ರಿಪ್ಪನ್‌ಪೇಟೆ ; ಕಾಲುಜಾರಿ ಕೆರೆಗೆ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಇಲ್ಲಿನ ಮದೀನಾ ಕಾಲೋನಿಯ ನಿವಾಸಿ ತಾಹಿರ್ ಹಾಗೂ ತಸೀನಾ ದಂಪತಿಗಳ ದ್ವಿತೀಯ ಪುತ್ರ ಮಹಮ್ಮದ್ ತಮಿಮ್ (16) ಮೃತ ವಿದ್ಯಾರ್ಥಿ. ಇಲ್ಲಿನ ಬರುವೆ ಗ್ರಾಮದ ಅಂಬೇಡ್ಕರ್ ಭವನದ ಹಿಂಭಾಗ ಈ ಘಟನೆ ನಡೆದಿದೆ.

ಈತ ರಿಪ್ಪನ್‌ಪೇಟೆಯ ರಾಮಕೃಷ್ಣ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದು ಇಂದು ಪರೀಕ್ಷೆ ಇಲ್ಲದ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಟ್ಯೂಷನ್ ಮುಗಿಸಿ ತೆರಳುವಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

