Chikkamagaluru

ಆಸ್ತಿಗಾಗಿ ಸಹೋದರನನ್ನೇ ಕೊಚ್ಚಿ ಕೊಂದ ರಾಕ್ಷಸಿ ಸಹೋದರಿಯರು !

CHIKKAMAGALURU | ಆಸ್ತಿಯ ಆಸೆಗಾಗಿ ಅಕ್ಕಂದಿರುವ ಬಾವನ ಜೊತೆ ಸೇರಿ ಸಹೋದರನನ್ನೇ ಕೊಲೆ (Murder) ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ (Tharikere) ನಗರದಲ್ಲಿಂದು ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಪಟ್ಟಣದ ಚೌಡೇಶ್ವರಿ ಕಾಲೋನಿಯ ರಾಘವೇಂದ್ರ (43) ಕೊಲೆಯಾದ ವ್ಯಕ್ತಿ. ರಕ್ತ ಸಂಬಂಧಿಗಳೇ ಬೆಳ್ಳಂಬೆಳಗ್ಗೆಯೇ ಕಣ್ಣಿಗೆ ಖಾರದ ಪುಡಿ ಎರಚಿ ಈ ಕೃತ್ಯ ಎಸಗಿದ್ದಾರೆ.

ಮೃತ ರಾಘವೇಂದ್ರ

ಆಸ್ತಿಗಾಗಿ ಕುಟುಂಬಸ್ಥರ ಜೊತೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಇದೇ ಕಾರಣಕ್ಕೆ ಬಾವನ ಜೊತೆಗೂಡಿ ಮೂವರು ಸಹೋದರಿಯರು ತಮ್ಮನನ್ನು ಕೊಲೆ ಮಾಡಿದ್ದಾರೆ. ಮಲಗಿದ್ದಲ್ಲೇ ಮನಸ್ಸೋ ಇಚ್ಛೆ ಕೊಚ್ಚಿ ಹಾಕಿದ್ದಾರೆ. ಮೃತ ರಾಘವೇಂದ್ರ ಅವರ ಅಕ್ಕಂದಿರಾದ ಸುಮಾ, ಸುಧಾ, ರೇಣುಕಾ ಮತ್ತು ಬಾವ ಸಿದ್ದರಾಮಪ್ಪ ಆರೋಪಿಗಳಾಗಿದ್ದಾರೆ.

ಹೇಗಾಯ್ತು ಘಟನೆ ?

ರಾಘವೇಂದ್ರ ಮಂಚದ ಮೇಲೆ ಗಾಢ ನಿದ್ದೆಯಲ್ಲಿದ್ದರು. ಬೆಳಗಿನಜಾವ ಎಚ್ಚರವಾಗಿ ಮೈ ಮುರಿಯುತ್ತಾ ಎದ್ದೇಳಲು ಕಣ್ಣು ಉಜ್ಜಿಕೊಳ್ಳಲು ಮುಂದಾಗಿದ್ದರು. ಆದರೆ ಇದಕ್ಕೂ ಮೊದಲೇ ಸಹೋದರನನ್ನು ಸುತ್ತವರಿದಿದ್ದ ನರಹಂತಕಿ ಸಹೋದರಿಯರು ಆಯುಧಗಳನ್ನು ಹಿಡಿದು ನಿಂತಿದ್ದರು.

ರಾಘವೇಂದ್ರ ಎದ್ದೊಡನೆ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಆತ ಏನಾಯಿತು ಎಂದು ಯೋಚಿಸುವ ಮುನ್ನವೇ ಸಿಕ್ಕ ಸಿಕ್ಕ ಕಡೆಗಳಲ್ಲಿ ಚಾಕುವಿನಿಂದ ಕೊಚ್ಚಿ ಹಾಕಿದ್ದಾರೆ. ಇವರ ರಾಕ್ಷಸಿ ಕೌರ್ಯಕ್ಕೆ ರಾಘವೇಂದ್ರ ಚೀರಾಡುತ್ತಾ, ಪ್ರಾಣ ಉಳಿಸಿಕೊಳ್ಳಲಾಗದೆ ಕ್ಷಣ ಮಾತ್ರದಲ್ಲಿ ಒದ್ದಾಡಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಎಸ್ಪಿ ವಿಕ್ರಂ ಅಮಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ತಿಗಾಗಿ ಅಮಾನುಷವಾಗಿ ಅಣ್ಣನನ್ನೇ ಕೊಂದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

Scholarship : ಈ ವಿದ್ಯಾರ್ಥಿಗಳಿಗೆ ಸಿಗಲಿದೆ 2 ರಿಂದ 6 ಲಕ್ಷ ವಿದ್ಯಾರ್ಥಿ ವೇತನ!ಅರ್ಜಿ ಸಲ್ಲಿಸಲು ಅರ್ಹತೆಯೇನು ಇಲ್ಲಿದೆ ಮಾಹಿತಿ

Post Office Scholarship:ಈ ವಿದ್ಯಾರ್ಥಿಗಳಿಗೆ ಸಿಗಲಿದೆ 6,000 ವಿದ್ಯಾರ್ಥಿವೇತನ !

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!