ಕೋಣಂದೂರು ಬೃಹನ್ಮಠ ಶ್ರೀಗಳ ಶ್ರಾವಣ ಮಾಸದ ಕಾರ್ಯಕ್ರಮ

Written by Mahesh Hindlemane

Published on:

ರಿಪ್ಪನ್‌ಪೇಟೆ ; ಶ್ರಾವಣ ಮಾಸದ ಅಂಗವಾಗಿ ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿಯವರು ಭಕ್ತರ ಮನೆಮನದಲ್ಲಿ ವೀರಶೈವ ಪವಿತ್ರ ಧರ್ಮಗ್ರಂಥ ಸಿದ್ದಾಂತ ಶಿಖಾಮಣಿ ಆಧ್ಯಾತ್ಮ ಪ್ರವಚನ ಹಾಗೂ ಶಿವಪೂಜಾನುಷ್ಟಾನ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಇತ್ತೀಚಿನ ದಿನಗಳಲ್ಲಿ ಯುವ ಜನಾಂಗ ಧರ್ಮ ಧಾರ್ಮಿಕ ಆಚರಣೆಗಳಿಂದ ವಿಮುಖರಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿ, ಮುಂದಿನ ಪೀಳಿಗಗೆ ನಮ್ಮ ಧರ್ಮ ಸಂಸ್ಕೃತಿ ಸಂಸ್ಕಾರದ ಕುರಿತು ಜಾಗೃತಗೊಳಿಸುವ ಮಹತ್ವಾಕಾಂಕ್ಷಿಯಿಂದಾಗಿ ಒಂದು ತಿಂಗಳ ಕಾಲ ಭಕ್ತರು ಬಂದು ತಮ್ಮ ಮನೆಗಳಲ್ಲಿ ಪೂಜಾ ಕಾರ್ಯಕ್ಕೆ ಆಹ್ವಾನಿಸಿದರೆ ಆವರ ಮನೆಗೆ ತೆರಳಿ ವೀರಶೈವ ಧರ್ಮದ ಪವಿತ್ರ ಗ್ರಂಥವಾದ ಸಿದ್ದಾಂತ ಶಿಖಾಮಣಿ ಮತ್ತು ಆಧ್ಯಾತ್ಮ ಧರ್ಮ ಪ್ರವಚನ ಮತ್ತು ಶಿವಪೂಜಾನುಷ್ಟಾನ ವಿಶೇಷ ಪೂಜಾ ಕೈಂಕರ್ಯವನ್ನು ನಡೆಸಲಾಗುವುದಾಗಿ ಮಾಧ್ಯಮದವರಿಗೆ ವಿವರಿಸಿದರು.

ಶ್ರಾವಣ ಮಾಸದ ಅಂಗವಾಗಿ ಶ್ರೀ ಮಠದಲ್ಲಿ ಲಿಂ.ಶ್ರೀಗಳವರ ಕರ್ತೃಗದ್ದುಗೆಯಲ್ಲಿ ಮುಂಜಾನೆ ರುದ್ರಾಭಿಷೇಕ ಶಿವಪೂಜೆ ಇನ್ನಿತರ ಪೂಜಾ ಕಾರ್ಯಗಳೊಂದಿಗೆ ಪ್ರವಚನ ಸಹ ನಡೆಸಲಾಗುವುದೆಂದು ತಿಳಿಸಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದರ್ಶನಾಶೀರ್ವಾದ ಪಡೆಯಲು ಕೋರಿದ್ದಾರೆ.

Leave a Comment