Ripponpete

ವಿಶ್ವ ಶಾಂತಿ, ಭ್ರಾತೃತ್ವ ಧರ್ಮಸಂದೇಶ ಸಾರಿದಶ್ರೀ ಆದಿನಾಥ ತೀರ್ಥಂಕರರು ಪ್ರಾತಃಸ್ಮರಣೀಯರು ; ಹೊಂಬುಜ ಸ್ವಾಮೀಜಿ

ರಿಪ್ಪನ್‌ಪೇಟೆ ; ಜೈನ ಧರ್ಮದ ಪ್ರಥಮ ತೀರ್ಥಂಕರ ಶ್ರೀ 1008 ಆದಿನಾಥ ತೀರ್ಥಂಕರರವರು ಜೈನ ಧರ್ಮದ ಮೂಲ ಸಿದ್ಧಾಂತಗಳನ್ನು, ವಿಶ್ವದಲ್ಲೆಲ್ಲ ಶಾಂತಿ, ಭ್ರಾತೃತ್ವದ ಧರ್ಮ ಸಂದೇಶವನ್ನು ಸಾರಿದವರು ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಶ್ರೀ ಆದಿನಾಥ ಸ್ವಾಮಿಯವರು ಮೋಕ್ಷಕಲ್ಯಾಣ ಮಹೋತ್ಸವದ ಧಾರ್ಮಿಕ ವಿಧಿ-ವಿಧಾನಗಳ ಬಳಿಕ ಪ್ರವಚನದಲ್ಲಿ ತಿಳಿಯಬಯಸಿದರು.

WhatsApp Group Join Now
Telegram Group Join Now
Instagram Group Join Now

ಅಸಿ, ಮಸಿ, ಕೃಷಿ, ಆದಿ ವಿದ್ಯೆಗಳನ್ನು ಮನುಕುಲಕ್ಕೆ ಹೇಳಿ ಕೊಟ್ಟ ಆದಿನಾಥರು ಬ್ರಾಹ್ಮಿ ಸುಂದರಿಯರಿಗೆ ವಿಧ್ಯೆ ಹೇಳಿಕೊಡುವ ಮೂಲಕ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟವರು. ಅಂತಿಮವಾಗಿ ಕೈಲಾಸ ಪರ್ವತದಲ್ಲಿ ಆತ್ಮ ಸಾಕ್ಷಾತ್ಕಾರ ಮಾಡಿಕೊಂಡು ಮೋಕ್ಷಕ್ಕೆ ಹೋದರು.

ಅಹಿಂಸಾ ಧರ್ಮ ಪಥದಲ್ಲಿ ಪ್ರಾಣಿ ಪಕ್ಷಿಗಳ, ಸಸ್ಯ ಜೀವಿಗಳ ಸಂರಕ್ಷಣೆ ಮಾಡಬೇಕು. ಮಾನವ ಸಮಾಜದಲ್ಲಿ ಸಹಬಾಳ್ವೆ, ಸಾಮರಸ್ಯದ ಮನೋಭಾವವು ಸರ್ವತ್ರ ಪಸರಿಸಲು ಶ್ರೀ ಆದಿನಾಥ ತೀರ್ಥಂಕರ ಪ್ರಣೀತ ಜೈನ ಧರ್ಮ ಸಾರದ ಸತ್‌ಪರಿಣಾಮದಿಂದ ಅಕ್ಷಯ ಸುಖ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿ, ಪ್ರಾತಃಸ್ಮರಣೀಯರಾಗಿರುವರು ಎಂಬ ಶುಭ ಭಾವನೆಯನ್ನು ಸ್ವಸ್ತಿಶ್ರೀಗಳವರು ಹೇಳಿ, ಭಕ್ತರನ್ನು ಹರಸಿ, ಆಶೀರ್ವದಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಹೊಂಬುಜ ಶ್ರೀಕ್ಷೇತ್ರ ನಗರ ಜಿನಾಲಯದಲ್ಲಿ ಭಕ್ತವೃಂದ, ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು ಶ್ರೀ ಆದಿನಾಥ ಸ್ವಾಮಿಯ ಪೂಜೆ ನೆರವೇರಿಸಿದರು.

ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಸರಸ್ವತಿ ದೇವಿ, ಶ್ರೀ ಕೂಷ್ಮಾಂಡಿನಿ ದೇವಿ ಜಿನಾಲಯಗಳಲ್ಲಿ ವಿಶೇಷ ಪೂಜೆಗಳು ಜರುಗಿದವು. ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಸ್ತೋತ್ರಗಳನ್ನು ಪಠಿಸಿ, ಪೂಜೆ ಸಮರ್ಪಿಸಲಾಯಿತು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]