ಅ.15-24 ರವರೆಗೆ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶ್ರೀ ಶರನ್ನವರಾತ್ರಿ ಉತ್ಸವ

0 95

ಸಾಗರ : ಇಲ್ಲಿನ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಅಕ್ಟೋಬರ್ 15 ರಿಂದ 24 ರವರೆಗೆ ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ಪ್ರತಿ ದಿನವೂ ವಿಶೇಷ ಪೂಜೆ, ವಿಶೇಷ ಅಲಂಕಾರ, ಸಪ್ತಶತಿ ಪಾರಾಯಣ, ವಿವಿಧ ಹವನಗಳು, ಕುಂಕುಮಾರ್ಚನೆ, ಅಷ್ಟಾವಧಾನಸೇವೆ ಮುಂತಾದ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಸಂಜೆ 6 ಗಂಟೆಗೆ ವಿವಿಧ ಭಜನಾ ಮಂಡಳಿಯವರಿಂದ ಭಜನೆ ಹಾಗೂ ಶಾಂಕರ ಸ್ತೋತ್ರ ಪಠಣವಿರುತ್ತದೆ.


9 ದಿನಗಳ ಪರ್ಯಂತ ಪ್ರತಿದಿನ ಒಂದೊಂದರಂತೆ ಶ್ರೀ ದಕ್ಷಿಣಾಮೂರ್ತಿ ಹವನ, ಶೀ ದುರ್ಗ ಸೂಕ್ತ ಹವನ, ಶ್ರೀ ಲಕ್ಷ್ಮೀನಾರಾಯಣ ಹೃದಯ ಹವನ, ಶ್ರೀ ಮಹಾಗಣಪತಿ ಉಪನಿಷತ್ ಹವನ, ಶ್ರೀ ಲಲಿತಾ ಸಹಸ್ರನಾಮ ಹವನ, ಶ್ರೀ ಧನ್ವಂತರಿ ಹವನ, ಶ್ರೀ ಸರಸ್ವತೀ ಮೂಲಮಂತ್ರ ಹವನ, ಶ್ರೀ ನವಗ್ರಹಪೂರ್ವಕ ಶ್ರೀ ನವಚಂಡಿಕಾ ಹವನ, ಶ್ರೀ ಸೂಕ್ತ ಹವನ, ಅ. 24 ರಂದು ವಿಜಯದಶಮಿ ಕಾರ್ಯಕ್ರಮಗಳು ನಡೆಯಲಿವೆ.


ಅಕ್ಟೋಬರ್ 22 ಭಾನುವಾರದಂದು ನವಚಂಡಿಯಾಗ, 12 ಗಂಟೆಗೆ ಪೂರ್ಣಾಹುತಿ, 1 ಗಂಟೆಗೆ ಪ್ರಸಾದ ವಿನಿಯೋಗ ಇರುತ್ತದೆ. ಅಕ್ಟೋಬರ್ 22 ರಂದು ಮಧ್ಯಾಹ್ನ 12 ಕ್ಕೆ ಶ್ರೀ ಶಾರದಾ ಪ್ರಸಾದ ಪುರಸ್ಕಾರ ನಡೆಯಲಿದ್ದು, ವಿದ್ವಾನ್ ಗಣಪತಿ ಭಟ್, ಟಿ.ವಿ.ಪಾಂಡುರಂಗ, ಪ್ರಕಾಶ್ ವಿ.ಸಿ.ವರದಾಮೂಲ ಇವರಿಗೆ ಪುರಸ್ಕಾರ ಪ್ರದಾನ ಮಾಡಲಾಗುವುದು.
ಅಕ್ಟೋಬರ್ 23 ರಂದು ಬೆಳಿಗ್ಗೆ 11-30 ಕ್ಕೆ ಗಮಕ ಕಾರ್ಯಕ್ರಮ ನಡೆಯಲಿದ್ದು, ಅಶೋಕ್ ಕುಮಾರ್ ಹೆಗ್ಗೋಡು ನವದುರ್ಗಾ ವೈಭವ ವಾಚನ ಮಾಡಲಿದ್ದು, ಹೊಸಕೊಪ್ಪ ಶಂಕರನಾರಾಯಣ ವ್ಯಾಖ್ಯಾನ ಮಾಡುವರು.


ಶರನ್ನವರಾತ್ರಿ ಈ ಕಾರ್ಯಕ್ರಮಗಳಿಗೆ ಸದ್ಭಕ್ತರು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸೇವಾ ವಿವರಗಳಿಗೆ ಮೊ. 9449049484, 87621608880 ನ್ನು ಸಂಪರ್ಕಿಸಬಹುದು.

Leave A Reply

Your email address will not be published.

error: Content is protected !!