ಎಲ್ಲರ ವಿಶ್ವಾಸದಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವೆ ; ಡಾ. ಆರ್.ಎಂ. ಮಂಜುನಾಥ ಗೌಡ

0 311

ಶಿವಮೊಗ್ಗ : ಮಲೆನಾಡು ಅಭಿವೃದ್ಧಿ ಮಂಡಳಿಯು 13 ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. 65 ಕ್ಕೂ ಹೆಚ್ಚು ಶಾಸಕರು, ಸಂಸದರು, ಅಧಿಕಾರಿಗಳನ್ನೊಂಡಿದ್ದು ಎಲ್ಲರ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯವನ್ನು ಮಾಡುತ್ತೇನೆ ಎಂದು ನೂತನ ಎಂಎಡಿಬಿ ಅಧ್ಯಕ್ಷರಾದ ಡಾ.ಆರ್ ಎಂ ಮಂಜುನಾಥ ಗೌಡ ತಿಳಿಸಿದರು.

ನಗರದ ಮಲೆನಾಡು ಅಭಿವೃದ್ಧಿ ಮಂಡಳಿಯ ಕಚೇರಿಯ ಆವರಣದಲ್ಲಿ ಇಂದು ಮಲೆನಾಡು ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡು ಮಾತನಾಡಿದ ಅವರು, ಮೊದಲು ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಮುನ್ನುಡಿ ಬರೆದಿದ್ದರು. ನಂತರ ಅದು ಬೆಳೆದುಕೊಂಡು ಬಂದಿದೆ ಸರ್ಕಾರದಿಂದ ಆಗದೇ ಇರುವ ಕೆಲಸಗಳನ್ನು ಈ ಮಂಡಳಿಯಿಂದ ಮಾಡಬಹುದಾಗಿದೆ ಎಂದರು.

ಅಧ್ಯಕ್ಷರ ಅಧಿಕಾರ ಹೆಸರಿಗೆ ಮಾತ್ರವಲ್ಲ ಇದನ್ನು ನಿಭಾಯಿಸುವುದು ಸುಲಭದ ಕೆಲಸವಲ್ಲ. ಹತ್ತಾರು ಎಂಎಲ್‍ಎಗಳು, ಸಂಸದರು ಎಲ್ಲಾರಿಗೂ ಅನುದಾನ ನೀಡಿ ಅಭಿವೃದ್ಧಿ ಮಾಡಬೇಕಾಗಿದೆ. ಆದರೆ ಪ್ರಸ್ತುತ ಬರಗಾಲದ ಸಂದರ್ಭದಲ್ಲಿ ಜನ ಮೂಲಭೂತ ಸೌಲಭ್ಯಗಳ ಕುರಿತು ಹೆಚ್ಚಿನ ಗಮನ ನೀಡಬೇಕಾಗಿದೆ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಅವರ ಸಹಕಾರದಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನವನ್ನು ತಂದು ಮಲೆನಾಡಿನ ಸಮಸ್ಯೆಗಳ ಕುರಿತು ಪರಿಶೀಲಿಸಿ ಕೆಲಸವನ್ನು ಮಾಡಬೇಕಾಗಿದೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಸರ್ಕಾರದಲ್ಲಿ ಆಗದೇ ಇರುವ ಕೆಲಸಗಳು ಮಲೆನಾಡು ಅಭಿವೃದ್ಧಿ ಮಂಡಳಿಯಿಂದ ಮಾಡಲು ಅವಕಾಶ ಇದೆ. ಮಲೆನಾಡಿನ ಅನೇಕ ಸಮಸ್ಯೆಗಳು ಮತ್ತು ತುರ್ತು ಸಂದರ್ಭದ ಕೆಲಸಗಳನ್ನು ಮಾಡಬಹುದು ಮುಂದಿನ ದಿನಗಳಲ್ಲಿ ಮಲೆನಾಡು ಪ್ರದೇಶದ ಪ್ರತಿ ಭಾಗದಲ್ಲಿಯೂ ಉತ್ತಮವಾದ ಕೆಲಸಗಳನ್ನು ಮಾಡಲಿದ್ದೇವೆ. ಸರ್ಕಾರ ಇನ್ನೂ ನಾಲ್ಕು ವರ್ಷಗಳ ಕಾಲವೂ ಉತ್ತಮ ಆಡಳಿತ ನೀಡಲಿದೆ. ಆರ್ಥಿಕ ಸಂಕಷ್ಟ ಬರಗಾಲದಲ್ಲೂ ಗ್ಯಾರಂಟಿ ಯೋಜನೆಗಳು ಜನರಿಗೆ ನೀಡಲಾಗಿದೆ. ಅದೇ ರೀತಿ ಎಲ್ಲಾ ನಿಗಮಗಳಿಗೂ ಹಣ ನೀಡಿ ಅಭಿವೃದ್ಧಿ ಕಡೆ ಹೆಚ್ಚು ಗಮನವನ್ನು ನೀಡಲಿದ್ದು ವಿಶೇಷವಾಗಿ ಮಲೆನಾಡಿನ ಅಭಿವೃದ್ಧಿಯ ಕಾರ್ಯ ನಡೆಲಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ, ಚನ್ನಗಿರಿಯ ಶಾಸಕ ಬಸವರಾಜ್ ಶಿವಗಂಗಾ, ಸೂಡ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್, ಮಾಜಿ ಸಂಸದರಾದ ಆಯನೂರು ಮಂಜುನಾಥ, ಮುಖಂಡರಾದ ಎಂ ಶ್ರೀಕಾಂತ್,ಮರಿಯಪ್ಪ, ಬಲ್ಕಿಶ್ ಬಾನು, ಗೋಣಿ ಮಾಲತೇಶ್, ಗೀತಾ ರಮೇಶ್, ಮೈಲಾರಪ್ಪ ಮತ್ತು ಅಧಿಕಾರಿ ವರ್ಗದವರು ಸಿಬ್ಬಂದಿಗಳು ಇದ್ದರು.

Leave A Reply

Your email address will not be published.

error: Content is protected !!