ಅಪರಾಧ ಸುದ್ದಿ

ಕಳುವಾಗಿದ್ದ 10 ಲಕ್ಷ ರೂ. ಮೌಲ್ಯದ ಗೂಡ್ಸ್‌ ವಾಹನ ಮತ್ತು 29 ಲಕ್ಷ ರೂ. ನಗದು ವಶಕ್ಕೆ

ತೀರ್ಥಹಳ್ಳಿ ; ರಂಜದಕಟ್ಟೆ ಸಮೀಪ ಕಳುವಾಗಿದ್ದ 10 ಲಕ್ಷ ರೂ. ಮೌಲ್ಯದ ಗೂಡ್ಸ್‌ ವಾಹನ ಮತ್ತು 29 ಲಕ್ಷ ರೂ. ನಗದನ್ನು ತೀರ್ಥಹಳ್ಳಿ ಪೊಲೀಸರು ಪ್ರಕರಣ ನಡೆದು 12 ಗಂಟೆಯೊಳಗೆ ವಶಪಡಿಸಿಕೊಂಡ ಘಟನೆ ಶನಿವಾರ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಏನಿದು ಘಟನೆ ?

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮೂಲದ‌ ಮಹಮ್ಮದ್ ಇರ್ಷಾದ್‌ ಅವರು‌ ಶುಕ್ರವಾರ ಗೂಡ್ಸ್‌ ವಾಹನದಲ್ಲಿ 29 ಲಕ್ಷ ರೂ. ಇಟ್ಟು, ಲಾಕ್‌ ಮಾಡಿ ಮಧ್ಯಾಹ್ನ ನಮಾಜ್‌ಗಾಗಿ ಮಸೀದಿಗೆ ತೆರಳಿದ್ದರು. ವಾಪಾಸ್‌ ಬಂದು ನೋಡಿದಾಗ ಗೂಡ್ಸ್‌ ವಾಹನ ಮತ್ತು ಹಣ ಕಳುವಾಗಿತ್ತು. ಈ ಸಂಬಂಧ ಅವರು ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಾದ ಸೈಯದ್‌ ಅಬ್ದುಲ್ಲಾ, ನವೀದ್‌ ಅಹಮದ್‌, ಜಾವಿದ್‌ ಅವರನ್ನು ಬಂಧಿಸಿ, ಆರೋಪಿತರಿಂದ 29 ಲಕ್ಷ ರೂ. ನಗದು, ಗೂಡ್ಸ್ ವಾಹನ, ಟಯೋಟಾ ಕಾರು, ಸೇರಿ ಒಟ್ಟು 45 ಲಕ್ಷ ಮೌಲ್ಯದ ಹಣ ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಡಿವೈಎಸ್ಪಿ ಅರವಿಂದ್‌ ಕುಲಗುಜ್ಜಿ ನೇತೃತ್ವದದಲ್ಲಿ ಪಿಐ ಇಮ್ರಾನ್‌ ಬೇಗ್‌, ಪಿಎಸ್‌ಐ ಶಿವನಗೌಡ, ಎಎಸ್‌ಐ ಲೋಕೇಶಪ್ಪ, ಸಿಬ್ಬಂದಿಗಳಾದ ಲಿಂಗೇಗೌಡ, ರಾಜಶೇಖರ್‌ ಶೆಟ್ಟಿಗಾರ್‌, ರವಿ, ಪ್ರದೀಪ್‌, ಸುರೇಶ್‌ ನಾಯ್ಕ್‌, ಪ್ರಮೋದ್‌, ದೀಪಕ್‌, ಮಂಜುನಾಥ, ರಾಘವೇಂದ್ರ, ಕರ್ಣೇಶ್‌, ಅವಿನಾಶ್‌ ಕಾರ್ಯಾಚರಣೆ ನಡೆಸಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!