ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸೇವೆ ಪರಮ ಶ್ರೇಷ್ಟ ಸೇವೆ ; ಶಾಸಕ ಹರತಾಳು ಹಾಲಪ್ಪ

ರಿಪ್ಪನ್‌ಪೇಟೆ: ಜಗತ್ತೇನೆ ತಲ್ಲಣಗೊಳಿಸಿದ ಕರೋನ ಮಹಾಮಾರಿಯ ಸಂದರ್ಭದಲ್ಲಿ ಹಗಲಿರುಳು ತಾಯಿಯಂತೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಸಮಾಜದ ರಕ್ಷಣೆಗಾಗಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇವೆ ಮಾಡಿ ದೇಶಕ್ಕೆ ಮಾದರಿಯಾಗಿದ್ದಾರೆಂದು ಕ್ಷೇತ್ರದ ಶಾಸಕ ಹಾಗೂ ಎಂ.ಎಸ್.ಐ.ಎಲ್.ಅಧ್ಯಕ್ಷ ಹರತಾಳು ಹಾಲಪ್ಪ ಪ್ರಶಂಶೆ ವ್ಯಕ್ತಪಡಿಸಿದರು.


ರಿಪ್ಪನ್‌ಪೇಟೆ ಸಮೀಪದ ಹರತಾಳು ಗ್ರಾಮದ ಶ್ರೀರಾಘವೇಂದ್ರ ಸ್ವಾಮಿ ಮಠದ ಸಭಾ ವನದಲ್ಲಿ ಆಯೋಜಿಸಲಾದ ಅಂಗನವಾಡಿ ಹಾಗೂ ಅಶಾ ಕಾರ್ಯಕರ್ತೆಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆ ಮಾಡಿ ಮಾತನಾಡಿದ ಅವರು, ಸರ್ಕಾರದ ಕನಿಷ್ಟ ವೇತನದ ನೌಕರರಾಗಿದ್ದರು ಸಹ ಗರಿಷ್ಟ ಮಟ್ಟದ ಸಮಾಜ ಸೇವೆಯನ್ನು ಮಾಡುತ್ತಾ ಹಗಲಿರುಳು ಶ್ರಮಿಸುತ್ತಿರುವ ಅಂಗನವಾಡಿ ಹಾಗೂ ಅಶಾ ಕಾರ್ಯಕರ್ತೆಯರುಗಳ ಸಾರ್ಥಕ ಸೇವೆಯನ್ನು ಪರಿಗಣಿಸಿ ಅವರುಗಳಿಗೆ ಅಭಿನಂದನೆಗಳ ಜೊತೆ ಗೌರವ ಸಮರ್ಪಣೆ ಮಾಡುತ್ತಿರುವುದು ನನಗೆ ಸಂತಸ ತಂದಿದೆ. ರಾಜಕಾರಣ ಅದರಲ್ಲೂ ಶಾಸಕರಾದವರಿಗೆ ಜನಸಾಮಾನ್ಯದ ಮೇಲೆ ಪ್ರೀತಿ ವಿಶ್ವಾಸ ಅನುಕಂಪ ಕರುಣೆಗಳ ಜೊತೆಗೆ ಅಭಿವೃದ್ದಿ ಕಾರ್ಯಗಳ ಅರಿವಿದ್ದರೆ ಮಾತ್ರ ಆತ ಓರ್ವ ಒಳ್ಳಯ ಶಾಸಕನಾಗಬಹುದು ಅದು ಬಿಟ್ಟು ಶಾಸನ ಸಭೆಯಲ್ಲಿ ಜನರ ಸಂಕಷ್ಟಗಳ ಬಗ್ಗೆ ಹಾಗೂ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಇಂದು ಅಕ್ಷರ ಮಾತನಾಡದೇ ಬಣ್ಣ ಬಣ್ಣದ ವಸ್ತ್ರವನ್ನು ಧರಿಸಿ ಶುಭಸಮಾರಂಭಗಳು
ಕ್ರೀಡಾಕೂಟಗಳ್ಲಿ ಭಾಗವಹಿಸಿ ನಾಗರೀಕರ ಹೆಗಲ ಮೇಲೆ ಕೈಹಾಕಿ ಫೋಟೋ ಪೋಸ್ ಕೊಟ್ಟರೆ ಸಾಕಾ ಎಂದು ಮಾಜಿ ಶಾಸಕರ ಬಗ್ಗೆ ವ್ಯಂಗ್ಯವಾಡಿದರು.


