Ripponpete

ಸರ್ವ ಧರ್ಮದ ಸಾರವೂ ಒಂದೇ, ಅಶಾಂತಿ ಕದಡುವವರ ವಿರುದ್ಧ ಸರ್ಕಾರಗಳು ದಿಟ್ಟ ಕ್ರಮ ಕೈಗೊಳ್ಳಲಿ

ರಿಪ್ಪನ್‌ಪೇಟೆ ; ಹಿಂದೂ ಮುಸ್ಲಿಂ ಕ್ರಿಶ್ಚಿಯನ್‌ ಎಂಬ ಭೇದ-ಭಾವನೆ ಮಾಡದೆ ನಾವುಗಳಲ್ಲರೂ ಒಂದೇ ಎಲ್ಲ ಧರ್ಮದ ಸಾರವೂ ಒಂದೆಯಾಗಿದೆ ಎಂದು ತೀರ್ಥಹಳ್ಳಿ ಕ್ರಿಶ್ಚಿಯನ್ ಧರ್ಮಗುರು ವೀರೇಶ್ ಮೊರಸ್ ಹೇಳಿದರು.

WhatsApp Group Join Now
Telegram Group Join Now
Instagram Group Join Now

ರಿಪ್ಪನ್‌ಪೇಟೆಯ ಜುಮ್ಮಾ ಮಸೀದಿಯ ಎಸ್.ಎಸ್.ಎಫ್.ನವರು ಆಯೋಜಿಸಲಾದ ಸೌಹಾರ್ದ ನಡಿಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲ ಉಪನದಿಗಳು ಸಮುದ್ರವನ್ನು ಸೇರುತ್ತವೆ ಹಾಗೆ ಆಯಾ ಧರ್ಮದವರು ಕೊನೆಯಲ್ಲಿ ಸೇರುವುದು ಸ್ಮಶಾನಕ್ಕೆ ಎಂದು ಹೇಳಿ, ಧಾರ್ಮಿಕ ಗುರುಗಳಾದವರು ಧರ್ಮಭೋದನೆ ಮಾಡುವ ಮೂಲಕ ಸಮಾಜದ ಸಂಘಟನೆ ಮಾಡಬೇಕು, ಆದರೆ ಧರ್ಮಭೋದನೆ ಬಿಟ್ಟು ರಾಜಕೀಯ ನಾಯಕರು ಬೆಂಬಲಕ್ಕೆ ನಿಂತಿದ್ದಾರೆ. ಮುಂದಿನ ದಿನಗಳಲ್ಲಿ ಇದು ಸಮಾಜದಲ್ಲಿ ಸಾಮರಸ್ಯಕ್ಕೆ ಅಪಾಯಕಾರಿಯಾಗಲಿದೆ ಎಂದರು.

ಒಂದು ದೇಶ, ಒಂದು ಸಮಾಜ, ಒಂದು ಧರ್ಮಕ್ಕೆ ಗೌರವ ಉಂಟಾಗಬೇಕಾದರೆ ಜಾತಿ ಮತ ಪಂಥಾಗಳ ಭೇದವನ್ನು ಮರೆತು ಎಲ್ಲ ಧರ್ಮವರು ಮತ್ತು ಜಾತಿಯವರು ಸಾಮರಸ್ಯದಿಂದ ಬದುಕಿ ಒಗ್ಗಟಾಗಿದ್ದರೆ ದೇಶದಲ್ಲಾಗಲಿ ಸಮಾಜದಲ್ಲಿಗಲಿ ಯಾವುದೇ ಒಡಕುಗಳಾಗಲಿ ಕೆಡಕುಗಳಾಗಲಿ ಉಂಟಾಗುವುದಿಲ್ಲ ನಾವುಗಳಲ್ಲಾ ಒಂದೇ ಎಂಬ ಮನೋಭಾನವೆ ಬೆಳೆಸಿಕೊಳ್ಳಬೇಕು ಎಂದರು.

