ಕಬ್ಬಿನ ಹಾಲನ್ನು ಪ್ರಯಾಣಿಕರಿಗೆ ದಾನ ಮಾಡಿದ ರೈತರು

0 949

ರಿಪ್ಪನ್‌ಪೇಟೆ: ತಾವು ಬೆಳೆದ ಆಹಾರ ಧಾನ್ಯಗಳನ್ನು ಇನ್ನೊಬ್ಬರಿಗೆ ದಾನ ಮಾಡಿದರೆ ಮುಂದಿನ ವರ್ಷದಲ್ಲಿ ಫಸಲು ಹೆಚ್ಚಾಗುವುದು ಎಂಬ ನಂಬಿಕೆ ರೈತರದಾಗಿದೆ. ಹಾಗೇ ವರ್ಷದಲ್ಲಿ ಬೆಳೆದ ಕಬ್ಬಿನ ಆಲೆಮನೆ ಮಾಡಿ ಒಂದು ದಿನ ರಾಜ್ಯ ಹೆದ್ದಾರಿ ತೀರ್ಥಹಳ್ಳಿ – ಸಾಗರ ರಸ್ತೆಯ ಗರ್ತಿಕೆರೆ ಬಳಿಯ ಎಣ್ಣೆನೋಡ್ಲು ಬಸ್ ನಿಲ್ದಾಣದಲ್ಲಿ ಹೋಗಿ ಬರುವ ಎಲ್ಲಾ ಬಸ್ ಮತ್ತು ಲಾರಿ ಇನ್ನಿತರ ದ್ವಿಚಕ್ರವಾಹನಗಳ ಪ್ರಯಾಣಿಕರಿಗೆ ಉಚಿತವಾಗಿ ಕಬ್ಬಿನ ಹಾಲುಯನ್ನು ವಿತರಿಸಿ ತೃಪ್ತಿಪಟ್ಟರು.

ಬಸ್‌ನಲ್ಲಿ ಪ್ರಯಾಣಿಕರು ಮಕ್ಕಳು ಸೇರಿದಂತೆ ಮಹಿಳೆಯರು ಮತ್ತು ಪುರುಷರು ಕಬ್ಬಿನ ಹಾಲು ಕುಡಿದು ನಿಮ್ಮ ಈ ಸೇವೆ ಇನ್ನೂ ವೃದ್ದಿಯಾಗಲಿ ಎಂದು ಹರಿಸಿದರ ಪರಿಣಾಮ ಬರುವ ವರ್ಷದಲ್ಲಿ ಇನ್ನೂ ವೃದ್ದಿಯಾಗುವುದೆಂಬ ನಂಬಿಕೆಯಿಂದಾಗಿ ಕಳೆದ 10 ವರ್ಷದಿಂದ ಹೊಳೆಕೇವಿ ಗ್ರಾಮದ ರೈತರು ಟಿಲ್ಲರ್‌ನಲ್ಲಿ ಎರಡು ಡ್ರಮ್ ಕಬ್ಬಿನ ಹಾಲನ್ನು ತುಂಬಿಕೊಂಡು ಬಂದು ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ವಿತರಣೆ ಮಾಡಿದರು. ಕಬ್ಬಿನ ಹಾಲು ಕುಡಿದವರು ನಮ್ಮ ಹೊಟ್ಟೆ ತಣಿಸಿದ್ದೀರಿ ನಿಮಗೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದ ಅಶೀರ್ವಾದವೇ ನಮ್ಮ ಈ ಕಾಯಕಕ್ಕೆ ಸ್ಫೂರ್ತಿಯಾಗಿದೆ ಎಂದು ರೈತರು ಹೇಳಿಕೊಂಡರು .

Leave A Reply

Your email address will not be published.

error: Content is protected !!