ನೀರು, ಗಾಳಿ ಮತ್ತು ಅಗ್ನಿಯೊಂದಿಗೆ ಚೆಲ್ಲಾಟ ಬೇಡ ; ತಹಶೀಲ್ದಾರ್ ರಶ್ಮಿ

0 688

ಹೊಸನಗರ: ಯಾವುದೇ ಅಪಘಾತದ ಸಂದರ್ಭದಲ್ಲಿ ಅಪಾಯದಲ್ಲಿರುವವರ ವ್ಯಕ್ತಿಯ ಜೀವ ಉಳಿಸಬೇಕೆಂದು ದೃಢ ನಿಧಾರ ಮಾಡಿದರೆ ಅಪಾಯದಲ್ಲಿರುವ ವ್ಯಕ್ತಿಯನ್ನು ಉಳಿಸಲು ಸಾಧ್ಯ ಎಂದು ಹೊಸನಗರ ತಹಶೀಲ್ದಾರ್ ಹೆಚ್.ಜೆ ರಶ್ಮಿ ಹೇಳಿದರು.

ಮೂಡುಗೊಪ್ಪ (ನಗರ) ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿದನೂರು ಕೋಟೆಯ ಪಕ್ಕದ ಕೆರೆಯಲ್ಲಿ ಹೊಸನಗರ ಆಗ್ನಿಶಾಮಕ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಪ್ರವಾಹ ಪರಿಸ್ಥಿತಿಯಲ್ಲಿ ನದಿಯಲ್ಲಿ ವ್ಯಕ್ತಿ ಅಥವಾ ಪ್ರಾಣಿ, ಪಕ್ಷಿಗಳು ಕೊಚ್ಚಿಕೊಂಡು ಹೋದಂತಹ ಪರಿಸ್ಥಿತಿಗಳಲ್ಲಿ ಅಥವಾ ಪ್ರಕರಣಗಳಲ್ಲಿ ಅಂತಹವರನ್ನು ಸಂರಕ್ಷಿಸುವ ಬಗ್ಗೆ ಶಿವಮೊಗ್ಗ ಅಗ್ನಿಶಾಮಕ ಅಧಿಕಾರಗಳ ತಂಡದಿಂದ ಅಣಕು ಪ್ರದರ್ಶನವನ್ನು ಏರ್ಪಡಿಸಲಾಗಿದ್ದು ಈ ಸಂದರ್ಭದಲ್ಲಿ ಅವರು ಮಾತನಾಡಿದರು.

ಅಪಾಯದಲ್ಲಿರುವ ವ್ಯಕ್ತಿ ಎಂಥಹ ಸಂದರ್ಭದಲ್ಲಿಯೂ ಹೆದರಬಾರದು ಹೆದರಿದರೇ ಹೃದಯಘಾತವಾಗುವ ಸಂಭವ ಹೆಚ್ಚು. ಧೈರ್ಯದಿಂದ ಇರಬೇಕು ಎಂತಹ ಸಂದರ್ಭದಲ್ಲಿಯೂ ನಾನು ಬದುಕಿ ಬರುತ್ತೇನೆ ಎಂಬ ಛಲ ತೋರಿಸಿ ಹೋರಾಟ ನಡೆಸಬೇಕು ಹಾಗೂ ಅಪಾಯದಲ್ಲಿರುವ ವ್ಯಕ್ತಿಯನ್ನು ಉಳಿಸಲು ಸಾಹಸ ಮಾಡುವವರು ಪೂರ್ವಪರ ಆಲೋಚಿಸಿ ಅಪಾಯದಲ್ಲಿರುವ ವ್ಯಕ್ತಿಯನ್ನು ಯಾವ ರೀತಿಯಲ್ಲಿ ಉಳಿಸಬೇಕು ಎಂದು ಅರಿತು ಮುನ್ನುಗ್ಗಬೇಕು ಇಲ್ಲವಾದರೇ ಅಪಾಯದ ವ್ಯಕ್ತಿ ಮತ್ತು ಸಹಾಯ ಮಾಡಲು ಹೋದ ವ್ಯಕ್ತಿಗಳಿಬ್ಬರಿಗೂ ಅಪಾಯವಾಗುವ ಸಂಭವವಿದೆ. ಯಾವುದೇ ವ್ಯಕ್ತಿ ನೀರು, ಗಾಳಿ, ಅಗ್ನಿಯೊಂದಿಗೆ ಚೆಲ್ಲಾಟ ಮಾಡಬಾರದು. ಇವುಗಳು ಒಂದಲ್ಲ ಒಂದು ರೀತಿಯಲ್ಲಿ ಅಪಾಯವಾಗಿರುತ್ತದೆ. ಸಣ್ಣ ಮಕ್ಕಳನ್ನು ನೀರಿನೊಂದಿಗೆ ಆಟವಾಡಲು ಬಿಡಬಾರದೆಂದು ಈ ಸಂದರ್ಭದಲ್ಲಿ ಜನರಿಗೆ ಜಾಗೃತಿ ಮೂಡಿಸಿದರು.

ಈ ಅಣುಕ ಪ್ರದರ್ಶನದಲ್ಲಿ ಜಿಲ್ಲಾ ಅಗ್ನಿಶಾಮಕ ದಳದ ಸಿಬ್ಬಂದಿ ಮಹಾದೇವಪ್ಪ, ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ ಕೆ.ಡಿ ರಾಜಪ್ಪ, ನಗರ ಪಿಎಸ್‌ಐ ರಮೇಶ್ ಉಪತಹಶೀಲ್ದಾರ್ ಗೌತಮ್, ಸುರೇಶ್ ಆರ್.ಪಿ, ಕಂದಾಯ ಇಲಾಖೆಯ ಪ್ರಥಮ ದರ್ಜೆ ಗುಮಾಸ್ಥರಾದ ಚಿರಾಗ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕರುಣಾಕರ ಶೆಟ್ಟಿ, ಪಿಡಿಒ ರಾಮಚಂದ್ರ, ಕಾಲೇಜಿನ ಪ್ರಾಂಶುಪಾಲರು, ಗ್ರಾಮಸ್ಥರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು‌.

Leave A Reply

Your email address will not be published.

error: Content is protected !!