ಸೂಕ್ತ ಶಿಕ್ಷಣ, ಆರೈಕೆ ಮಾಡಿದರೆ ಬುದ್ಧಿಮಾಂದ್ಯರು ಸಮಾಜದಲ್ಲಿ ಎಲ್ಲರಂತೆ ಬದುಕಬಲ್ಲರು

0 413

ಸೊರಬ: ಬುದ್ದಿಮಾಂದ್ಯತೆ ಕಾಯಿಲೆಯಲ್ಲ. ಮಕ್ಕಳು ಅವರ ಬೌದ್ಧಿಕ ಬೆಳವಣಿಗೆಗೆ ಅನುಗುಣವಾಗಿ ಹಾಗೆ ವರ್ತಿಸುತ್ತಾರೆ. ಅವರಿಗೆ ಸೂಕ್ತ ಶಿಕ್ಷಣ, ಆರೈಕೆ ಮಾಡಿದರೆ ಅವರು ಸಹ ಸಮಾಜದಲ್ಲಿ ಎಲ್ಲರಂತೆ ಬದುಕಬಲ್ಲರು ಎಂದು ನ್ಯಾಯವಾದಿ ಕುಮಾರಸ್ವಾಮಿ ಅಭಿಮಾನಿ ಬಳಗದ ಕುಶಾಲ್ ಆರೇಕೊಪ್ಪ ಹೇಳಿದರು.

ಸರ್ಕಾರದ ಅನುದಾನವಿಲ್ಲದೆ ದಾನಿಗಳ ನೆರನಿಂದ ನಡೆಯುತ್ತಿರುವ ಪಟ್ಟಣದ ಹೊಸಪೇಟೆ ಬಡಾವಣೆಯ ನವಚೇತನ ಬುದ್ದಿಮಾಂದ್ಯ ಮಕ್ಕಳ ಶಾಲೆ ವಿದ್ಯಾರ್ಥಿಗಳಿಗೆ ವಕೀಲ ಕುಮಾಸ್ವಾಮಿ ಅಭಿಮಾನಿ ಬಳಗದಿಂದ ವಾಷಿಂಗ್ ಮಷಿನ್ ನೀಡಿ ಅವರು ಮಾತನಾಡಿದರು.

ಬುದ್ದಿಮಾಂದ್ಯ ಮಕ್ಕಳ ಜೀವನ, ಹಾದಿ ಸವಾಲಿನಿಂದ ಕೂಡಿದೆ. ಇವರ ಬಗ್ಗೆ ಕರುಣೆ ತೋರಿದರೇ ಸಾಲದು, ಸಮಾಜದಲ್ಲಿಅವರಿಗೂ ಎಲ್ಲರಂತೆ ಬದುಕುವ ಹಕ್ಕು, ಅವಕಾಶಗಳಿವೆ. ಇಂತಹವರ ಬಾಳು ಹಸನುಗೊಳಿಸಿ, ಬೆಳಕು ಚೆಲ್ಲುವಲ್ಲಿ ಅನಾವಶ್ಯಕ ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಇಂತಹ ಮಕ್ಕಳಿಗೆ ಸಹಾಯ ಹಸ್ತ ನೀಡಲು ಪ್ರತಿಯೊಬ್ಬರೂ ಪ್ರತಿಯೊಬ್ಬರು ಮುಂದಾಗಬೇಕು ಎಂದರು.

ಈ ಮಕ್ಕಳಿಗೆ ನ್ಯಾಯವಾದಿ ಕುಮಾರಸ್ವಾಮಿಯವರ ಜನ್ಮ ದಿನದ ಸಂದರ್ಭದಲ್ಲಿ ಏನಾದರೂ ಕೊಡುಗೆ ನೀಡಬೇಕು ಎಂದು ವಕೀಲರು ನವಚೇತನ ಶಾಲೆಯಾರೊಂದಿಗೆ ಚರ್ಚಿಸಿದ ಸಂದರ್ಭದಲ್ಲಿ ವಾಷಿಂಗ್ ಮೆಷಿನ್ ನ ಕೊರತೆ ಇದೆ ಎಂದು ತಿಳಿಸಿದಾಗ ವಾಷಿಂಗ್ ಮೆಷಿನ್ ನೀಡಿ ಕೊರತೆ ನೀಗಿಸಿದ್ದಕ್ಕೆ ಸಂತಸ ತಂದಿದೆ ಎಂದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಶಾಲಾ ಶಿಕ್ಷಕ ಪುಟ್ಟರಾಜು ಮಾತನಾಡಿ ಬುದ್ದಿಮಾಂದ್ಯರ ಬಗ್ಗೆ ಕರುಣೆ, ಅನುಕಂಪ ತೋರುವುದು ಬೇಡ, ಸಮಾಜದಲ್ಲಿ ಸಮಾನ ಅವಕಾಶಗಳನ್ನು ನೀಡಿ ಮುಂಚೂಣಿಗೆ ತರುವ ಮೂಲಕ ಸಹಾಯಹಸ್ತ ಚಾಚಬೇಕು. ಯಾವುದೋ ಒಂದು ಕಾರಣದಿಂದ ಇಂತಹ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಇಂತಹ ಮಕ್ಕಳನ್ನು ತಾತ್ಸಾರ ಮನೋಭಾವದಿಂದ ಕಾಣದೇ ಅವರನ್ನು ಸಮಾಜ ಒಳ್ಳೆಯ ದೃಷ್ಠಿಯಿಂದ ಕಂಡು ಅವರಿಗೂ ಸಹ ನಮ್ಮಂತೆ ಬದುಕುವ ವ್ಯವಸ್ಥೆ ಕಲ್ಪಿಸಿಕೊಡಲು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ನ್ಯಾಯವಾದಿ ಕುಮಾಸ್ವಾಮಿ ಅಭಿಮಾನಿ ಬಳಗದ ಆನಂದ್ ಹಿರೆಕಸವಿ, ಶಶಿಕುಮಾರ್, ಮಹೇಶ್, ಸಂತೋಷ್,ಶಿವರಾಜ್, ಶಾಲಾ ಶಿಕ್ಷಕರಾದ ಪುಟ್ಟರಾಜು, ರವೀಂದ್ರ, ಪಲ್ಲವಿ, ಗಾಯತ್ರಿ, ಮಂಗಳ ಮತ್ತಿತರರಿದ್ದರು.

Leave A Reply

Your email address will not be published.

error: Content is protected !!