ಮಲೆನಾಡ ಭಕ್ತರ ಆತಿಥ್ಯಕ್ಕೆ ಸಿದ್ದಗಂಗಾ ಶ್ರೀಗಳ ಪ್ರಶಂಸೆ

Written by malnadtimes.com

Published on:

ರಿಪ್ಪನ್‌ಪೇಟೆ ; ಶ್ರದ್ದಾ ಭಕ್ತಿಯೊಂದಿಗೆ ಧರ್ಮದ ಗುರುಗಳನ್ನು ಆಧಾರ ಅತಿಥ್ಯದಲ್ಲಿ ಕಾಣುವ ಮಲೆನಾಡಿಗರ ಹೃದಯ ವೈಶಾಲತೆಗೆ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Instagram Group Join Now

ಕೋಣಂದೂರು ಉದ್ಯಮಿ ಕೆ.ಆರ್.ಪ್ರಕಾಶ್ ಮನೆಗೆ ಭೇಟಿ ನೀಡಿದ ಶ್ರೀಗಳನ್ನು ಅದ್ಧೂರಿಯಾಗಿ ಸ್ವಾಗತಿಸಿ ಬರಮಾಡಿಕೊಳ್ಳುವ ಮೂಲಕ ಶ್ರೀಗಳ ಪಾದಪೂಜೆ ನೇರವೇರಿಸಿದರು. ನಂತರ ಶ್ರೀಗಳು ಮಲೆನಾಡಿನ ಭಾಗಕ್ಕೆ ಪ್ರಥಮವಾಗಿ ಭೇಟಿ ನೀಡುವ ವೇಳೆ ಮಳೆರಾಯನ ಸ್ವಾಗತ ಮತ್ತು ಪ್ರಕೃತಿಯ ಸೊಬಗು ಶ್ರೀಗಳು ಇಂತಹ ಪರಿಸರದ ಮಣ್ಣಿನ ಗುಣ ಮತ್ತು ಪ್ರಕೃತಿ ಪರಿಸರವನ್ನು ಕಂಡು ಮಡಿನಲ್ಲಿ ಬದುಕುತ್ತಿರುವ ನೀವುಗಳೇ ಧನ್ಯರು ಎಂದರು.

ಶಾಸಕ ಆರಗ ಜ್ಞಾನೇಂದ್ರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ನಮ್ಮ ಕ್ಷೇತ್ರಕ್ಕೆ ಅಪರೂಪದ ಅತಿಥಿಗಳಾಗಿ ಭಾಗವಹಿಸುತ್ತಿರುವುದೇ ನಮಗೆ ಪುಣ್ಯ ಎಂದು ಹೇಳಿ ಗುರುಗಳಿಗೆ ಶಾಲು, ಹಾರ ಹಾಕಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ, ಕೋಣಂದೂರು ಬೃಹನ್ಮಠದ ಶ್ರೀಪತಿಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಪಾರ್ವತಮ್ಮ ರೇವಣಪ್ಪ, ಕೆ.ಆರ್.ಪ್ರಕಾಶ, ಕೆ.ಆರ್,ಪ್ರಸನ್ನ ಕೆ.ಆರ್.ಪ್ರಸಾದ್, ಕೆ.ಆರ್.ಪ್ರಶಾಂತ್, ಅಮೃತ ಗ್ರಾಮ ಪಂಚಾಯಿತ್ ಅಧ್ಯಕ್ಷ ಸಚಿನ್‌ಗೌಡ ಇನ್ನಿತರರು ಹಾಜರಿದ್ದರು.


ಕೋಣಂದೂರು ಬೃಹನ್ಮಠಕ್ಕೆ ಸಿದ್ದಗಂಗಾ ಶ್ರೀಗಳ ಭೇಟಿ

ರಿಪ್ಪನ್‌ಪೇಟೆ ; ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವೀರಶೈವ ಲಿಂಗಾಯಿತರ ಸಂಖ್ಯೆ ಕಡಿಮೆಯಿದರು ಕೂಡಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯಿತರ ಮೂರು ಮಠಗಳಿವೆ‌, ಅದರಲ್ಲಿ ಜನಾಂಗ ಕಡಿಮೆಯಿಂದರೂ ಕೂಡಾ ಧರ್ಮಭೋದನೆಯೊಂದಿಗೆ ಭಕ್ತರ ಸಹಕಾರದೊಂದಿಗೆ ಉತ್ತಮ ಮಠವನ್ನು ನಿರ್ಮಿಸಿರುವ ಇಲ್ಲಿನ ಪೀಠಾಧ್ಯಕ್ಷರ ಮತ್ತು ಭಕ್ತರದೊಂದಿಗಿನ ಒಡನಾಟಕ್ಕೆ ಸಿದ್ದಗಂಗಾಮಠದ ಸಿದ್ದಿಲಿಂಗ ಮಹಾಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೋಣಂದೂರು ಶ್ರೀಕ್ಷೇತ್ರ ಶಿವಲಿಂಗೇಶ್ವರ ಬೃಹನ್ಮಠಕ್ಕೆ ಭೇಟಿ ನೀಡಿ, ಚಿಕ್ಕ ಗ್ರಾಮದಲ್ಲಿ ಲಾಭ ತರುವಂತಹ ಯಾವುದೇ ಆಸ್ತಿಯಿಲ್ಲದೆ ಭಕ್ತರ ಸಹಕಾರದೊಂದಿಗೆ ಇಂತಹ ಬೃಹತಾದ ಮಠವನ್ನು ನಿರ್ಮಿಸಿ ಭಕ್ತರೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಶ್ರೀಗಳವರ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದ ಶ್ರೀಗಳು, ಧರ್ಮ ಧಾರ್ಮಿಕ ಆಚರಣೆಗಳೊಂದಿಗೆ ಸಮಾಜದ ಸಂಘಟನೆಯ ಶ್ರೇಯಸಿಗೆ ಶ್ರಮಿಸುತ್ತಿರುವ ಶ್ರೀಗಳ ಕಾರ್ಯಕ್ಕೆ ಶ್ರೀಮಠದ ಅಭಿವೃದ್ದಿಯೇ ಸಾಕ್ಷಿಯೆಂದು ಹೇಳಿದರು.

ಈ ಸಂದರ್ಭದಲ್ಲಿ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮ ಮಠದ ಅಭಿನವ ಚನ್ನಬಸವ ಮಹಾಸ್ವಾಮೀಜಿ, ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ಉದ್ಯಮಿ ಕೆ.ಆರ್.ಪ್ರಕಾಶ ಮತ್ತು ಸಹೋದರರು ಸೇರಿದಂತೆ ಅಪಾರ ಭಕ್ತರು ಹಾಜರಿದ್ದರು.

Leave a Comment