ಸುನಿತಾ ವಿಲಿಯಮ್ಸ್ ಸುರಕ್ಷಿತವಾಗಿ ಭೂಮಿಗೆ ಮರಳಿದ ಹಿನ್ನೆಲೆ ; ಸೊರಬದಲ್ಲಿ ಸಂಭ್ರಮಾಚರಣೆ

Written by malnadtimes.com

Published on:

ಸೊರಬ ; ಭಾರತದ ಹೆಮ್ಮೆಯ ಪುತ್ರಿ, ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು ನವಮಾಸಗಳ ಗಗನವಾಸ ಬಳಿಕ ಸುರಕ್ಷಿತವಾಗಿ ಭೂಮಿಗೆ ಮರಳಿದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಶ್ರೀ ಭೂತೇಶ್ವರ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ಶ್ರೀ ಮಾರಿಕಾಂಬ ಲಗೇಜ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದಿಂದ ಪಟ್ಟಣದ ಪುರಸಭೆ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

WhatsApp Group Join Now
Telegram Group Join Now
Instagram Group Join Now

ನೇತೃತ್ವ ವಹಿಸಿದ್ದ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಮಾತನಾಡಿ, ಹೆಸರಾಂತ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು ಸುಮಾರು 284 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಉಳಿದಿದ್ದರು.

ಜಗತ್ತಿನಲ್ಲಿಯೇ ಅತಿ ಹೆಚ್ಚು ದಿನ ಬಾಹ್ಯಾಕಾಶದಲ್ಲಿ ಉಳಿದ ಮಹಿಳೆ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಅವರು ಸುರಕ್ಷಿತವಾಗಿ ಮರಳಿ ಭೂಮಿಗೆ ತಲುಪಲಿ ಎಂದು ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಘಟನೆ ವತಿಯಿಂದ ನದಿಕಟ್ಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಹ ಸಲ್ಲಿಸಲಾಗಿತ್ತು. ಪೂಜಾ ಫಲ ತಲುಪಿದಂತಾಗಿದೆ. ಅವರು ಮತ್ತು ಇನ್ನೋರ್ವ ಗಗನಯಾತ್ರಿ ಬುಚ್ ವಿಲ್ಮೋರ್ ಅವರು ಸುರಕ್ಷಿತವಾಗಿ ಭೂಮಿಗೆ ತಲುಪಿದ್ದಾರೆ. ಈ ನಿಟ್ಟಿನಲ್ಲಿ ಸಂಭ್ರಮಿಸಲಾಗುತ್ತಿದೆ.

ಸುನಿತಾ ಅವರ ಆರೋಗ್ಯ ಚೇತರಿಸಲಿ ಮತ್ತು ಅವರು ಮತ್ತಷ್ಟು ಸಾಧನೆ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಲಾಗುತ್ತಿದೆ ಎಂದರು.

ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/malnadtimes/videos/975403034681075/?mibextid=uSdriS

ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಎಂ.ಡಿ. ಉಮೇಶ್ ಮಾತನಾಡಿ, ಭಾರತ ಮೂಲದ ಹೆಮ್ಮೆಯ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು ಅಂತರಾತ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ್ದರು. ಆದರೆ, ನೌಕೆಯ ತಾಂತ್ರಿಕ ದೋಷದಿಂದ ಸಕಾಲದಲ್ಲಿ ಹಿಂತಿರುಗಲು ಸಾಧ್ಯವಾಗಲಿಲ್ಲ. ಆದರೆ, ದೇಶದ ಪ್ರತಿಯೊಬ್ಬ ನಾಗರೀಕರು ಅವರು ಸುರಕ್ಷಿತವಾಗಿ ಭೂಮಿಗೆ ವಾಪಾಸಾಗಲಿ ಎಂದು ಪ್ರಾರ್ಥಿಸಿದ್ದರು.

ದೇಶದ ಶ್ರೇಷ್ಠ ಹೆಣ್ಣು ಮಕ್ಕಳಲ್ಲಿ ಒಬ್ಬರಾಗಿ ಭಾರತದ ಹೆಸರನ್ನು ಜಗತ್ತಿನಲ್ಲಿ ಮತ್ತಷ್ಟು ಗೌರವಿಸುವಂತೆ ಮಾಡಿದ್ದಾರೆ. ಅವರ ಭವಿಷ್ಯವು ಉತ್ತಮವಾಗಿರಲಿ ಎಂದು ಆಶಿಸಿದರು.

ಇದಕ್ಕೂ ಮೊದಲು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿಯಿಂದ ನದಿಕಟ್ಟೆ ಶ್ರೀ ಆಂಜನೇಯ ದೇವಸ್ಥಾನ, ಚಂದ್ರಮೌಳೇಶ್ವರ ದೇವಸ್ಥಾನ, ಚಿಕ್ಕಪೇಟೆಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ಮತ್ತು ಅಂಬೇಡ್ಕರ್ ಬಡಾವಣೆಯ ಶ್ರೀ ದುರ್ಗಾಂಬ ದೇವಸ್ಥಾನ, ಹಿರೇಶಕುನದ ಶ್ರೀ ಮಾರಿಕಾಂಬ ದೇವರಿಗೆ ನಮನ ಸಲ್ಲಿಸಲಾಯಿತು.

ಶ್ರೀ ಭೂತೇಶ್ವರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಟಿ.ಬಿ. ಹಾಲೇಶ್, ಅರುಣ್‌ಕುಮಾರ್ ಕುಮ್ಮೂರು, ನವೀನ್ ಹಳೇಸೊರಬ, ಚಂದ್ರಪ್ಪ ಚಿಕ್ಕಶಕುನ, ಮಾತಲೇಶ್ ಹಿರೇಶಕುನ, ತೇಜಪ್ಪ ಹಿರೇಶಕುನ, ಮಾರುತಿ, ವೆಂಕಟೇಶ್ ಕೊಡಕಣಿ, ಶ್ರೀ ಮಾರಿಕಾಂಬ ಲಗೇಜ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ರಾಜು, ಮುನ್ನಾ, ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿಯ ಉಪಾಧ್ಯಕ್ಷ ದತ್ತಾ ಸೊರಬ, ಪ್ರಧಾನ ಕಾರ್ಯದರ್ಶಿ ವೀರೇಂದ್ರಗೌಡ ಜೇಡಗೇರಿ, ಕಾರ್ಯದರ್ಶಿ ಶರತ್ ಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಸುಮನಾ ಚಿದಾನಂದಗೌಡ, ಪ್ರಮುಖರಾದ ಅರುಣ್‌ಕುಮಾರ್, ಮೆಹಬೂಬ್ ಬಾಷಾ, ರಂಗನಾಥ ಮೊಗವೀರ್ ಸೇರಿದಂತೆ ಇತರರಿದ್ದರು.

Leave a Comment