Ripponpete

ಶರನ್ನವರಾತ್ರಿ ‘ಮಹಾನವಮಿ’ ಉತ್ಸವ | ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸದಾಕಾಲ ಸರ್ವರಿಗೂ ಕ್ಷೇಮವನ್ನುಂಟು ಮಾಡಲಿ ; ಹೊಂಬುಜ ಶ್ರೀಗಳು

RIPPONPETE ; ಶರನ್ನವರಾತ್ರಿಯ ನವಮಿಯಂದು ಇಷ್ಟಾರ್ಥ ಪೂಜೆ ಸಲ್ಲಿಸಿ ಭಕ್ತರು ತಮ್ಮ ಜೀವನ ಪರ್ಯಂತ ಆರೋಗ್ಯ-ಶಾಂತಿ-ನೆಮ್ಮದಿ ಲಭಿಸಲೆಂದು ಯಾಚಿಸುತ್ತಾರೆ. ಮಹಾನವಮಿಯ ಸುದಿನದಂದು ನವವಿಧ ಭಕ್ತಿಯಿಂದ ಬಿನ್ನವಿಸಿಕೊಳ್ಳುವ ಪ್ರಾರ್ಥನೆಯು ಫಲ ನೀಡಲಿ ಎಂದು ಶ್ರೀಗಳವರು ಪ್ರವಚನದಲ್ಲಿ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಸದಾಕಾಲ ಸರ್ವರಿಗೂ ಕ್ಷೇಮವನ್ನುಂಟು ಮಾಡಲಿ ಎಂದು ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಹರಸಿ, ಆಶೀರ್ವದಿಸಿದರು.

ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು  ಗಜರಾಜನಿಗೆ ಆಹಾರ ನೀಡಿ ಪೂಜೆ ಸಲ್ಲಿಸಿದರು.

ರಿಪ್ಪನ್‌ಪೇಟೆ ಸಮೀಪದ ಹೊಂಬುಜ  ಅತಿಶಯ ಶ್ರೀಕ್ಷೇತ್ರ ಹೊಂಬುಜ ಜೈನ ಮಠದಲ್ಲಿ ಶರನ್ನವರಾತ್ರಿ ‘ಮಹಾನವಮಿ’ ಉತ್ಸವದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಅಧಿನಾಯಕ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಮತ್ತು ಜಗನ್ಮಾತೆ ಯಕ್ಷಿಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪೂರ್ವಪರಂಪರೆಯಂತೆ ಜಿನಾಗಮೋಕ್ತ ಪೂಜಾ ವಿಧಿ-ವಿಧಾನದಲ್ಲಿ ಶೋಡೋಪಚಾರ ಪೂಜೆ, ಸ್ವರ್ಣಾಲಂಕಾರದಿಂದ ಶೋಭಿಸಿದ ಅಭೀಷ್ಠವರಪ್ರದಾಯಿನಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಭಕ್ತಿ, ಶ್ರದ್ಧೆಗಳಿಂದ ಊರ ಪರವೂರ ಭಕ್ತರು ಪ್ರಾರ್ಥನೆ, ಕಾಣಿಕೆಯನ್ನು ಸಮರ್ಪಿಸಿದರು. ಆರ್ಯಿಕಾರತ್ನ ಶ್ರೀ 105 ಶಿವಮತಿ ಮಾತಾಜಿಯವರು ಉಪಸ್ಥಿತರಿದ್ದರು.

ಕುಮದ್ವತಿ ತೀರ್ಥದಿಂದ ಅಗ್ರೋದಕ ತಂದು ಜಿನಾಲಯಗಳ ಸನ್ನಿಧಿಗೆ ಸಮರ್ಪಿಸಲಾಯಿತು. ಊರ, ಪರವೂರ ಭಕ್ತವೃಂದದವರು ಮಹಾನವಮಿ ಪೂಜಾ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡರು. ನಂತರ ಗಜ, ಆಶ್ವ ಪೂಜೆಯನ್ನು ಊರಿನಲ್ಲಿ ಹಾಗೂ ಶ್ರೀ ಮಠದ ಆವರಣದಲ್ಲಿ ನೆರವೇರಿಸಲಾಯಿತು. ಅಷ್ಟಕನ್ಯೆ ಪೂಜೆಯನ್ನು ಸಹ ನೆರವೇರಿಸಲಾಯಿತು.

ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು  ಕುದುರೆಗೆ ಆಹಾರ ನೀಡಿ ಪೂಜೆ ಸಲ್ಲಿಸಿದರು.

ಶ್ರೀಮಠದ ವಾಹನಗಳಿಗೆ ಪೂಜ್ಯ ಶ್ರೀಗಳವರ ಸಾನಿಧ್ಯದಲ್ಲಿ ಪೂಜೆ ನೆರವೇರಿತು.
ಅಷ್ಟಾವಧಾನ, ಸಂಗೀತ, ನೃತ್ಯ, ಗಮಕ, ಗದ್ಯ, ವಾದ್ಯಗೋಷ್ಠಿ, ಜಿನಭಜನೆ ರಾತ್ರಿ ನೆರವೇರಿತು. ಜಿನಾಲಯಗಳ ಅಲಂಕಾರ, ಜಿನವಿಗ್ರಹಗಳ ಅಲಂಕಾರ ಸುಶೋಭಿತವಾಗಿ ಕಂಡು ಭಕ್ತರು ಧನ್ಯತಾಭಾವ ತಳೆಯುವಂತಾಯಿತು. 

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>