Ripponpete

ಕ್ರೀಡೆ ವ್ಯಕ್ತಿಯ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಭದ್ರ ಬುನಾದಿ

ರಿಪ್ಪನ್‌ಪೇಟೆ ; ಕ್ರೀಡೆಯಲ್ಲಿ ಕಲಿಯುವ ಶಿಸ್ತು ಸಹಕಾರ ಹಾಗೂ ಪ್ರಾಮಾಣಿಕತೆಗಳು ಪ್ರತಿಯೊಬ್ಬರ ಬದುಕಿನ ತಳಹದಿಗೆ ಅಡಿಪಾಯವಾಗಿದ್ದು, ವ್ಯಕ್ತಿಯ ಸಮಗ್ರ ವ್ಯಕ್ತಿತ್ವಕ್ಕೆ ಕ್ರೀಡೆ ಭದ್ರಬುನಾದಿಯಾಗಿದೆ ಎಂದು ಹುಂಚ ಗ್ರಾಮ ಪಂಚಾಯಿತ್ ಸದಸ್ಯೆ ಯಶಸ್ವತಿ ವೃಷಭರಾಜ್ ಜೈನ್ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರಿಪ್ಪನ್‌ಪೇಟೆಯ ಕಲಾಕೌಸ್ತುಭ ಕನ್ನಡ ಸಂಘದ 32ನೇ ವಾರ್ಷಿಕೋತ್ಸವ ಮತ್ತು 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ದಿ.ರಾಮಚಂದ್ರ ಸ್ಮರಣಾರ್ಥ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಕ್ರೀಡೆ ಶಿಸ್ತು ಸಮಯ ಪಾಲನೆ ಹಾಗೂ ದ್ವೇಷ ಅಸೂಯೆಯನ್ನು ದೂರಮಾಡಿ ಎಲ್ಲರನ್ನು ಸಂಘಟಿಸುವ ಒಂದು ಕ್ರೀಡೆಯಾಗಿದೆ ಎಂದರು.

ವಾಲಿಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ಮುರುಳಿಧರ ಕೆರೆಹಳ್ಳಿ ವಹಿಸಿದ್ದರು. ವಿಜಯ ಸಾಮಿಲ್ ಮಾಲೀಕ ವಿಜಯಕುಮಾರ್ ಶೆಟ್ಟಿ, ಅರುಣ್‌ಜ್ಯುವೆಲ್ಲರ್ ಮಾಲೀಕ ಮುಕೇಶ್, ಉದ್ಯಮಿ ಚೇತನ ಚಿಮಗೋಡು ಹಾಗೂ ಪ್ರಶಾಂತ (ಪಚ್ಚಿ), ಎಂ.ಸುರೇಶ್ ಸಿಂಗ್, ಎಂ.ಬಿ.ಮಂಜುನಾಥ, ಶೈಲಾ ಆರ್.ಪ್ರಭು, ಪದ್ಮಾ ಸುರೇಶ್, ಲೀಲಾ ಉಮಾಶಂಕರ್, ಉಮಾ ಸುರೇಶ್, ಗೀತಾ ಅಣ್ಣಪ್ಪ, ವೇದಾವತಿ, ರೇಖಾ ರವಿ, ಆಶಾ ಬಸವರಾಜ್, ರವೀಂದ್ರ ಕೆರೆಹಳ್ಳಿ ಇನ್ನಿತರರು ಹಾಜರಿದ್ದರು.

ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯ ಸಮಾರೋಪ ಉದ್ಘಾಟನೆ ;

ಕ್ರೀಡೆಯ ಬಗ್ಗೆ ಸಾರ್ವಜನಿಕರು ಹೆಚ್ಚು ಕಾಳಜಿಯನ್ನು ವಹಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಹಲವು ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದು ಪ್ರೋತ್ಸಾಹದ ಕೊರತೆಯಿಂದಾಗಿ ಹಾಗೂ ಉತ್ತಮ ಅವಕಾಶಗಳಿಲ್ಲದೆ ಸಾಧನೆಯಿಂದ ದೂರವಾಗುವಂತಾಗಿದೆ ಎಂದು ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಚಂದ್ರುಬಾಬು ಕಳವಳ ವ್ಯಕ್ತಪಡಿಸಿದರು.

ರಿಪ್ಪನ್‌ಪೇಟೆಯ ಕಲಾಕೌಸ್ತುಭ ಕನ್ನಡ ಸಂಘದ 32ನೇ ವಾರ್ಷೀಕೋತ್ಸವ ಮತ್ತು 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ದಿ.ರಾಮಚಂದ್ರ ಸ್ಮರಣಾರ್ಥ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ಮುರುಳಿಧರ ಕೆರೆಹಳ್ಳಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉಪತಹಶೀಲ್ದಾರ್ ಗೌತಮ್, ಕ್ರೀಡಾಪಟು ಅಲೆಕ್ಸ್, ದಿನೇಶ್ ಗೌಡ್ರು, ಗನ್ನಿಸಾಬ್, ಖಾದ್ರಿ, ಸುಧೀರ್, ದೀಪಾ ಸುಧೀರ್, ಅಶ್ವಿನಿ ರವಿಶಂಕರ್, ರವೀಂದ್ರ ಕೆರೆಹಳ್ಳಿ, ಎಂ.ಸುರೇಶಸಿಂಗ್, ಬಿ.ರಾಮಚಂದ್ರ, ರಾಘು ವರ್ಗೀಸ್, ಆಶಾ ಬಸವರಾಜ, ಯೋಗೇಂದ್ರಗೌಡ, ಸೀನಾ, ಮಂಜು, ನವೀನ್, ಗೀತಾ, ಸೀತಾ, ಲಕ್ಷ್ಮಿ ಶ್ರೀನಿವಾಸ್, ಮಹೇಶ್, ಆದರ್ಶ, ವಿನಯ್, ಶರಣೇಸ್, ಸಂದೇಶ್,ನಾಗರಾಜ ಕೆದಲುಗುಡ್ಡೆ, ಚಂದ್ರು ಸಿದ್ದಪನಗುಡಿ, ಇನ್ನಿತರರು ಹಾಜರಿದ್ದರು.

ನಾಗರತ್ನ ದೇವರಾಜ್ ಪ್ರಾರ್ಥಿಸಿದರು. ರವೀಂದ್ರ ಕೆರೆಹಳ್ಳಿ ಸ್ವಾಗತಿಸದರು‌. ಸುರೇಶ್ ಸಿಂಗ್ ನಿರೂಪಿಸಿ, ವಂದಿಸಿದರು.

ಇದೇ ಸಂದರ್ಭದಲ್ಲಿ ರಾತ್ರಿ ಶ್ರೀಶಾರದಾಂಬ ಸಾಂಸ್ಕೃತಿಕ ಕಲಾಕೇಂದ್ರ ಇವರಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ ಸಾರ್ವಜನಿಕರಿಂದ ಮನೋರಂಜನಾ ಕಾರ್ಯಕ್ರಮ ಜರುಗಿತು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>