ಹೊಸನಗರ

ಹೊಂಬುಜದಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ಮಹಾವೀರ ನಿರ್ವಾಣೋತ್ಸವ

ಶ್ರೀ ಮಹಾವೀರ ತೀರ್ಥಂಕರರ 2553ನೇ ನಿರ್ವಾಣೋತ್ಸವದ ಧಾರ್ಮಿಕ ವಿಧಿ-ವಿಧಾನಗಳು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಅಧಿನಾಯಕ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಜಿನಮಂದಿರದಲ್ಲಿ ಪ್ರಾತಃಕಾಲ ವಿಜೃಂಭಣೆಯಿಂದ ನೆರವೇರಿದವು.

Hombuja Nirvahanosthsava

ಹೊಸನಗರ: ಶ್ರೀ ಮಹಾವೀರ ತೀರ್ಥಂಕರರ 2553ನೇ ನಿರ್ವಾಣೋತ್ಸವದ ಧಾರ್ಮಿಕ ವಿಧಿ-ವಿಧಾನಗಳು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಅಧಿನಾಯಕ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಜಿನಮಂದಿರದಲ್ಲಿ ಪ್ರಾತಃಕಾಲ ವಿಜೃಂಭಣೆಯಿಂದ ನೆರವೇರಿದವು.

WhatsApp Group Join Now
Telegram Group Join Now
Instagram Group Join Now

ಜೈನ ಶ್ರೀಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ, ಆಗಮೋಕ್ತ ವಿಧಿಗಳೊಂದಿಗೆ ಭಕ್ತವೃಂದದ ಸಮ್ಮುಖದಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಮಂಗಲ ಪ್ರವಚನ ನೀಡಿದ ಸ್ವಸ್ತಿಶ್ರೀಗಳು, “ಜೈನ ಧರ್ಮದ ಇಪ್ಪತ್ತನಾಲ್ಕನೆಯ ತೀರ್ಥಂಕರರಾದ ಶ್ರೀ ಮಹಾವೀರರು ಜೈನ ಧರ್ಮದ ಮೂಲ ಸಿದ್ಧಾಂತಗಳನ್ನು ತಮ್ಮ ಸರಳ ಪ್ರವಚನಗಳ ಮೂಲಕ ಜಗತ್ತಿಗೆ ಸಾರಿದರು.

ಹಿಂಸೆ, ಪ್ರಾಣಿಬಲಿ ಹಾಗೂ ಮಾನವೀಯ ಸಂಘರ್ಷಗಳು ಹೆಚ್ಚಾಗಿದ್ದ ಆ ಕಾಲಘಟ್ಟದಲ್ಲಿ ಸಮಾಜದಲ್ಲಿ ಶಾಂತಿ-ನೆಮ್ಮದಿ ನೆಲೆಸುವಂತೆ ಮಾಡಲು ಅವರು ಅಹಿಂಸಾತ್ಮಕ ಮಾನವೀಯ ಮೌಲ್ಯಗಳನ್ನು ಬೋಧಿಸಿದರು. ಅವರ ಉಪದೇಶಗಳಿಂದ ಪ್ರೇರಿತರಾದ ಅನುಯಾಯಿಗಳು ಸತ್ಯ, ಅಹಿಂಸೆ, ಅಚೌರ್ಯ, ಅಪರಿಗ್ರಹ ಮತ್ತು ಬ್ರಹ್ಮಚರ್ಯವೆಂಬ ಪಂಚ ಮಹಾವ್ರತಗಳ ಪಾಲನೆಗೆ ಬದ್ಧರಾದರು” ಎಂದು ವಿವರಿಸಿದರು.

ಮುಂದುವರಿದು, “ಇಂದಿಗೂ ಜೈನ ಧರ್ಮೀಯರು ಅನೇಕಾಂತವಾದದ ತತ್ವದ ಮೂಲಕ ತಮ್ಮ ದೈನಂದಿನ ಜೀವನದ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಸರ್ವರಿಗೂ ಭಗವಾನ್ ಮಹಾವೀರ ತೀರ್ಥಂಕರರ ದಿವ್ಯವಾಣಿ ಸದಾ ಸ್ಫೂರ್ತಿ ಹಾಗೂ ಚೈತನ್ಯವನ್ನು ನೀಡಲಿ” ಎಂದು ಆಶೀರ್ವದಿಸಿದರು.

ನಿರ್ವಾಣೋತ್ಸವದ ಅಂಗವಾಗಿ ಅಭೀಷ್ಟವರಪ್ರದಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿತು.

ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ ಹಾಗೂ ಶ್ರೀ ಸರಸ್ವತಿ ದೇವಿ ಜಿನಾಲಯಗಳಲ್ಲಿ, ಜೊತೆಗೆ ಕ್ಷೇತ್ರಪಾಲ ಮತ್ತು ನಾಗ ಸನ್ನಿಧಿಗಳಲ್ಲಿ ಜರುಗಿದ ನಿತ್ಯಪೂಜಾ ಕೈಂಕರ್ಯಗಳಲ್ಲಿ ಊರ-ಪರವೂರ ಭಕ್ತರು ಪಾಲ್ಗೊಂಡು ಭಕ್ತಿಪೂರ್ವಕವಾಗಿ ಸ್ತೋತ್ರ ಪಠಿಸಿದರು.

ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು ಹಾಗೂ ಶ್ರೀ ಪದ್ಮಾವತಿ ಮಹಿಳಾ ಮಂಡಲದ ಶ್ರಾವಕಿಯರು ಭಕ್ತಿಸಮರ್ಪಣೆ ಸಲ್ಲಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]