‘ಪುಸ್ತಕ ಜೋಳಗೆ’ ಕಾರ್ಯಕ್ರಮದಡಿ ಹಳೆಯ ಪುಸ್ತಕಗಳನ್ನ ಹಿಂಡ್ಲೆಮನೆ ಷಣ್ಮುಖಪ್ಪನವರಿಂದ ಕೋಡೂರು ಡಿಜಿಟಲ್ ಗ್ರಂಥಾಲಯಕ್ಕೆ ದಾನ

0 9

ರಿಪ್ಪನ್‌ಪೇಟೆ : ಪುಸ್ತಕ ಜೋಳಗೆ ಕಾರ್ಯಕ್ರಮದಡಿ ಸುಮಾರು 60 ಕ್ಕೂ ಹೆಚ್ಚು ಹಳೆಯ ಪುಸ್ತಕಗಳನ್ನ ಕರಿಗೆರಸು ಗ್ರಾಮದ ಹಿಂಡ್ಲೆಮನೆ ಕೆ. ಷಣ್ಮುಖಪ್ಪನವರು ಕೋಡೂರು ಡಿಜಿಟಲ್ ಗ್ರಂಥಾಲಯಕ್ಕೆ ದಾನ ರೂಪದಲ್ಲಿ ಕೊಡಲಾಯಿತು.

ಮಂಗಳವಾರ ಕೊಡೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳು ಷಣ್ಮುಖಪ್ಪನವರ ಮನೆಗೆ ತೆರಳಿ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯಕ್ಕೆ ಪುಸ್ತಕ ಜೋಳಗೆ ಕಾರ್ಯಕ್ರಮದಡಿ ಹಳೆಯ ಪುಸ್ತಕಗಳನ್ನ ದಾನ ರೂಪದಲ್ಲಿ ಪಡೆದರು‌.
ಈ ಸಂದರ್ಭದಲ್ಲಿ ಷಣ್ಮುಖಪ್ಪನವರನ್ನು ಗ್ರಾಮ ಪಂಚಾಯಿತಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಸುಮಾರು 89 ವರ್ಷ ಪ್ರಾಯದ ಇವರು ಕುಣಬಿ ಜನಾಂಗದ ಬಗ್ಗೆ ‘ಮರಾಟಿ ಕುಣಬಿಗಳು ಬುಡಕಟ್ಟು ಅಧ್ಯಯನ’ ಎಂಬ ಕಿರು ಹೊತ್ತಿಗೆಯನ್ನು ರಚನೆ ಮಾಡಿದ್ದು ಈ ವಿಚಾರವಾಗಿ ತೀರ್ಥಹಳ್ಳಿ ಪ್ರಾಧ್ಯಾಪಕ ಡಾ. ಜೆ.ಕೆ ರಮೇಶ್ ಇವರು ಷಣ್ಮುಖಪ್ಪರವರ ಅನುಭವಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸಿ ಬಿಡುಗಡೆ ಮಾಡಿರುತ್ತಾರೆ.

ಇನ್ನೂ ವಿಶೇಷವೆಂದರೆ ಕಡು ಬಡತನದಲ್ಲಿ ಹುಟ್ಟಿದ ಇವರು ಬಾಲ್ಯದಲ್ಲಿ ಶಾಲೆಯ ಮೆಟ್ಟಿಲನ್ನೆ ಹತ್ತದ ಇವರು ಮರಳು ಮತ್ತು ಮರದ ಎಲೆಗಳ ಮೇಲೆ ಅಕ್ಷರ ಅಭ್ಯಾಸ ಮಾಡಿ ವಿದ್ಯೆ ಕಲಿತಿದ್ದಾರೆ. ಇವರು ಶಾಲೆಗೆ ಹೋಗಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಆಂಗ್ಲ ಭಾಷೆಯನ್ನು ಸಹ ಓದಲು ಹಾಗೂ ಬರೆಯಲು ಬಲ್ಲವರಾಗಿದ್ದಾರೆ. ಕುಶಲ ಕರ್ಮಿಗಳು ಆದ ಇವರು ಇದೀಗ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಇವರು ಸಂಗ್ರಹಿಸಿರು‌ವ ಪುಸ್ತಕಗಳನ್ನು ಹಾಳು ಮಾಡದೆ ಇನ್ನೊಬ್ಬರಿಗೆ ದಾರಿ ದೀಪವಾಗಲಿ ಎಂದು ಗ್ರಂಥಾಲಯಕ್ಕೆ ದಾನ ನೀಡಿರುತ್ತಾರೆ.


ಈ ದಾನಿಗಳಿಗೆ ಗ್ರಾಮ ಪಂಚಾಯಿತಿಯಿಂದ ಹೃತ್ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸಿ ಪುಸ್ತಕ ಜೋಳಗೆ ಕಾರ್ಯಕ್ರಮದಡಿ ಪುಸ್ತಕಗಳನ್ನ ದಾನವಾಗಿ ಪಡೆದರು.

Leave A Reply

Your email address will not be published.

error: Content is protected !!