MUDIGERE | ಕಾಫಿ ತೋಟಕ್ಕೆ ಕಬ್ಬಿಣದ ಏಣಿಯನ್ನು ಕೊಂಡೊಯ್ಯುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಕಾಫಿ ಬೆಳೆಗಾರನೋರ್ವ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಬ್ಗಲ್ ಗ್ರಾಮದಲ್ಲಿ ನಡೆದಿದೆ.
ಬೈಕ್ ಮತ್ತು ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ, ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ !
ಪ್ರಸನ್ನ ಸಾಲ್ಡನ್ (48) ಮೃತ ದುರ್ಧೈವಿ. ಈತ ಮನೆಯಲ್ಲಿ ಬೇರೆ ಕೆಲಸದ ನಿಮಿತ್ತ ಕಾಫಿ ತೋಟದಿಂದ ಕಬ್ಬಿಣದ ಏಣಿಯನ್ನ ಮನೆಗೆ ತಂದಿದ್ದರು. ಕೆಲಸವಾದ ಬಳಿಕ ಏಣಿಯನ್ನ ಮತ್ತೆ ಕಾಫಿ ತೋಟಕ್ಕೆ ಇಡಲು ಗುರುವಾರ ಮಧ್ಯಾಹ್ನ ವೇಳೆ ಗಬ್ಗಲ್ ಗ್ರಾಮದ ಶಾಲೆ ಪಕ್ಕ ಎತ್ತರದ ಪ್ರದೇಶದಲ್ಲಿರುವ ಕಾಫಿ ತೋಟಕ್ಕೆ ಏಣಿಯನ್ನು ಹೊತ್ತುಕೊಂಡು ಹೋಗುತ್ತಿದ್ದ ವೇಳೆ ಅಲ್ಲೇ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಏಣಿ ತಗುಲಿದೆ. ಇದರಿಂದ ವಿದ್ಯುತ್ ಆಘಾತಕ್ಕೆ ಒಳಗಾಗಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಇತ್ತೀಚೆಗೆ ಸುರಿದ ಭಾರೀ ಗಾಳಿ, ಮಳೆಗೆ ವಿದ್ಯುತ್ ತಂತಿಗಳು ಕೂಡ ಜಗ್ಗಿದ್ದವು. ಅತ್ಯಂತ ಕೆಳಭಾಗದಲ್ಲಿ ಇದ್ದ ವಿದ್ಯುತ್ ತಂತಿಗಳಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Gruha Lakshmi DBT Status : ಸೇವಾ ಸಿಂಧುವಿನಲ್ಲಿ ಗೃಹಲಕ್ಷ್ಮಿ ಡಿಬಿಟಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ ?

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.