ಶಿವಮೊಗ್ಗ : ಪದೇ ಪದೇ ಸಂಚಾರಿ ನಿಯಮ (Traffic Rules) ಉಲ್ಲಂಘಿಸಿದ ಒಂದೇ ಬೈಕ್ಗೆ ಒಂದೂವರೆ ಮೀಟರ್ಗೂ ಹೆಚ್ಚು ಉದ್ದದ ರಶೀದಿ ಬಿಲ್ ಜೊತೆಗೆ 17 ದಂಡ (Penalty) ವಿಧಿಸಿದ ಘಟನೆ ನಡೆದಿದೆ.
ಸಿಗ್ನಲ್ ಜಂಪಿಂಗ್, ಹೆಲ್ಮೆಟ್ ರಹಿತ ಚಾಲನೆ, ಮೊಬೈಲ್ ಬಳಕೆಯ ಚಾಲನೆಯಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ನಿಮ್ಮನ್ನು ಕೇವಲ ಟ್ರಾಫಿಕ್ ಪೊಲೀಸರು (Traffic Police) ಪತ್ತೆ ಹಚ್ಚಬೇಕಾಗಿಲ್ಲ. ತಪ್ಪು ಮಾಡಿದರೆ ಮುಲಾಜಿಲ್ಲದೇ ನಿಮಗೆ ಇರುವ ನೂರಾರು ಸಿಸಿ ಕ್ಯಾಮೆರಾಗಳು ದಂಡ ಹಾಕುತ್ತವೆ.
ಏನಿಲ್ಲವೆಂದರು ಕಷ್ಟಪಟ್ಟು ಮಾರಿದರೆ 10 ಸಾವಿರಕ್ಕೆ ಮಾರಬಹುದಾದ ಡಿಯೋ ಸ್ಕೂಟಿಯೊಂದಕ್ಕೆ ಬರೊಬ್ಬರಿ 17 ಸಾವಿರ ರೂಪಾಯಿ ದಂಡ ಬಿದ್ದಿದೆ. ಈ ದಂಡವನ್ನು ಚಾಲಕ ನೀಡಿದ್ದಾನೆ. ಅದೂ ಸಹ ದಂಡದ ರಶೀದಿ ಬಿಲ್ಗಳು ಸುಮಾರು ಒಂದೂವರೆ ಮೀಟರ್ನಷ್ಟು ಉದ್ದ ಇದೆ ಎಂದರೆ ನಂಬುತ್ತೀರಾ?
ಹೌದು.., ಇದು ನಂಬಲೇ ಬೇಕಾದ ಸತ್ಯ ಘಟನೆ. ಶಿವಮೊಗ್ಗ ಸಂಚಾರಿ ಪೊಲೀಸ್ ಇಲಾಖೆ ದಂಡ ವಿಧಿಸಿದ ಗಾಡಿಗಳನ್ನು ಪತ್ತೆ ಹಚ್ಚುವ, ವಶಕ್ಕೆ ಪಡೆಯುವ ಕೆಲಸಕ್ಕೆ ಮುಂದಾಗಿದೆ. ಶಿವಮೊಗ್ಗ ಶಿವಪ್ಪನಾಯ್ಕ ಸರ್ಕಲ್ ಬಳಿ ಸಿಕ್ಕಿಕೊಂಡ ಡಿಯೋ ಗಾಡಿಯನ್ನು ಸಂಚಾರಿ ಪೊಲೀಸ್ ಠಾಣೆ ಮುಖ್ಯ ಕಾನ್ಸ್ಸ್ಟೇಬಲ್ ಸುರೇಶ್ ಅವರು ಪತ್ತೆ ಹಚ್ಚಿ ಠಾಣೆಗೆ ಒಪ್ಪಿಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯ ಎ.ಎಸ್.ಐ ರಾಜಕುಮಾರ್ ಅವರು ದಂಡದ ಬಿಲ್ಗಳನ್ನು ನೀಡಿದ್ದಾರೆ.
ಮೊಬೈಲ್ ಸಂಪರ್ಕ ಹೊಂದಿಲ್ಲದ ಇಂತಹ ನೂರಾರು ಗಾಡಿಗಳಿಗೆ ಸಾಕಷ್ಟು ದಂಡ ಬಿದ್ದಿದೆ. ಮಾಲಿಕನಿಗೆ ಗೊತ್ತಿಲ್ಲ. ಎಚ್ಚರದಿಂದ ಓಡಾಡಿ ಎಂಬುದೇ ಇಂದಿನ ಶಿವಮೊಗ್ಗದ ವಿಶೇಷ ಸುದ್ದಿ.
ಬರೊಬ್ಬರಿಗೆ 17 ಸಾವಿರ ದಂಡ ಕಟ್ಟಿದ ವ್ಯಕ್ತಿಯ ಗೋಳು ಶತ್ರುವಿಗೂ ಬೇಡ. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ರಾಘವೇಂದ್ರ ಉಪಸ್ಥಿತರಿದ್ದರು.
ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…
ರಿಪ್ಪನ್ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…
ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…
ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…
ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…