Malnad Times

ಶಿವಮೊಗ್ಗ ಸುದ್ದಿ

ಶಿವಮೊಗ್ಗ : ಕೆ.ಜಿ.ಐ.ಡಿ ಕಚೇರಿಯಿಂದ ಬಾರ್ ಅಸೋಸಿಯೇಷನ್ ಗೇಟ್‌ವರೆಗೆ ವಾಹನ ನಿಲುಗಡೆ ನಿಷೇಧ

ಶಿವಮೊಗ್ಗ:ನಗರದಲ್ಲಿ ದಿನದಿಂದ ದಿನಕ್ಕೆ ವಾಹನ ಸಂಚಾರ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಸ್ತೆ ಸಂಚಾರ ಸುಗಮಗೊಳಿಸಲು ಹಾಗೂ ಸಾರ್ವಜನಿಕರ ಸೌಕರ್ಯಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಮಹತ್ವದ ಆದೇಶ ಹೊರಡಿಸಲಾಗಿದೆ. ಕೆ.ಜಿ.ಐ.ಡಿ ಕಚೇರಿಯ ಪ್ರಾರಂಭ ಬಿಂದುವಿನಿಂದ ಬಾರ್ ಅಸೋಸಿಯೇಷನ್…

ಶಿವಮೊಗ್ಗ ಸುದ್ದಿ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 90 ಹೊಸ ‘ಸ್ವದೇಶಿ 4G’ ಟವರ್‌ಗಳ ಉದ್ಘಾಟನೆ

ಶಿವಮೊಗ್ಗ:ದೇಶೀಯವಾಗಿ ಅಭಿವೃದ್ಧಿಪಡಿಸಿದ ‘ಸ್ವದೇಶಿ 4ಜಿ’ ನೆಟ್‌ವರ್ಕ್‌ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ಇದರ ಭಾಗವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 90 ಹೊಸ ಬಿಎಸ್‌ಎನ್‌ಎಲ್ ಮೊಬೈಲ್‌ ಟವರ್‌ಗಳು ಸ್ಥಾಪನೆಯಾಗಿವೆ. ಶನಿವಾರ ಒಡಿಶಾದ ಝಾರ್ಸುಗಢದಲ್ಲಿ…

ಶಿವಮೊಗ್ಗ: ಸೌಜನ್ಯ ಸೇರಿದಂತೆ ಮತ್ತಿತರೇ ಪ್ರಕರಣಗಳನ್ನು ಮುಂದಿಟ್ಟುಕೊಂಡು ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಲು ಹೋಗಬೇಡಿ. ಜನರಲ್ಲಿ ಗೊಂದಲ ಮೂಡಿಸುವಂತ ಕೆಲಸವನ್ನು ಮಾಡಬೇಡಿ ಎಂಬುದಾಗಿ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕರ್ನಾಟಕದಲ್ಲಿ ಧರ್ಮಸ್ಥಳ ಒಂದು ರೀತಿಯಾಗಿ ಕಾಶಿ ಇದ್ದಂತೆ ಆಗಿದೆ. ಆದರೇ ಇಂದು ಆ ಬಗ್ಗೆ ಪರ ವಿರೋಧದ ಚರ್ಚೆಗಳಾಗುತ್ತಿವೆ. ನನ್ನ ಪ್ರಕಾರ ಧಾರ್ಮಿಕ ಕ್ಷೇತ್ರದ ವಿಚಾರದಲ್ಲಿ ನಾವು ಯಾರೂ ಹಸ್ತಕ್ಷೇಪ ಮಾಡಬಾರದು. ಅದು ತಪ್ಪಾಗುತ್ತದೆ ಎಂದರು. ಧರ್ಮಸ್ಥಳದ ಬಗ್ಗೆ ಬಹಳಷ್ಟು ಭಕ್ತರು ನಂಬಿಕೆ ಇಟ್ಟುಕೊಂಡಿದ್ದಾರೆ. ಇದನ್ನು ನಾವು ಕೂಡ ನೋಡಿದ್ದೇವೆ. ನಾವು ಆ ಕ್ಷೇತ್ರದ ಮೇಲೆ ಮೊದಲಿನಿಂದಲೂ ನಂಬಿಕೆ ಇಟ್ಟುಕೊಂಡು ಬಂದಿದ್ದೇವೆ. ವೀರೇಂದ್ರ ಹೆಗ್ಗಡೆಯವರ ಬಗ್ಗೆಯೂ ಅಪಾರವಾದಂತ ಗೌರವವಿದೆ ಎಂದರು. ಸರ್ಕಾರ ಸಹ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಕೆಲಸವನ್ನು ಮಾಡಬಾರದು. ಅದನ್ನು ನಮ್ಮ ಸರ್ಕಾರ ಎಂದಿಗೂ ಮಾಡುವುದಿಲ್ಲ. ಏಕೆಂದರೇ ಈ ಹಿಂದೆ ಸಿಗಂದೂರು ಕ್ಷೇತ್ರವನ್ನು ಮುಜರಾಯಿ ಇಲಾಖೆಗೆ ಸೇರಿಸೋದಕ್ಕೆ ಹಿಂದಿನ ಸರ್ಕಾರ ಮಾಡಿತ್ತು. ಬಿಜೆಪಿಯ ಸಂಸದರು, ಶಾಸಕರು ಸೇರಿಕೊಂಡು ಮಾಡಿದ್ದರು. ಆದರೇ ನಾವು ಯಾವುದೇ ಧಾರ್ಮಿಕ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಲ್ಲ. ಮಾಡಬಾರದು ಕೂಡ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಸಾಗರ

