ಸಂಬಂಧಗಳ ಬೆಸುಗೆಗೆ‌ ಕ್ರೀಡಾಕೂಟ ಸಹಕಾರಿ ; ಶಾಸಕ ಬೇಳೂರು ಗೋಪಾಲಕೃಷ್ಣ

Written by Mahesha Hindlemane

Published on:

ಹೊಸನಗರ ; ಸಂಬಂಧಗಳ ಪರಸ್ಪರ ವೃದ್ಧಿಗೆ ಕ್ರೀಡಾಕೂಟಗಳ ಆಯೋಜನೆ ಸಹಕಾರಿ ಆಗಲಿದೆ‌ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಕೋರಾರ್ ಹಾಗೂ ಕೊರಗ ಸಮಾಜ ಬಾಂಧವರಿಗಾಗಿ ಹಮ್ಮಿಕೊಂಡಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ತುಳಿತಕ್ಕೆ ಒಳಗಾದ ಈ ಸಮಾಜವು ಇಂದು ಸಮಾಜದ ಎಲ್ಲಾ ಸ್ತರಗಳಲ್ಲಿ ಸಮಾನತೆ ಸಾಧಿಸಲು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಕಾರಣ. ಕೇವಲ ಪಟ್ಟಣದ ಸ್ವಚ್ಛತೆಗೆ ಮೀಸಲು ಎಂಬ ಹಣೆಪಟ್ಟಿ ತೊಡೆದು ಹಾಕಿ ಶೈಕ್ಷಣಿಕ, ಆರ್ಥಿಕವಾಗಿ ಮುಂಚೂಣಿಗೆ ಬಂದಿರುವ ಸಂಗತಿ ಇತರರಿಗೆ ಪ್ರೇರಣೆ ಆಗಿದೆ. ಸದಾ ಸಮಾಜದ ಏಳಿಗೆಗೆ‌ ಶ್ರಮಿಸುತ್ತಿರುವ ಈ‌ ಶೋಷಿತ ವರ್ಗದ ಅಭಿವೃದ್ಧಿಯ ಮನವಿಗೆ ಸಹಕಾರ ನೀಡುವ ಭರವಸೆ ನೀಡಿದರು.

ಶಂಕರನಾರಾಯಣ ತಂಡ ಪ್ರಥಮ ಸ್ಥಾನಗಳಿಸಿದರೆ, ಸ್ಥಳೀಯ ತಂಡ ರನ್ನರ್ ಅಪ್‌ ಸ್ಥಾನಕ್ಕೆ ಪಾತ್ರವಾಯಿತು.

ಪಟ್ಟಣ ಪಂಚಾಯತಿ ಅಧ್ಯಕ್ಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಬಿಜೆಪಿ ಮುಖಂಡ ದೇವಾನಂದ್, ಶ್ರೀಪತಿ ರಾಯ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ‌ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಸದಸ್ಯರಾದ ಗುರುರಾಜ್ ಆರ್, ಸಿಂಥಿಯಾ ಶೆರಾವ್, ಶಾಹಿನ‌, ಹೊಸನಗರ ಬ್ರದರ್ಸ್ ಕ್ರಿಕೆಟರ್ಸ್ ಗೌರವಾಧ್ಯಕ್ಷ ನಾಗಪ್ಪ, ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ‌ಅಧ್ಯಕ್ಷ ಎನ್.ಜಿ.ಪ್ರವೀಣ್, ಹಿಟಾಚಿ ಶ್ರೀಧರ್, ನಾಸೀರ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ನೋಟ್ ವಿತರಣೆ, ಸಾಧಕರಿಗೆ ಸನ್ಮಾನ ನೆರವೇರಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಉಮೇಶ್ ಸ್ವಾಗತಿಸಿ, ನಿರೂಪಿಸಿದರು.

Leave a Comment