ಹೊಸನಗರ ; ಶಿವಮೊಗ್ಗ ಜಿಲ್ಲಾ ಪಂಚಾಯಿತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ಯುವ ಸಂಪತ್ತು ಸ್ಪರ್ಧೆಯಲ್ಲಿ ಸರ್ಕಾರಿ ಪ್ರೌಢ ಶಾಲೆ ಮಸಗಲ್ಲಿಯ ವಿದ್ಯಾರ್ಥಿನಿಯರಾದ ಕು. ಸ್ಪೂರ್ತಿ ಕೆ.ಎನ್ ಹಾಗೂ ಪೂರ್ಣಿಮ ಕೆ.ಪಿ ಒಂದೇ ಶಾಲೆಯ ಈ ಇಬ್ಬರು ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಹೊಸ ದಾಖಲೆ ಸೃಷ್ಠಿಸಿದ್ದಾರೆ.
ಈ ಅಭೂತಪೂರ್ವ ಸಾಧನೆಗೈದು ಹೊಸನಗರ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಅಭಿನಂದನೆ ;
ವಿದ್ಯಾರ್ಥಿನಿಯರ ಈ ಸಾಧನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಚೇತನಾ, ಕ್ಷೇತ್ರ ಸಮನ್ವಯಾಧಿಕಾರಿ ರಂಗನಾಥ್, ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಪರಶುರಾಮಪ್ಪ ಬಿ.ಎನ್, ಮಾರ್ಗದರ್ಶಿ ಸಹಶಿಕ್ಷಕ ರವಿಕುಮಾರ್ ಎಂ.ಎಂ ಹಾಗೂ ಸಹಶಿಕ್ಷಕರಾದ ಶ್ರೀಕಾಂತ್, ವಾಸಂತಿ, ಬಸವನಗೌಡ, ಕು. ಪೂಜಾ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಕೆ.ಆರ್, ಉಪಾಧ್ಯಕ್ಷ ಉಮೇಶ್ ಎಲ್ಲ ಸದಸ್ಯರುಗಳು ಅಭಿನಂದಿಸಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆಯಲಿ ಎಂದು ಶುಭ ಹಾರೈಸಿದ್ದಾರೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

