ರಿಪ್ಪನ್‌ಪೇಟೆ: ಮಹಾಶಿವರಾತ್ರಿಯ ಅಂಗವಾಗಿ ಸಮೀಪದ ಇತಿಹಾಸ ಪ್ರಸಿದ್ದ ಉದ್ಭವ ಶ್ರೀ ಕಂತೆ ಸಿದ್ದೇಶ್ವರ ಸ್ವಾಮಿಗೆ ಗುರುಗಳ ಸಮ್ಮುಖದಲ್ಲಿ ರುದ್ರಾಭಿಷೇಕ ವಿಶೇಷ ಪೂಜಾ ಕಾರ್ಯಕ್ರಮವು ಸಡಗರ ಸಂಭ್ರಮದೊಂದಿಗೆ ಸಂಪನ್ನಗೊಂಡಿತು.
ಇಂದು ಬೆಳಗ್ಗೆ ಗುರುಗಳ ಸಮ್ಮುಖದಲ್ಲಿ ಸ್ವಾಮಿಗೆ ರುದ್ರಾಭಿಷೇಕ ಅಭಿಷೇಕ ಪೂಜೆ ವಿಶೇಷ ಅಲಂಕಾರದೊಂದಿಗೆ ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯವು ಜರುಗಿತು. ನಂತರ ತೀರ್ಥ ಪ್ರಸಾದ ವಿತರಣೆ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.
ದೊಡ್ಡಿನಕೊಪ್ಪ, ಬೈರಾಪುರ, ಮುಡುಬ, ರಿಪ್ಪನ್‌ಪೇಟೆ, ಕೆದಲುಗುಡ್ಡೆ, ಕಲ್ಮಕ್ಕಿ, ಬೆಳಂದೂರು, ಮಸರೂರು, ಆಲವಳ್ಳಿ, ಕೆಂಚನಾಲ, ದೂನ, ಬೆನವಳ್ಳಿ, ಅರಸಾಳು, ರಿಪ್ಪನ್‌ಪೇಟೆ, ಕೆರೆಹಳ್ಳಿ ಇನ್ನಿತರ ಸುತ್ತಮುತ್ತಲಿನ ಗ್ರಾಮಗಳ ಭಕ್ತ ಸಮೂಹ ಭಾಗವಹಿಸಿ ಕಂತೆ ಸಿದ್ದೇಶ್ವರ ಸ್ವಾಮಿಯ ದರ್ಶನಾಶೀರ್ವಾದ ಪಡೆದರು.