Categories: ShivamoggaSoraba

ಸಕಲ ಜನ ಸಮುದಾಯದ ಒಳಿತಿಗಾಗಿ ಮಹಾರುದ್ರ ಯಜ್ಞ ; ರಂಭಾಪುರಿ ಶ್ರೀಗಳು

ಸೊರಬ : ಮಾನವ ಜೀವನ ಸುಖ ದು:ಖಗಳಿಂದ ಕೂಡಿದೆ. ಸುಖ ಶಾಂತಿ ನೆಮ್ಮದಿಯ ಬದುಕಿಗಾಗಿ ನಿರಂತರ ಶಿವಜ್ಞಾನ ಮತ್ತು ಪೂಜಾದಿಗಳಿಂದ ನಿರತರಾದವರಿಗೆ ಯಾವುದರ ಭಯ ಭೀತಿಯಿಲ್ಲ. ಸಕಲ ಜನ ಸಮುದಾಯದ ಒಳಿತಿಗಾಗಿ ಮಹಾರುದ್ರ ಯಜ್ಞ ನಡೆದಿರುವುದು ಸಂತೋಷದ ಸಂಗತಿ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಗುರುವಾರ ಸೊರಬ ತಾಲೂಕಿನ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ(ರಿ) ತಾಲೂಕಾ ಘಟಕದ ಆಶ್ರಯದಲ್ಲಿ ಬಂಕಸಾಣ ಹೊಳೆಲಿಂಗೇಶ್ವರ ಜಾಗೃತ ಕ್ಷೇತ್ರದಲ್ಲಿ ಜರುಗಿದ “ಮಹಾರುದ್ರ ಯಜ್ಞ” ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ವಿಶ್ವ ಶಕ್ತಿಗೆ ಮೂಲ ಶಿವ ಶಕ್ತಿ. ಪರಶಿವ ತತ್ವಕ್ಕಿಂತ ಮಿಗಿಲಾದ ತತ್ವ ಈ ಜಗದಲ್ಲಿ ಮತೊಂದಿಲ್ಲ. ವೀರಶೈವ ಧರ್ಮದಲ್ಲಿ ಪಂಚ ಯಜ್ಞಗಳನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಶಿವನಿಗೆ ಸಮರ್ಪಿತವಾದ ಪತ್ರ ಪುಷ್ಪ ಫಲಗಳನ್ನು ಸ್ವೀಕರಿಸುವುದರಿಂದ ಸರ್ವ ಪಾಪ ತಾಪಗಳು ಪರಿಹಾರವಾಗುತ್ತವೆ. ವಿಶ್ವವನ್ನು ಬೆಳಗುವ ಪೂರ್ಣಾಹಂತಾತ್ಮಕವಾದ ಸ್ವಾತ್ಮ ತೇಜದಲ್ಲಿ ಈ ದೃಶ್ಯ ರೂಪವೆಲ್ಲವನ್ನು ಕಾಣಬಹುದು. ರವಿ ಕಿರಣದಿಂದ ಕಮಲ ಅರಳುವಂತೆ ಗುರು ಕಾರುಣ್ಯದಿಂದ ಶಿಷ್ಯನ ಮನ ಅರಳುವುದು. ಸದ್ಗುಣಶೀಲನಾದ ಗುರುವು ಪ್ರಬೋಧಿಸಿ ಪ್ರಚೋದಿಸಿ ಪ್ರೇರಣೆ ನೀಡಲು ಶಿಷ್ಯನ ಜೀವ ಭಾವ ತೊಲಗಿ ಜೀವನ್ಮುಕ್ತನಾಗುವನು. ಸರ್ವ ಜನರ ಸಂಕಲ್ಪ ಸಿದ್ಧಿಗಾಗಿ ಶಾಂತಿ ಸಂತೃಪ್ತಿಯ ಪ್ರಾಪ್ತಿಗಾಗಿ ಕೈಕೊಂಡ 3 ದಿನಗಳ ಮಹಾರುದ್ರ ಯಜ್ಞ ತಾಲೂಕಿನ ಇತಿಹಾಸದಲ್ಲಿ ಇದೇ ಮೊದಲಾಗಿದೆ ಎಂದು ಹರುಷ ವ್ಯಕ್ತಪಡಿಸಿದ ಜಗದ್ಗುರುಗಳು ಸೊರಬ ತಾಲೂಕ ಘಟಕದ ಅಧ್ಯಕ್ಷ ವೇ.ಹಾಲಸ್ವಾಮಿ ಶಾಸ್ತಿçಗಳ ಮುಂದಾಳತ್ವದಲ್ಲಿ ನೂರಾರು ಪುರೋಹಿತರು ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ದುಗ್ಲಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು, ಶಾಂತಪುರ ಶಿವಾನಂದ ಶಿವಾಚಾರ್ಯರು, ಜಡೆ ಡಾ|| ಮಹಾಂತಸ್ವಾಮಿಗಳು, ಕ್ಯಾಸನೂರು ತೊಗರ್ಸಿಯ ಗುರಬಸವ ಪಂಡಿತಾರಾಧ್ಯ ಶಿವಾಚಾರ್ಯರು, ಕಣ್ವಕುಪ್ಪೆ ಶಾಂತಲಿಂಗ ಶಿವಾಚಾರ್ಯರು, ಲಕ್ಕವಳ್ಳಿ ಸ್ವಸ್ತಿ ವೃಷಭಸೇನ ಸ್ವಾಮಿಗಳು ಪಾಲ್ಗೊಂಡು ಉಪದೇಶಾಮೃತವನ್ನಿತ್ತರು. ಹಲವಾರು ವೇದ ವಿದ್ವಾಂಸರಿಗೆ ಗಣ್ಯ ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.

