ಬಿಲ್ಲೇಶ್ವರ ಶಾಲೆಯ ಶಿಕ್ಷಕರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಸುಳ್ಳು ದೂರು ಆರೋಪ ; ವಿದ್ಯಾರ್ಥಿಗಳು, ಪೋಷಕರಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ

0 66


ರಿಪ್ಪನ್‌ಪೇಟೆ: ಸಮೀಪದ ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ಲೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಶಿಕ್ಷಕರಿಬ್ಬರ ದುರುದ್ದೇಶದಿಂದ ಸುಳ್ಳು ಪ್ರಕರಣ ದಾಖಲಿಸಿದ್ದಾರೆಂದು ಆರೋಪಿಸಿ ಇಂದು ಶಾಲಾಭಿವೃದ್ದಿ ಸಮಿತಿಯವರು ಪೋಷಕರು ಹಾಗೂ ಸಾರ್ವಜನಿಕರು ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಸುಳ್ಳು ದೂರು ದಾಖಲಿಸಿದ ಪೋಷಕರ ವಿರುದ್ದ ಪ್ರತಿಭಟನೆ ನಡೆಸುವುದರೊಂದಿಗೆ ತರಗತಿಯನ್ನು ಬಹಿಷ್ಕರಿಸಿ ಧರಣಿ ನಡೆಸಿದರು.


ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು, ನಮಗೆ ಮೇಲ್ಕಂಡ ಶಿಕ್ಷಕರು ಬರುವವರೆಗೂ ನಾವು ತರಗತಿಗೆ ಹೋಗುವುದಿಲ್ಲ ಎಂದು ಹಠ ಹಿಡಿದು ತಮ್ಮ ಪೋಷಕರೊಂದಿಗೆ ರಾಜ್ಯಹೆದ್ದಾರಿಯ ಶಾಲಾ ಮುಂಭಾಗ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ತೀರ್ಥಹಳ್ಳಿ ಡಿವೈಎಸ್‌ಪಿ ಗಜಾನನ ವಾಮನ ಸುತಾರ್ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ ಭೇಟಿ ನೀಡಿ ಪ್ರತಿಭಟನಾ ನಿರತರ ವಿದ್ಯಾರ್ಥಿಗಳ ಬಳಿ ಅಹವಾಲು ಆಲಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ತಬ್ಬಿಬ್ಬಾದ ಅಧಿಕಾರಿಗಳು ಇಂತಹ ವಿಚಾರವನ್ನು ಮಕ್ಕಳ ಎದುರು ಹೇಳಲು ಸಾಧ್ಯವಿಲ್ಲ ಪೊಷಕರರೊಂದಿಗೆ ಸಮಾಲೋಚನೆ ನಡೆಸಿ ನ್ಯಾಯ ಕೊಡಿಸುವ ಭರವಸೆಯನ್ನು ನೀಡಿದ ಹಿನ್ನಲೇಯಲ್ಲಿ ವಿದ್ಯಾರ್ಥಿಗಳು ಸಮದಾನ ಚಿತ್ತರಾಗಿ ಪೋಷಕರ ಹಾಗೂ ಅಧಿಕಾರಿಗಳ ಸಮಲೋಚನೆಗೆ ಸಹಮತ ವ್ಯಕ್ತಪಡಿಸಿದರು.


ಪ್ರತಿಭಟನಾಕಾರೊಂದಿಗೆ ಶಾಲಾ ಆವರಣದಲ್ಲಿ ಚರ್ಚಿಸುವ ಮೂಲಕ ಕಾಯ್ದೆಯಡಿ ಯಾರಿಗೂ ಏನು ತಿಳಿಯದು ಪಾರದರ್ಶಕ ತನಿಖೆಯಿಂದ ಶಾಲಾ ಶಿಕ್ಷಕರನ್ನು ಮತ್ತು ವಿದ್ಯಾರ್ಥಿ ಸಮೂಹದೊಂದಿಗೆ ಪ್ರತ್ಯೇಕ ಮಾಹಿತಿ ಪಡೆದು ನ್ಯಾಯಾಲಯಕ್ಕೆ ವರದಿ ಸಲ್ಲಿಸುವುದಾಗಿ ಹೇಳಿ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು.


ಪ್ರತಿಭಟನಾ ನೇತೃತ್ವವನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಮಂಜುನಾಥ, ನಾಗಭೂಷಣ,ಗಣೇಶ್ ಬಿಲ್ಲೇಶ್ವರ, ಸತೀಶ್,ಎಸ್ ರಾಜು ಗರ್ತಿಕೆರೆ, ಅಭಿಷೇಕ, ಕಿರಣಕುಮಾರ್, ರಾಮಪ್ಪ, ಹೆಚ್.ಎನ್.ಗುರುರಾಜಭಂಡಾರಿ, ಸಚಿನ್, ಎನ್.ರಾಘವೇಂದ್ರ,
ಸತೀಶ್ ಈರನಬೈಲು, ಕೆ.ವೈ.ಮಂಜುನಾಥ, ಕೆ.ಈ.ಗಣೇಶ್, ಕಿರಣ ಇನ್ನಿತರ ಊರಿನ ಗ್ರಾಮಸ್ಥರು ಪಾಲ್ಗೊಂಡು ನಂತರ ಹುಂಚ ನಾಡಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಉಪತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು ಮತ್ತು ತೀರ್ಥಹಳ್ಳಿ ಡಿವೈಎಸ್‌ಪಿಯವರಿಗೂ ಮನವಿ ಸಲ್ಲಿಸಿದರು.

Leave A Reply

Your email address will not be published.

error: Content is protected !!