ಡಿ. 20ರ ಒಳಗೆ ಸಂಬಳ ನೀಡದಿದ್ದರೆ ಅನಿರ್ಧಿಷ್ಟಾವಧಿಗೆ ಮುಷ್ಕರ ; ಆರೋಗ್ಯ ಇಲಾಖೆಯ ಡಿ ಗ್ರೂಪ್ ಹಾಗೂ ನಾನ್‌ ಕ್ಲಿನಿಕ್ ಸಿಬ್ಬಂದಿಗಳ ಎಚ್ಚರಿಕೆ

0 755

ಹೊಸನಗರ: ತಾಲ್ಲೂಕಿನ ಕೆಲವು ಇಲಾಖೆಯಲ್ಲಿ ನಾನ್ ಕ್ಲಿನಿಕ್ ಡಿ ಗ್ರೂಪ್ ನೌಕರರಿಗೆ ಕಂದಾಯ ಇಲಾಖೆಯ ಅಟಲ್‌ಜೀ ಕೇಂದ್ರದ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಹೊಸನಗರ ತಾಲ್ಲೂಕಿನ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಸುಮಾರು ನಾಲ್ಕು ತಿಂಗಳಿಂದ ಸಂಬಳ ನೀಡದೆ ಕಷ್ಟಕರ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ಸಿಬ್ಬಂದಿಗಳ ಕಷ್ಟ ಜನಪ್ರತಿನಿಧಿಗಳಾಗಲಿ ಅಥವಾ ಕೆಲಸ ಮಾಡಿಸಿಕೊಳ್ಳುವ ಹಿರಿಯ ಅಧಿಕಾರಿಗಲಾಗಲಿ ಕೇಳುವಲ್ಲಿ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಇತ್ತೀಚಿನ ದಿನಗಳಲ್ಲಿ ಕನಿಷ್ಟ ಆಹಾರ ಪದಾರ್ಥಗಳ ಬೆಲೆಗಳು ಹಾಗೂ ಜೀವನಕ್ಕೆ ಬೇಕಾಗಿರುವ ಅತ್ಯಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಈ ಕೆಲಸವನ್ನೇ ನಂಬಿಕೊಂಡ ಕುಟುಂಬಗಳು ಜೀವನ ನಿರ್ವಹಣೆ ಮಾಡಲು ಕಷ್ಟಕರವಾಗಿದೆ. ಕಛೇರಿಯ ಅಧಿಕಾರಿಗಳು ಕೆಲಸಕ್ಕೆ ಬರುವುದು ಒಂದು ನಿಮಿಷ ತಡವಾದರೂ ಗದರಿಸುವ ಅಧಿಕಾರಿಗಳು ಸಂಬಳದ ವಿಷಯದಲ್ಲಿ ತಮಗೇನು ಗೊತ್ತಿಲ್ಲದಂತೆ ಇರುವುದು ವಿಪರ್ಯಾಸ.

ಹೊಸನಗರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು 28 ಜನರು ಗ್ರೂಪ್ ಡಿ ಹಾಗೂ ನಾನ್‌ ಕ್ಲಿನಿಕ್ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಇವರು ಕಡು ಬಡವರಾಗಿದ್ದು ಒಂದು ಹೊತ್ತು ಊಟಕ್ಕಾಗಿ ಆರೋಗ್ಯ ಕೇಂದ್ರದ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಇಂಥವರಿಗೆ ಸುಮಾರು ನಾಲ್ಕು ತಿಂಗಳಿಂದ ಕೊಡುವ ಅಲ್ಪ-ಸ್ವಲ್ಪ ಸಂಬಳವನ್ನು ನೀಡದೆ ಜೀವನ ಹಾಗೂ ಕುಟುಂಬ ಕಷ್ಟಕರವಾಗಿ ಇವರು ಸಾಗಿಸುತ್ತಿದ್ದಾರೆ. ಇವರೆಲ್ಲರೂ ಸೇರಿ ಹೊಸನಗರ ತಹಶೀಲ್ದಾರ್ ರಶ್ಮಿಯವರಿಗೆ ಮನವಿ ಪತ್ರ ಸಲ್ಲಿಸಿ, ಡಿಸೆಂಬರ್ 20ರ ಒಳಗೆ ನಮಗೆ ಸಂಬಳ ನೀಡದಿದ್ದರೆ ಅನಿರ್ಧಿಷ್ಟಾ ಕಾಲ ಮುಷ್ಕರ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಸರ್ಕಾರಿ ನೌಕರರಿಗೆ ಲಕ್ಷಗಟ್ಟಲೆ ಸಂಬಳ ಸರಿಯಾದ ಸಮಯಕ್ಕೆ ನೀಡುವ ಈ ಸರ್ಕಾರ ಅಲ್ಪ-ಸ್ವಲ್ಪ ಸಂಬಳ ಪಡೆಯುವ ಇಂಥವರಿಗೆ ನಾಲ್ಕು ತಿಂಗಳಿಂದ ಸಂಬಳ ನೀಡಲು ಹಿಂದೆಟು ಹಾಕುತ್ತಿರುವುದು ಯಾಕೆ? ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲಿಯೂ ಕಾಡುತ್ತಿದೆ. ತಕ್ಷಣ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಇಲಾಖೆಯಲ್ಲಿ ದುಡಿಸಿಕೊಳ್ಳುತ್ತಿರುವ ಮೇಲಾಧಿಕಾರಿಗಳು ತುರ್ತು ಗಮನಹರಿಸಿ ಇವರಿಗೆ ತಕ್ಷಣ ಸಂಬಳ ನೀಡುವಲ್ಲಿ ಮುಂದಾಗುವರೇ ಕಾದುನೋಡಬೇಕಾಗಿದೆ.

Leave A Reply

Your email address will not be published.

error: Content is protected !!