ಕೋಣಂದೂರು ಬೃಹನ್ಮಠದಲ್ಲಿ ಧರ್ಮ ಸಮಾರಂಭ | ಲಿಂಗೈಕ್ಯ ಶಿವಲಿಂಗ ಶಿವಾಚಾರ್ಯ ಶ್ರೀಗಳ ಪುಣ್ಯಾರಾಧನೆ ಲೋಕಕಲ್ಯಾಣಾರ್ಥ ರುದ್ರಹೋಮ

0 41

ರಿಪ್ಪನ್‌ಪೇಟೆ: ಲಿಂಗೈಕ್ಯ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ ಮತ್ತು ಮಳೆಗಾಗಿ ಚಾಡೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ರುದ್ರಹೋಮ ಅಗ್ನಿ ಹೋಮ ಸುಸಂಪನ್ನಗೊಂಡಿತು.


ಲಿಂಗೈಕ್ಯ ಶಿವಲಿಂಗ ಶ್ರೀಗಳ ಪುಣ್ಯಾರಾಧನೆ ಧರ್ಮ ಸಮಾರಂಭದ ದಿವ್ಯಸಾನಿಧ್ಯವನ್ನು ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು.

ತೊಗರ್ಸಿ ಮಳೆಹಿರೇಮಠದ ಮಹಾಂತ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ಧರ್ಮಸಭೆಯ ಸಾನಿಧ್ಯ ವಹಿಸಿ ಮಠ ಮತ್ತು ಭಕ್ತರೊಂದಿಗಿನ ಸಂಬಂಧಗಳು ನಿರಂತರವಾಗಿರಬೇಕು. ಸಮಾಜ ಶ್ರಯೋಭಿವೃದ್ದಿಗಾಗಿ ಮಠಗಳು ಶ್ರಮಿಸುತ್ತಿದ್ದು ಶ್ರೀಮಂತ ಬಡವ ಎಂಬ ತಾರತಮ್ಯ ಭಾವನೆಯಿಂದ ಮಠಗಳು ಎಂದು ಕಾಣದೇ ಎಲ್ಲರನ್ನು ಸಮಾನ ದೃಷ್ಟಿಯಲ್ಲಿ ಕಾಣುವಂತಾಗಿರುವುದಕ್ಕೆ ಕೋಣಂದೂರು ಮಠದಲ್ಲಿನ ಭಕ್ತರ ಸಮೂಹವೇ ಸಾಕ್ಷಿಯಾಗಿದೆ ಎಂದು ಹೇಳಿ, ಹಿಂದಿನ ಲಿಂಗೈಕ್ಯ ಶ್ರೀಗಳ ಪುಣ್ಯಾರಾಧನೆಗೆ ಓಲೆ ಕಳುಹಿಸದೇ ಸರಳವಾಗಿ ಆಚರಿಸುವ ಸಂದರ್ಭದಲ್ಲಿ ಭಕ್ತರು ಪಾಲ್ಗೊಂಡಿರುವುದು ಕಂಡರೇ ಭಕ್ತರ ಮತ್ತು ಶ್ರೀಗಳವರಲ್ಲಿನ ಸಂಬಂಧ ಎಷ್ಟು ಅನೂನ್ಯವಾಗಿದೆ ಎಂಬುದಕ್ಕೆ ಸಾಕ್ಷಿಯಾಗುತ್ತದೆಂದರು.

ಲೋಕಕಲ್ಯಾಣಾರ್ಥವಾಗಿ ಆಯೋಜಿಸಲಾದ ರುದ್ರಹೋಮ ಅಗ್ನಿ ಹೋಮ, ಗಣಹೋಮವನ್ನು ಆರಗದ ಜಯಲಿಂಗಸ್ವಾಮಿ ಮತ್ತು ವೃಂದದ ಪುರೋಹಿತವರ್ಗ ನೆರವೇರಿಸಿದರು.
ಈ ಸಮಾರಂಭದಲ್ಲಿ ಕೋಣಂದೂರು ಉದ್ಯಮಿ ಕೆ.ಆರ್.ಪ್ರಕಾಶ್, ಬೆಳಕೋಡು ಹಾಲಸ್ವಮಿಗೌಡ, ಜಂಬಳ್ಳಿ ನಾಗಭೂಷಣಗೌಡ, ಜೆ.ಜಿ.ಸದಾನಂದಗೌಡ ಜಂಬಳ್ಳಿ, ತಳಗಿಬೈಲು ವೀರಣ್ಣಗೌಡರು, ದೇವೇಂದ್ರಪ್ಪಗೌಡ ನೆವಟೂರು, ರವೀಂದ್ರಗೌಡರು, ಆದರ್ಶ ಬೆಳಂದೂರು, ಬೆನವಳ್ಳಿ ಸರ್ವೇಯರ್ ಗಂಗಾಧರಗೌಡರು, ಜಳಬೈಲು ಮಲ್ಲಿಕಾರ್ಜುನ, ವಾಗೇಶಯ್ಯ ಕೋಣಂದೂರು, ಇನ್ನಿತರರು ಪಾಲ್ಗೊಂಡಿದ್ದರು‌.

ಇದೇ ಸಂದರ್ಭದಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜಾ ಕಾರ್ಯವನ್ನು ನೆರವೇರಿಸುತ್ತಿದ್ದಂತೆ ಇಳೆಯು ಭುವಿಗೆ ತಂಪೆರೆಯಿತು. ಸೇರಿದ ಭಕ್ತರ ಮುಖದಲ್ಲಿ ಮಂದಹಾಸ ಮೂಡಿತು.

Leave A Reply

Your email address will not be published.

error: Content is protected !!