ಮಳಲಿಮಠದ ಪೀಠಾಧ್ಯಕ್ಷ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ಆಶೀರ್ವಚನ ನೀಡಿ, ಮುಸ್ಲಿಂರ ನಿಷ್ಟೆ. ಕ್ರಿಶ್ಚಯನ್‌ರ ಕರುಣೆ ಹಿಂದೂಗಳ ಭಾವೈಕ್ಯತೆಯಿಂದಾಗಿ ಸಮಾಜದಲ್ಲಿ ಸೌಹಾರ್ದತೆಯ ಭಾವನೆ ಬೆಳೆಸಲು ಸಾಧ್ಯವೆಂದು ಹೇಳಿ, ಸಿದ್ದಾಂತ ಶಿಖಾಮಣಿಯ ಧರ್ಮಗ್ರಂಥದ ಸಾರವು ಸರ್ವ ಧರ್ಮದ ಪರಿಪಾನೆಯಿಂದ ಸಮಾಜದಲ್ಲಿ ಸಾಮರಸ್ಯ ಬೆಳೆಸಲು ಸಾಧ್ಯ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ರಾಜ್ಯ ಎಸ್.ಎಸ್.ಎಫ್ ಅಧ್ಯಕ್ಷ ಸೂಫಿಯನ್ ಶಖಾಪಿ ಮಾತನಾಡಿ, ಎಲ್ಲ ಧರ್ಮದಲ್ಲಿ ಶೇ.10 ಕ್ಕೂ ಅಧಿಕ ಜನರು ಸಮಾಜದಲ್ಲಿ ಕೋಮುಭಾವನೆಯಿಂದ ಅಶಾಂತಿ ಹುಟ್ಟು ಹಾಕುತ್ತಿದ್ದು ಇದರಿಂದ ಧರ್ಮ ಧರ್ಮ ಜಾತಿ ಜಾತಿಯಲ್ಲಿ ಅರಾಜಕತೆ ಸೃಷ್ಟಿಯಾಗುವಂತಾಗಿದೆ ಎಂದು ವಿಷಾದವನ್ನು ವ್ಯಕ್ತಪಡಿಸಿದ ಅವರು, ಸಮಾಜದಲ್ಲಿ ಶಾಂತಿ ನೆಮ್ಮದಿಯಿಂದ ಇದ್ದರೆ ಮಾತ್ರ ದೇಶದಲ್ಲಿ ನೆಮ್ಮದಿಯ ಬದುಕನ್ನು ಕಂಡುಕೊಳ್ಳುವುದರ ಮೂಲಕ ರಾಷ್ಟ್ರಾಭಿವೃದ್ದಿಗೆ ಸಹಕಾರಿಯಾಗುವುದೆಂದು ಹೇಳಿದರು.

ಜುಮ್ಮಾ ಮಸೀದಿ ಧರ್ಮಗುರು ಮಹ್ಮದ್‌ಸಖಾಫಿ, ಮುಸ್ಲಿಂ ಮುಖಂಡರಾದ ಆರ್.ಎ.ಚಾಬುಸಾಬ್, ಆರ್.ಎ. ಅಮೀರ್‌ಹಂಜಾ, ಗ್ರಾಮ ಪಂಚಾಯಿತ್ ಅಧ್ಯಕ್ಷೆ ಧನಲಕ್ಷ್ಮಿ, ಆಸಿಫ್‌ಭಾಷಾ, ಜುಮ್ಮಾ ಮಸೀದಿಯ ಅಧ್ಯಕ್ಷ ಹಸನಬ, ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ, ಜನಪರ ಹೋರಾಟ ವೇದಿಕೆ ಅಧ್ಯಕ್ಷ ಆರ್.ಎನ್.ಮಂಜುನಾಥ, ನಿರೂಪ್ ಕುಮಾರ್, ಆಟೋ ಗಫೂರ್, ಶೇಖಅಬ್, ಮುನೀರ್, ಇದೇ ಸಂದರ್ಭದಲ್ಲಿ ಜಮ್ಮಾ ಮಸೀದಿಯಿಂದ ನಾಲ್ಕು ಪ್ರಮುಖ ರಸ್ತೆಯಲ್ಲಿ ಎಸ್.ಎಸ್.ಎಫ್ ನಿಂದ ಪಥ ಸಂಚಲನ ನಡೆಸಿದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!