ನಾಡುಕಂಡ ಮಹಾನ್ ಹೋರಾಟಗಾರ ಬಡವರ ಬಂಧು ಬಂಗಾರಪ್ಪರವರ ಗರಡಿಯಲ್ಲಿ ಬೆಳೆದ ನನಗೆ ಹೋರಾಟ ಮತ್ತು ಅಭಿವೃದ್ದಿ ಬಗ್ಗೆ ಒಂದಿಷ್ಟು ಅರಿವಿದೆ.ಅದು ಬಿಟ್ಟು ಕ್ಷೇತ್ರದ ಅಭಿವೃದ್ದಿ ಮತ್ತು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಜನಸಾಮಾನ್ಯರ ಸಂಕಷ್ಟಗಳ ಬಗ್ಗೆ ಯಾವುದೇ ಅರಿವಿಲ್ಲದೆ ಹಾಗೆಯೇ ಪರಿಶೀಲನೆ ಮಾಡದೇ ಹಾಗೂ ಶಾಸನ ಸಭೆಯಲ್ಲಿ ಚರ್ಚಿಸದೇ ಎರಡು ಭಾರಿ ನಾನು ಶಾಸಕನಾಗಿದ್ದೇ ಎನ್ನುವ ಪರಿಕಲ್ಪನೆಯಲ್ಲಿ ಬೀಗುವ ಮಾಜಿ ಶಾಸಕರು ಕ್ಷೇತ್ರದಲ್ಲಿ ಜನಮಾನಸದಲ್ಲಿ ಉಳಿಯುವಂತಹ ಯಾವ ಅಭಿವೃದ್ದಿ ಕಾರ್ಯವನ್ನು ಮಾಡಿದ್ದಾರೆಂದು ಸಾಬೀತು ಪಡಿಸಲಿ ಎಂದು ಟೀಕಿಸಿದರು.


ಹಾಲಪ್ಪ ಮತ್ತು ರಾಘಪ್ಪ ಕ್ಷೇತ್ರದ ಅಭಿವೃದ್ದಿಯ ಡಬಲ್ ಇಂಜಿನ್ :

ಸಂಸದ ಬಿ.ವೈ.ರಾಘವೇಂದ್ರ ಮತ್ತು ನಾನು ರಾಜ್ಯ ಮತ್ತು ಕೇಂದ್ರ ಸರ್ಕರದ ಅನುದಾನದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳಿಗೆ ಮೊದಲ ಆಧ್ಯತೆ ನೀಡುವುದರ ಮೂಲಕ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಯ ಕುರಿತು ಹಗಲಿರುಳು ಶ್ರಮಿಸುತ್ತಿದ್ದು ನಾವುಗಳಿಬ್ಬರು ಡಬಲ್ ಇಂಜಿನ್ ಇದ್ದಂತೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ರಾಜ್ಯದ ಬಿಎಸ್‌ವೈ ಹಾಗೂ ಈಗಿನ ಬಸವರಾಜ್ ಬೊಮ್ಮಾಯಿ ಸರ್ಕಾರ ಡಬಲ್ ಇಂಜಿನ್ ಸರ್ಕಾರದಂತೆ ವ್ಯಾಖ್ಯಾನಿಸಿದರು.


ತಾ.ಪಂ.ಮಾಜಿ ಅಧ್ಯಕ್ಷ.ವೀರೇಶ್ ಆಲವಳ್ಳಿ, ಬಿಜೆಪಿ ತಾಲ್ಲೂಕ್ ಅಧ್ಯಕ್ಷ ಗಣಪತಿ ಬಿಳಗೋಡು, ಜಿ.ಪಂ.ಮಾಜಿ ಸದಸ್ಯೆ ಎ.ಟಿ.ನಾಗರತ್ನ, ತಾಲ್ಲೂಕ್ ಪಂಚಾಯ್ತಿ ಮಾಜಿ ಸದಸ್ಯೆ ಸರಸ್ವತಿ, ಕಲ್ಲಿಯೋಗೇಂದ್ರ, ಶ್ವೇತಾ, ಪ್ರೇಮ ಪುರುಷೋತ್ತಮ್, ಶೀಲಗಂಗಾನಾಯ್ಕ್, ಸಿಡಿಪಿಓ ಶಶಿರೇಖಾ ಇನ್ನಿತರರು ಹಾಜರಿದ್ದರು.
ಬಿ.ಸರಸ್ವತಿ ಪ್ರಾರ್ಥಿಸಿದರು. ವೇದಾವತಿ ಸ್ವಾಗತಿಸಿದರು. ಶೀಲಾ ಗಂಗಾನಾಯ್ಕ್ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,755FollowersFollow
0SubscribersSubscribe
- Advertisement -spot_img

Latest Articles

error: Content is protected !!