ಅರೆತಲಗಡ್ಡಿ ವಿದ್ವಾನ್ ಶಿವಕುಮಾರ ಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಅ.ಕ.ವೀ.ಪುರೋಹಿತ ಮಹಾಸಭಾದ ರಾಜ್ಯಾಧ್ಯಕ್ಷ ವೇ.ಚನ್ನೇಶ ಶಾಸ್ತ್ರಿ, ಶ್ರೀ ಹೊಳೆಲಿಂಗೇಶ್ವರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜಪ್ಪಗೌಡ್ರು ಬಂಕಸಾಣ, ಜಡೆ ಗ್ರಾ.ಪಂ.ಅಧ್ಯಕ್ಷ ಅಮಿತಗೌಡ್ರು ಇದ್ದರು.

ಸೊರಬದ ಮಲ್ಲಿಕಾರ್ಜುನಸ್ವಾಮಿ ಅರಮನೆಮಠ ಸ್ವಾಗತಿಸಿದರು. ಬಂಕವಳ್ಳಿ ವೀರೇಂದ್ರ ಪಾಟೀಲ ನಿರೂಪಿಸಿದರು. ಮಾರನಬೀಡ ಇಂದ್ರಯ್ಯ ಹಿರೇಮಠ ಇವರಿಂದ ಭಕ್ತಿಗೀತೆ ಜರುಗಿತು. ಹರತಾಳು ವಿಶ್ವಕರ್ಮ ಚಂಡೆ ಬಳಗ, ತೆಲಗುಂದ ಶಾಂತಿನಿಕೇತನ ಇಂಗ್ಲೀಷ್ ಮೀಡಿಯಂ ಸ್ಕೂಲಿನ ಮತ್ತು ಆನವಟ್ಟಿ ಕಲಾಕಾರ್ ನೃತ್ಯ ಶಾಲೆ ಇವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮಕ್ಕೂ ಮುನ್ನ ವರದಾ ನದಿ ತಟದಲ್ಲಿರುವ ಶ್ರೀ ವೀರಭದ್ರಸ್ವಾಮಿ ದೇವಾಲಯದಿಂದ ಹೊಳೆಲಿಂಗೇಶ್ವರ ದೇವಸ್ಥಾನದ ವರಗೆ ಪೂರ್ಣಕುಂಭ ಮಂಗಲ ವಾದ್ಯಗಳೊಂದಿಗೆ ಶ್ರೀ ರಂಭಾಪುರಿ ಜಗದ್ಗುರುಗಳನ್ನು ಬರ ಮಾಡಿಕೊಂಡರು. ಆಗಮಿಸಿದ ಸಹಸ್ರಾರು ಭಕ್ತರಿಗೆ ಅನ್ನ ದಾಸೋಹ ಜರುಗಿತು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

3 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

3 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

3 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

3 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

3 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

3 days ago