Categories: Sagara NewsShivamogga

ಡಿ. 15 ರಂದು ಮಾಯಾನಗರಿ ಚಲನಚಿತ್ರ ರಾಜ್ಯಾದ್ಯಂತ ಬಿಡುಗಡೆ ; ನಟ ಭರತ್ ಸಾಗರ್

ಸಾಗರ : ಇದೇ ತಿಂಗಳು 15 ರಂದು ಮಾಯಾನಗರಿ (Mayanagari) ಚಲನಚಿತ್ರ (Film) ಲೋಕಾರ್ಪಣೆಯಾಗುತ್ತಿದ್ದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಮಾಯಾನಗರಿ ಚಿತ್ರದ ನಾಯಕ ನಟ ಭರತ್ ಸಾಗರ್ ಅವರು ತಿಳಿಸಿದರು.


ಇಲ್ಲಿನ ಅಣಲೇಕೊಪ್ಪ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಚಲನ ಚಿತ್ರದ ಪೋಷ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ನಾನು ಮಲೆನಾಡಿ ಹುಡುಗನಾಗಿದ್ದು ಸಾಗರದಲ್ಲಿ ಹುಟ್ಟಿ ಬೆಳೆದು ಓದು ನಡೆಸಿದ್ದೇನೆ. ಉದ್ಯೋಗದ ನಿಮಿತ್ತ ಮ್ಯೆಸೂರು ಬೆಂಗಳೂರಿಗೆ ಹೋದಾಗ ಅಕಸ್ಮಾತ್ ಚಲನಚಿತ್ರ ನಿರ್ಮಾಪಕರ ಪರಿಚಯವಾಗಿ ಕೆಲವು ಚಿತ್ರದಲ್ಲಿ ನಟಿಸಿದ್ದೇನೆ. ಈಗ ಮಾಯಾನಗರಿ ಎನ್ನುವ ವಿಭಿನ್ನ ಕಥೆಯುಳ್ಳ ಹಾಗೂ ಕುಟುಂಬ ಸಮೇತವಾಗಿ ಎಲ್ಲರೂ ನೋಡುವಂತ ಹಾರರ್ ಚಲನಚಿತ್ರದಲ್ಲಿ ಹೀರೋ ಆಗಿ ನಟನೆಯನ್ನು ಮಾಡಿದ್ದೇನೆ ಇದನ್ನು ಪ್ರೇಕ್ಷಕರು ನೋಡಿ ಆಶೀರ್ವಾದವನ್ನು ಮಾಡಿ ಎಂದು ಮನವಿ ಮಾಡಿದರು.


ಅನೇಕ ನಾಟಕಗಳಲ್ಲಿ ಅಭಿನಯವನ್ನು ಮಾಡಿದ ನನಗೆ ನಟನೆ ಮಾಡಬೇಕು ಎನ್ನುವುದು ಒಂದು ಕನಸು. ಈ ಕನಸು ಈಗ ಈಡೇರುವ ಕಾಲ ಬಂದಿದೆ. ಮಲೆನಾಡಿನ ಬಗ್ಗೆ ಅತ್ಯಂತ ಗೌರವವನ್ನು ಇಟ್ಟುಕೂಂಡಿರುವ ನನಗೆ ಇಲ್ಲಿನ ಪರಿಸರದ ಮಧ್ಯೆ ನಟನೆ ಮಾಡಿ ಅದನ್ನು ಪರೆದೆಯ ಮೇಲೆ ತರುತ್ತಿರುವುದು ಸಂತೋಷವಾಗುತ್ತಿದೆ. ಸಾಗರ, ಜೋಗ್ ಫಾಲ್ಸ್ ಹಾಗೂ ಅದರ ಸುತ್ತಾಮುತ್ತ, ಚಿಕ್ಕಮಗಳೂರು ಜಿಲ್ಲೆ ಹೀಗೆ ನಿಮ್ಮ ಊರಿನಲ್ಲಿಯೇ ಚಿತ್ರೀಕರಣ ಮಾಡಿದ್ದೇನೆ ಎಂದು ತಿಳಿಸಿದರು.


ಈ ಚಿತ್ರದಲ್ಲಿ ಹೆಸರಾಂತ ಹಿರಿಯ ಕಲಾವಿದರು ನಟನೆಯನ್ನು ಮಾಡಿದ್ದಾರೆ. ಅವಿನಾಶ್, ದ್ವಾರಕೀಶ್, ಲೋಹಿತಾಶ್ವ, ಸುಚೇಂದ್ರಪ್ರಸಾದ್ ಹಾಗೂ ಹಾಸ್ಯ ಕಲಾವಿದರಾಗಿ ಚಿಕ್ಕಣ್ಣ ಅವರು ಪಾತ್ರವನ್ನು ಮಾಡಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ಅರ್ಜುನ್‍ಜನ್ಯ ಸಂಗೀತವನ್ನು ನೀಡಿದ್ದಾರೆ, ಶ್ರಾವ್ಯ ಅವರು ಹೀರೋಯಿನ್ ಆಗಿ ನಟನೆ ಮಾಡಿದ್ದಾರೆ.

ನಾನು ಈಗಾಗಲೆ ಮೂರು ಸಿನಿಮಾದಲ್ಲಿ ನಟನೆಯನ್ನು ಮಾಡಿದ್ದೇನೆ. ಮುಂದೆ ಪೂರ್ಣಾವದಿ ಹೀರೋ ಪಾತ್ರವಿರುವ ಸಿನಿಮಾ ಸದ್ಯದಲ್ಲಿಯೇ ತೆರೆಗೆ ಬರಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಂಜು, ಸತೀಶ್, ವಿಶ್ವ, ಕುಮಾರ್ ಇನ್ನಿತರು ಹಾಜರಿದ್ದರು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

1 day ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

1 day ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

1 day ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

2 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

2 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

2 days ago