ಮನೆ ಮೇಲೆಯೇ ಬಗನಿ ಮರ ಬೀಳಿಸಿ ತಿಂದು ಹೋದ ಕಾಡಾನೆ

0 1,508

ಮೂಡಿಗೆರೆ : ಬಗನಿ ಮರದ (Bagani Tree) ಆಸೆಗೆ ಕಾಡಾನೆಯೊಂದು (Elephant) ಮರವನ್ನು ಮನೆ ಮೇಲೆ ಬೀಳಿಸಿದ ಘಟನೆ ಮೂಡಿಗೆರೆ (Mudigere) ತಾಲೂಕಿನ ದೇವನಗೂಲ್ ಗ್ರಾಮದಲ್ಲಿ ನಡೆದಿದೆ.

ಬಗನಿ (ಬೈನೆ) ಮರ ಎಂದರೆ ಕಾಡಾನೆಗಳಿಗೆ ಅಚ್ಚುಮೆಚ್ಚು. ಮಲೆನಾಡಲ್ಲಿ ಕಾಡಾನೆಗಳ ಹಾವಳಿ ಜಾಸ್ತಿಯಾಗಿದ್ದು, ಮನೆ ಬಾಗಿಲಿಗೆ ಆನೆಗಳು ಬರುತ್ತಿವೆ ಎನ್ನಲಾಗುತ್ತಿದೆ.

ಪ್ರಶಾಂತ್ ಎಂಬುವವರ ಮನೆ ಮೇಲೆ ಮರ ಬೀಳಿಸಿದ ಕಾಡಾನೆ, ರಾತ್ರಿಯಿಡಿ ಮನೆ ಬಾಗಿಲಲ್ಲೇ ಬಗನಿ ಮರ ತಿನ್ನುತ್ತಿತ್ತು. ಮರ ಮನೆ ಮೇಲೆ ಬಿದ್ದ ಪರಿಣಾಮ ಮನೆಯ ಸೀಮೆಂಟ್ ಶೀಟುಗಳು ಪುಡಿ ಪುಡಿಯಾಗಿವೆ.


ಆನೆ ಕಂಡು ಮನೆ ಮೇಲೆ ಮರ ಬಿದ್ದರೂ ಪ್ರಶಾಂತ್ ಮನೆಯವರು ಹೊರಬಾರದೆ ಮನೆಯೊಳಗಡೆಯೇ ಇದ್ದರು ಎನ್ನಲಾಗಿದೆ.

Leave A Reply

Your email address will not be published.

error: Content is protected !!