಪಟ್ಟಣದ ನೆಹರು ಮೈದಾನದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಡಿಯಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಪಟ್ಟಣದ ವಿವಿಧ ಭಾಗಗಳಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಗಿಡಗಳನ್ನು ನೆಟ್ಟು ಮಾತನಾಡಿದರು.


ಗಿಡಗಳನ್ನು ಬೆಳೆಸುವುದರಿಂದ ಪರಿಸರದ ವಾತಾವರಣ ಸುಚಿಯಾಗಿರುವುದರ ಜೊತೆಗೆ ನಮಗೆ ತಂಪಾದ ಗಾಳಿ, ಮನುಷ್ಯರಿಗೆ ಪ್ರಾಣಿ ಪಕ್ಷಿಗಳಿಗೆ ತಿನ್ನುವ ಆಹಾರವನ್ನು ನೀಡುತ್ತದೆ ಗಿಡ ಮರಗಳನ್ನು ಬೆಳೆಸುವುದರಿಂದ ಕಾಲ-ಕಾಲಕ್ಕೆ ಮಳೆ ಬೆಳೆಗಳು ಬೆಳೆಯುವುದರಿಂದ ದೇಶ ಸಮೃದ್ಧಿಯಾಗಿರುತ್ತದೆ ಎಂದರು.


ಈ ಪರಿಸರ ದಿನಾಚಣೆಯಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ ಟಿ, ಆರೋಗ್ಯಾಧಿಕಾರಿ ಪ್ರಶಾಂತ್, ಗ್ರಾಮ ಆಡಳಿತಾಧಿಕಾರಿ ಕೌಶಿಕ್, ಉಮಾಶಂಕರ್, ಮಂಜುನಾಥ್, ಪರಶುರಾಮ, ಗಿರೀಶ್, ಪಟ್ಟಣ ಪಂಚಾಯತಿ ಸದಸ್ಯರಾದ ಹಾಲಗದ್ದೆ ಉಮೇಶ್, ಅಶ್ವಿನಿಕುಮಾರ್, ಕೃಷ್ಣವೇಣಿ, ಶಾಹಿನ, ಗಾಯಿತ್ರಿ ನಾಗರಾಜ್, ಆಸ್ಮಾ, ನೇತ್ರಾ, ಕುಮಾರಿ, ಚಂದ್ರಪ್ಪ ಹಾಗೂ ಪೌರ ಕಾರ್ಮಿಕರು ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!