ಸಾಗರ : ಅರಣ್ಯ ಭೂಮಿ ವಿವಾದ- ಸಭೆಯಲ್ಲಿ ಅರಣ್ಯ ಅಧಿಕಾರಿಗಳಿಗೆ ಗೋಪಾಲಕೃಷ್ಣ ಬೇಳೂರು ಎಚ್ಚರಿಕೆ

ಸಾಗರ :ತಾಲ್ಲೂಕಿನ ಬಳಸಗೋಡ ಪ್ರದೇಶದಲ್ಲಿ ಜನರು ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆಂಬ ಕಾರಣಕ್ಕಾಗಿ ಅರಣ್ಯ ಇಲಾಖೆಯವರು ನೋಟಿಸ್ ನೀಡಿದ್ದರು. ಈ ಕ್ರಮ ಸ್ಥಳೀಯರಲ್ಲಿ ಆಕ್ರೋಶ ಹುಟ್ಟಿಸಿ ಪ್ರತಿಭಟನೆಗೂ ಕಾರಣವಾಗಿತ್ತು. ಈ ಹಿನ್ನೆಲೆ ಶಾಸಕ…

ಸಾಗರ

ಶಿವಮೊಗ್ಗ: ಉಳ್ಳೂರಲ್ಲಿ KSRTC ಬಸ್ ನಿಲ್ಲಿಸುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ

ಶಿವಮೊಗ್ಗ:ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬಸ್ಸುಗಳನ್ನು ಕಡ್ಡಾಯವಾಗಿ ನಿಲ್ಲಿಸುವಂತೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸೂಚನೆ ನೀಡಿದ್ದಾರೆ. ಶಾಸಕನಿಂದ ಸೂಚನೆ ಶಿವಮೊಗ್ಗ…

ಶಿವಮೊಗ್ಗ

ಸಂದೇಶ ನೀಡುವ ರಚನಾತ್ಮಕ ಚಲನಚಿತ್ರಗಳು ಮೂಡಿಬರಲಿ: ಮಧು ಬಂಗಾರಪ್ಪ

ಶಿವಮೊಗ್ಗ: “ರಾಜಕಾರಣದಲ್ಲಿ ಜಾತಿ, ಧರ್ಮದ ಸೋಂಕು ತಗುಲಿರುವ ಈ ಕಾಲದಲ್ಲಿ, ಸಮಾಜಕ್ಕೆ ಹಿತದ ಸಂದೇಶ ನೀಡುವ ಹಾಗೂ ಮನೋರಂಜನೆಯ ಜೊತೆಗೆ ಜಾಗೃತಿ ಮೂಡಿಸುವ ರಚನಾತ್ಮಕ ಚಲನಚಿತ್ರಗಳ ನಿರ್ಮಾಣವಾಗಬೇಕು” ಎಂದು ರಾಜ್ಯ ಶಾಲಾ ಶಿಕ್ಷಣ…

ಹೊಸನಗರ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ | ಬಿಲ್ಲವ ಎಂದೇ ಬರೆಸಿ ; ಸುಮತಿ ಪೂಜಾರ್

