ರಿಪ್ಪನ್‌ಪೇಟೆ ; ವಿಜ್ಞಾನ ವಿಷಯದ ಬಗ್ಗೆ ತಮ್ಮ ವಿದ್ಯಾರ್ಥಿ ಜೀವನದಲ್ಲಿನ ಹಲವು ಅನುಭವಗಳನ್ನು ಹಂಚಿಕೊಂಡು ಪ್ರಯೋಗಗಳ ಮೂಲಕ ವಿಜ್ಞಾನವನ್ನು ಕಲಿಸುವ ಶಿಕ್ಷಕರ ಪ್ರಯತ್ನಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು.
ರಿಪ್ಪನ್‌ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ವಿಜ್ಞಾನ ಶಿಕ್ಷಕರ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಶಿವಮೊಗ್ಗ ಗಿರಿದೀಪಂ ಶಾಲೆಯ ವಿಜ್ಞಾನ ಶಿಕ್ಷಕ ಗಿರೀಶ್ ಮಾತನಾಡಿ, ಭೌತಶಾಸ್ತ್ರದ ವಿದ್ಯುತ್ ಶಕ್ತಿ ಮತ್ತು ವಿದ್ಯುತ್ ಕ್ರಾಂತೀಯ ಪರಿಣಾಮ ಘಟಕಗಳಿಗೆ ಸಂಬಂಧಿಸಿದಂತೆ ತಾವೇ ತಯಾರಿಸಿದ ಅತಿ ಸರಳ ಮತ್ತು ಕಡಿಮೆ ವೆಚ್ಚದ ಬೋಧನೋಪಕರಣಗಳನ್ನು ವಿದ್ಯಾರ್ಥಿಗಳಿಗೆ ಅತ್ಯುತ್ತಮ ರೀತಿಯಲ್ಲಿ ಬಳಸುವ ವಿಧಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಾಗಾರದ ಆಧ್ಯಕ್ಷತೆಯನ್ನು ಸರ್ಕಾರಿ ಪ್ರೌಢಶಾಲೆಯ ಉಪಪ್ರಾಚಾರ್ಯ ಕೆಸುವಿನಮನೆ ರತ್ನಾಕರ್ ವಹಿಸಿದ್ದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಪರಮೇಶ್ವರಪ್ಪ, ಕರಿಬಸಪ್ಪ, ತಾಲ್ಲೂಕು ವಿಜ್ಞಾನ ಶಿಕ್ಷಕರ ವೇದಿಕೆ ಅಧ್ಯಕ್ಷ ರಾಮಕೃಷ್ಣ ಇನ್ನಿತರರು ಹಾಜರಿದ್ದರು.
ವಿದ್ಯಾರ್ಥಿನಿ ಪ್ರಜ್ಞಾ ಪ್ರಾರ್ಥಿಸಿದರು,ಶಿಕ್ಷಕ ಸೈಯದ್ನೂರ್ ಅಹಮದ್ ಸ್ವಾಗತಿಸಿದರು. ನಾಗಮಣಿ ವಂದಿಸಿದರು. ಸುಮಾರು 25ಕ್ಕೂ ಅಧಿಕ ವಿಜ್ಞಾನ ಶಿಕ್ಷಕರು ಕಾರ್ಯಗಾರದಲ್ಲಿ ಭಾಗವಹಿಸಿದರು.