ಸೌಹಾರ್ದ ಎಂದರೆ ಸದಸ್ಯರ ನಡುವಿನ ಹೊಂದಾಣಿಕೆ ಎಂದರ್ಥ ; ರಘುಪತಿ

0 44


ಹೊಸನಗರ: ಸಹಕಾರಿ ಸಂಸ್ಥೆಗಳಲ್ಲಿ ಸದಸ್ಯರ ನಿರ್ದೆಶಕರ ಹೊಂದಾಣಿಕೆ ಬಹು ಮುಖ್ಯ ಹೊಂದಾಣಿಕೆ ಇಲ್ಲದಿದ್ದರೇ ಯಾವುದೇ ಸಹಕಾರಿ ಸಂಸ್ಥೆಗಳು ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ ಸೌಹಾರ್ಧ ಎಂದರೆ ಹೊಂದಾಣಿಕೆ ಎಂದರ್ಥ ನೀಡುತ್ತದೆ ಎಂದು ಸೊರಬ ಡಿ.ಸಿ.ಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕರಾದ ರಘುಪತಿಯವರು ಹೇಳಿದರು.


ಹೊಸನಗರದ ಆರ್ಯಈಡಿಗರ ಸಭಾಭವನದಲ್ಲಿ ಶೀ ಜೇನುಕಲ್ಲಮ್ಮ ಸೌರ್ಹಾದ ಸಹಕಾರಿ ಸಂಘದ ಪ್ರಥಮ ವರ್ಷದ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಅಧಿಕಾರಿಗಳು ನೊಂದಾವಣೆ ಅಧಿಕಾರವನ್ನು ಮಾತ್ರ ಇಟ್ಟುಕೊಂಡಿದ್ದು ಸಂಸ್ಥೆಯ ಪೂರ್ಣ ಪ್ರಮಾಣದ ಅಧಿಕಾರವನ್ನು ಸಹಕಾರಿ ಸಂಸ್ಥೆಯ ನಿರ್ದೆಶಕರುಗಳಿಗೆ ಸದಸ್ಯರಿಗೆ ನೀಡಿದೆ ಆದರೆ ಅಧಿಕಾರಿಗಳು ನೀಡಿರುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳದೇ ಸದಸ್ಯ-ಸದಸ್ಯರ ಮಧ್ಯೆ ದ್ವಂದ್ವ ನಿಲುವು ಮಾಡಿಕೊಳ್ಳದೇ ಸಂಸ್ಥೆಯ ಜಾವಾಬ್ದಾರಿಯನ್ನು ಸಂಘದ ನಿರ್ದೆಶಕರು ಹಂಚಿಕೊಂಡಾಗ ಮಾತ್ರ ಯಾವುದೇ ಸಂಸ್ಥೆ ಬೆಳೆಯಲು ಬೆಳೆಸಲು ಸಾಧ್ಯ ಎಂದರು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಬಿ.ಜಿ.ಸತ್ಯನಾರಾಯಣರವರು ವಹಿಸಿ ಮಾತನಾಡಿ ನಮ್ಮ ಪ್ರಾರಂಭವಾಗಿ ಕೇವಲ ಒಂದು ವರ್ಷವಾಗಿದೆ ನಮ್ಮ ಸಂಸ್ಥೆ ಕೃಷಿಕರಿಗೆ ಬಡವರಿಗೆ ಆರ್ಥಿಕವಾಗಿ ಹಿಂದಳಿದವರಿಗೆ ಸಾಲ ಸೌಲಭ್ಯವನ್ನು ನೀಡುವ ಉದ್ಧೇಶದಿಂದ ಈ ಸಂಘ ಸ್ತಾಪಿಸಲಾಗಿದೆ 35ಲಕ್ಷದಲ್ಲಿ 50ಜನರಿಗೆ ಕೃಷಿ ಸಾಲ ಇತರೆ ಸಾಲ ನೀಡಿದ್ದೇವೆ ನಮ್ಮ ಸಂಘಕ್ಕೆ ಸದಸ್ಯರನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು ಮುಂದಿನ ದಿನದಲ್ಲಿ 1000 ಸದಸ್ಯರನ್ನು ಹಾಗೂ 1 ಕೋಟಿ ವ್ಯವಹಾರ ಮಾಡುವ ಗುರಿಯನ್ನು ಹೊಂದಿದ್ದೇವೆ ಎಲ್ಲರೂ ಸಹಕಾರ ನೀಡಬೇಕೆಂದು ಈ ಸಂದರ್ಭದಲ್ಲಿ ಕೇಳಿಕೊಂಡರು.


ಅಧ್ಯಕ್ಷರಾದ ಬಿ.ಜಿ.ಸತ್ಯನಾರಾಯಣ, ಉಪಾಧ್ಯಕ್ಷೆ ಪೂರ್ಣಿಮಾ, ಟಿ.ಎಂ.ದಿನೇಶ, ಧನಂಜಯ ಎಂ.ವಿ, ಗಂಗಾ ದೇವರಾಜ್, ನಾಗೇಶ ಹೆಚ್.ಎನ್, ನಾಗಪ್ಪ ಎಸ್.ಕೆ, ರಮೇಶ್ ನೇರಲೆ, ಶ್ರೀಪತಿ ಟಿ.ಎನ್, ತಿಮ್ಮಪ್ಪ ಪಿ, ಯೋಗೇಂದ್ರ, ಡಿಸಿಸಿ ಬ್ಯಾಂಕ್ ವ್ಯವಸ್ತಾಪಕರಾದ ಹಾಲಪ್ಪ, ಮಂಡಾನಿ ಮೋಹನಬ, ಸ್ವಾಮಿ, ಎರಗಿ ಉಮೇಶ್, ಲೇಖನಮೂರ್ತಿ ಇನ್ನೂ ಮುಂತಾದ ಸದಸ್ಯರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!