ಹೊಸನಗರ ; ರಾಜ್ಯ ಸರ್ಕಾರ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದ್ದು ನಮ್ಮ ಸಮಾಜದವರು ಬಿಲ್ಲವ ಎಂದೇ ನಮೂದಿಸಬೇಕು ಎಂದು ಹೊಸನಗರ ಬಿಲ್ಲವ ಸಮಾಜದ ಅಧ್ಯಕ್ಷೆ ಸುಮತಿ ಆರ್. ಪೂಜಾರ್ ತಿಳಿಸಿದರು. ಬಿಲ್ಲವ ಸಮಾಜದ…

ಸಾಗರ

ಇಂದಿನಿಂದ ‘ನವರಾತ್ರ ನಮಸ್ಯಾ’ ಸಮಾಜ ಸಂಭ್ರಮ ಕಾರ್ಯಕ್ರಮ

ಸಾಗರ:ಸಾಗರದ ರಾಘವೇಶ್ವರ ಸಭಾಭವನದಲ್ಲಿ ನಡೆಯಲಿರುವ ‘ನವರಾತ್ರ ನಮಸ್ಯಾ ಸಮಾಜ ಸಂಭ್ರಮ’ ಕಾರ್ಯಕ್ರಮಕ್ಕೆ ಭಾನುವಾರ ಭವ್ಯ ಚಾಲನೆ ದೊರಕಿತು. ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪುರಪ್ರವೇಶವು ಸಾವಿರಾರು…

ಹೊಸನಗರ

ಹೊಸನಗರ ; ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ 80ನೇ ವರ್ಷದ ಸರ್ವ ಸದಸ್ಯರ ಸಭೆ | ಬಡವರ ಏಳಿಗೆಗೆ ಬ್ಯಾಂಕ್‌ ಶ್ರಮಿಸುತ್ತಿದೆ ; ಎಂ.ವಿ. ಜಯರಾಮ್

ಹೊಸನಗರ : ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಗ್ರಾಮೀಣ ಬ್ಯಾಂಕ್ ಅಭಿವೃದ್ಧಿಗಾಗಿ ಸುಮಾರು 30 ವರ್ಷಗಳಿಂದ ಅಧ್ಯಕ್ಷರಾಗಿ ಸಾಕಷ್ಟು ಬಾರಿ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿದ್ದು ನನ್ನ ಕಾಲಾವಧಿಯಲ್ಲಿ ಬ್ಯಾಂಕ್‌ಗೆ ಯಾವುದೇ ಚ್ಯುತಿ ಬಾರದಂತೆ…

ತೀರ್ಥಹಳ್ಳಿ

ಆಗುಂಬೆ ಘಾಟಿ ಕಾರ್ಯಾಚರಣೆ ಪೂರ್ಣ: ವಾಹನ ಸಂಚಾರ ಪುನಾರಂಭ

ತೀರ್ಥಹಳ್ಳಿ ಆಗುಂಬೆ ಘಾಟಿಯಲ್ಲಿ ಶುಕ್ರವಾರ ಸಂಜೆ ಧರೆ ಕುಸಿತ ಮತ್ತು ಮರ ಬಿದ್ದು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ರಸ್ತೆಗೆ ಅಡ್ಡಲಾಗಿ ಬಿದ್ದ ಮರ ಹಾಗೂ ಮಣ್ಣನ್ನು ತೆರವು ಮಾಡುವ ಕಾರ್ಯಾಚರಣೆ ಇಂದು…

ಭದ್ರಾವತಿ

ಭದ್ರಾವತಿಯಲ್ಲಿ ಚೆಡ್ಡಿ ಗ್ಯಾಂಗ್ ಹಾವಳಿ: 10 ಮನೆಗಳಲ್ಲಿ ಓಡಾಟ, ಭದ್ರಾ ನದಿಯಿಂದ ಪರಾರಿ

ಭದ್ರಾವತಿ :ಭದ್ರಾವತಿಯಲ್ಲಿ ಚೆಡ್ಡಿ ಗ್ಯಾಂಗ್ ಮತ್ತೆ ಸಕ್ರಿಯವಾಗಿರುವ ಘಟನೆ ಬೆಳಕಿಗೆ ಬಂದಿದೆ. ನಗರದ ಸಿದ್ದರೂಢ ನಗರ ಪ್ರದೇಶದಲ್ಲಿ ಸುಮಾರು 10 ಮನೆಗಳಲ್ಲಿ ಓಡಾಡಿದ ಗ್ಯಾಂಗ್, ಬಳಿಕ ಪೊಲೀಸರನ್ನ ಕಂಡೊಡನೆ ಭದ್ರ ನದಿಯ ಮೂಲಕ…