ಫೆ.14 ರಂದು ವಡಗೆರೆ ತುಳಜಾ ಭವಾನಿ ದೇವಸ್ಥಾನದ ಪ್ರತಿಷ್ಠಾವರ್ಧಂತ್ಯುತ್ಸವ

0 9


ರಿಪ್ಪನ್‌ಪೇಟೆ: ಸಮೀಪದ ವಡಗೆರೆ ಶ್ರೀ ತುಳಜಾಭವಾನಿ ದೇವಸ್ಥಾನ ಸೇವಾ ಸಮಿತಿಯವರು ಆರನೇ ವರ್ಷದ ಶ್ರೀತುಳಜಾಭವಾನಿ ದೇವಸ್ಥಾನನದ ಪ್ರತಿಷ್ಟಾವರ್ಧಂತ್ಯುತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಫೆಬ್ರವರಿ 14 ರಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದೆ ಎಂದು ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಮುಕುಂದ್ ಸಿಂಗ್ ತಿಳಿಸಿದರು.


ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಫೆ 13 ರಂದು ಸಂಜೆ 6 ಗಂಟೆಗೆ ಗುರು ಪ್ರಾರ್ಥನೆ, ಶ್ರೀಗಣಪತಿ ಪೂಜೆ ಪುಣ್ಯಾಹ, ಮಹಾಸಂಕಲ್ಪ ಹಾಗೂ ಕಲಸ ಸ್ಥಾಪನೆ ಫೆ. 14 ರಂದು ಬೆಳಗೆಗೆ 8 ಗಂಟೆಗೆ ಶ್ರೀದೇವಿಗೆ ಕಲಾತತ್ವಾದಿವಾಸ ಹೋಮ,ಶ್ರೀದುರ್ಗಾ ಹೋಮ ಕಲಶಾಭಿಷೇಕ, ಮಹಾಪೂಜೆ ನಂತರ ಸಾಮೂಹಿಕ ಅನ್ನಸಂತರ್ಪಣೆ ಜರುಗಲಿದೆ.


ಬೆಳಗ್ಗೆ 11 ಗಂಟೆಗೆ ಶ್ರೀನಾರಾಯಣಗುರು ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಮಹಾಸ್ವಾಮಿಜಿ ದಿವ್ಯಸಾನಿಧ್ಯದಲ್ಲಿ ಧರ್ಮಸಭೆ ಜರುಗಲಿದ್ದು ಈ ಧಾರ್ಮಿಕ ಧರ್ಮಸಭೆಗೆ ರಾಜಕೀಯ ಮುಖಂಡರು ಭಾಗವಹಿಸುವರು.


ಈ ಧಾರ್ಮಿಕ ಧರ್ಮಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಮುಕುಂದ್‌ಸಿಂಗ್ ವಹಿಸುವರು.

Leave A Reply

Your email address will not be published.

error: Content is protected !!