Ripponpete

ತಳಲೆ ಸಹಕಾರ ಸಂಘದ ಚುನಾವಣೆ ; ಗೆಲುವಿನ ನಗೆ ಬೀರಿದ ದಿನೇಶ್ ತಂಡ

RIPPONPETE ; ತಳಲೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತಳಲೆ ಹೆಚ್.ಎಸ್.ದಿನೇಶ್ ತಂಡ ಭರ್ಜರಿ ಗೆಲುವಿನೊಂದಿಗೆ ಆಡಳಿತದ ಚುಕ್ಕಾಣಿ ಹಿಡಿಯಲು ಯಶಸ್ವಿಯಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಸಾಮಾನ್ಯ ಸಾಲಗಾರ ಕ್ಷೇತ್ರದಿಂದ ಹೆಚ್.ಎಸ್.ದಿನೇಶ್‌ಗೌಡ, ಹೆಚ್.ಎಸ್.ಗಂಗಾಧರ ಹಾರಂಬಳ್ಳಿ, ಕೆ.ಜಿ.ಬಸಪ್ಪ ದೋಬೈಲು, ಈ.ಡಿ.ಮಂಜುನಾಥ ಕಲ್ಲೂರು, ಹೆಚ್.ಎನ್.ಅಭಿಷೇಕ ಹೆದ್ದಾರಿಪುರ, ಬಿಸಿಎಂ ಎ ಯಿಂದ ಕೆ.ಆರ್ ಮಂಜುನಾಥ ಕಳಸೆ, ಬಿಸಿಎಂ ಬಿ ಯಿಂದ ಕೆ.ಎಸ್.ಲೋಕಪ್ಪಗೌಡ ಕಲ್ಲೂರು, ಸಾಲಗಾರರಲ್ಲದ ಕ್ಷೇತ್ರದಿಂದ ಡಾಕಪ್ಪ ಕಲ್ಲೂರು, ಎಸ್.ಟಿ. ಕ್ಷೇತ್ರದಿಂದ ಗಣೇಶ ಬೆಳ್ಳೂರು, ಮಹಿಳಾ ಮೀಸಲು ಕ್ಷೇತ್ರದಿಂದ ಗೌರಮ್ಮ ತಳಲೆ, ಶೇಷಮ್ಮ ತಳಲೆ ಇವರು ಅತಿ ಹೆಚ್ಚು ಮತ ಗಳಿಸುವ ಮೂಲಕ ಭರ್ಜರಿ ಜಯಗಳಿಸಿದ್ದಾರೆ.

ಅಭಿನಂದನೆ :

ಕಳೆದ ಮೂರು ಬಾರಿಯಲ್ಲಿ ತಳಲೆ ಹೆಚ್.ಎಸ್.ದಿನೇಶಗೌಡ ತಳಲೆ ಸಹಕಾರ ಸಂಘದ ಅಧ್ಯಕ್ಷರಾಗಿ ಸಂಘವನ್ನು ಲಾಭದತ್ತ ತರುವುದರೊಂದಿಗೆ ರೈತರ ಬ್ಯಾಂಕ್ ಎಂಬ ನಾಮದ್ಯೇಯದ ಮೂಲಕ ತಮ್ಮ ಪ್ರಮಾಣಿಕ ಸೇವೆಯನ್ನು ಸಲ್ಲಿಸುವುದರೊಂದಿಗೆ ಮತದಾರರ ಮನಸ್ಸು ಗೆಲುವುದರಲ್ಲಿ ಯಶಸ್ವಿಯಾಗಿದ್ದಾರೆಂದು ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಪರಮೇಶ್ ಹೇಳಿ ಅಭಿನಂದಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಸಹಕಾರ ಭಾರತಿಯವರು ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸುವ ಮೂಲಕ ಬಾರಿ ಸ್ಪರ್ಧೆಯನ್ನು ನೀಡಲು ಮುಂದಾಗಿ ಹಣ ಜಾತಿ ರಾಜಕಾರಣವನ್ನು ಮುಂದೆ ಮಾಡಿ ಎಷ್ಟೇ ಪ್ರಯತ್ನಿಸಿದರೂ ಮತದಾರರು ಮಾತ್ರ ಸಹಕಾರ ಸಂಘದಲ್ಲಿ ಜಾತಿ ಹಣ ಯಾವುದನ್ನು ಪರಿಗಣಿಸದೇ ಪ್ರಾಮಾಣಿಕತೆಗೆ ಹೆಚ್ಚು ಒತ್ತು ನೀಡುವ ಮೂಲಕ ಸಂಘದ ಸರ್ವೋತ್ತಮ ಪ್ರಗತಿಗೆ ದಿನೇಶಗೌಡ ಬೆಂಬಲಿತ ನಿರ್ದೇಶಕರ ತಂಡವನ್ನು ಭರ್ಜರಿ ಜಯ ಗಳಿಸುವಂತೆ ಮಾಡಿದ್ದಾರೆಂದರು.

ಈ ಸಂದರ್ಭದಲ್ಲಿ ಕಲ್ಲೂರು ಈರಪ್ಪ ಮತ್ತು ಸಂಘದ ನೂತ ಆಡಳಿತ ಮಂಡಳಿ ನಿರ್ದೇಶಕರು ಹಾಜರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]