ರಿಪ್ಪನ್‌ಪೇಟೆ ; ಕೋಡೂರು ಬಳಿಯ ಅಮ್ಮನಘಟ್ಟ ಬಸ್ ನಿಲ್ದಾಣದಲ್ಲಿ ಚಿನ್ನದ ಚೈನ್ ಸರವೊಂದು ಶಿಕ್ಷಕಿ ಪಾರ್ವತಿಬಾಯಿ ಎಂಬುವರಿಗೆ ಸಿಕ್ಕಿದ್ದು ಅದನ್ನು ರಿಪ್ಪನ್‌ಪೇಟೆ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಮೂಲಕ ಠಾಣೆಗೆ ತಲುಪಿಸುವ ಮೂಲಕ ತಮ್ಮ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
ಈ ಸರ ಮಲ್ಲಾಪುರ ಶಿವಕುಮಾರ್ ಎಂಬುವರಿಗೆ ಸೇರಿದಾಗಿದೆ ಎಂದು ಹೇಳಲಾಗಿದ್ದು ಇಂದು ಠಾಣೆಯಲ್ಲಿ ವಾರಸುದಾರರಿಗೆ ತಲುಪಿಸಿದರು.
ಈ ಸಂದರ್ಭದಲ್ಲಿ ಕೋಡೂರು ಗ್ರಾಮ ಪಂಚಾಯಿತ್ ಅಧ್ಯಕ್ಷ ಜಯಪ್ರಕಾಶಶೆಟ್ಟಿ ಹಾಗೂ ಇನ್ನಿತರ ಪೊಲೀಸ್ ಸಿಬ್ಬಂದಿವರ್ಗ ಹಾಜರಿದ್ದರು.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

