ಶಿಕಾರಿಪುರ

ಈಡಿಗ ಸಮಾಜದ ಒಳಪಂಗಡಗಳು ಒಂದಾಗದಿದ್ದರೆ ಅಸ್ತಿತ್ವಕ್ಕೆ ಧಕ್ಕೆ: ಉಪನ್ಯಾಸಕಿ ಡಿ.ಪಿ. ಪ್ರತಿಭಾ

ಶಿಕಾರಿಪುರ: “ರಾಜ್ಯದಾದ್ಯಂತ ವಿಸ್ತರಿಸಿರುವ ಈಡಿಗ ಸಮಾಜದ ಜನರು ಬೇರೆ ಬೇರೆ ಪ್ರದೇಶಗಳಲ್ಲಿ ಭಿನ್ನ ಹೆಸರುಗಳಿಂದ ಗುರುತಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಪೂಜಾರಿ, ಮಲೆನಾಡು ಭಾಗಗಳಾದ ಸಾಗರ, ಸೊರಬ, ತೀರ್ಥಹಳ್ಳಿ ಹಾಗೂ ಹೊಸನಗರಗಳಲ್ಲಿ ದೀವರು, ಶಿರಸಿ ಪ್ರದೇಶದಲ್ಲಿ ನಾಮಧಾರಿ ನಾಯಕರು ಮತ್ತು ಬೆಂಗಳೂರು-ಮೈಸೂರು ಭಾಗಗಳಲ್ಲಿ ಈಡಿಗರು ಎಂದು ಕರೆಯಲ್ಪಡುತ್ತಾರೆ. ಈ ಎಲ್ಲ ಒಳಪಂಗಡಗಳು ಒಂದಾಗದಿದ್ದರೆ ಸಮುದಾಯದ ಅಸ್ತಿತ್ವವೇ ಚಿದ್ರವಾಗುತ್ತದೆ” ಎಂದು ಶಿವಮೊಗ್ಗದ ಬಸವೇಶ್ವರ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕಿ ಡಿ.ಪಿ. ಪ್ರತಿಭಾ ಎಚ್ಚರಿಸಿದರು.

ಈಡಿಗ ಸಮಾಜದ ಒಳಪಂಗಡಗಳು ಒಂದಾಗದಿದ್ದರೆ ಅಸ್ತಿತ್ವಕ್ಕೆ ಧಕ್ಕೆ Prathibha

ಶಿಕಾರಿಪುರ: “ರಾಜ್ಯದಾದ್ಯಂತ ವಿಸ್ತರಿಸಿರುವ ಈಡಿಗ ಸಮಾಜದ ಜನರು ಬೇರೆ ಬೇರೆ ಪ್ರದೇಶಗಳಲ್ಲಿ ಭಿನ್ನ ಹೆಸರುಗಳಿಂದ ಗುರುತಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಪೂಜಾರಿ, ಮಲೆನಾಡು ಭಾಗಗಳಾದ ಸಾಗರ, ಸೊರಬ, ತೀರ್ಥಹಳ್ಳಿ ಹಾಗೂ ಹೊಸನಗರಗಳಲ್ಲಿ ದೀವರು, ಶಿರಸಿ ಪ್ರದೇಶದಲ್ಲಿ ನಾಮಧಾರಿ ನಾಯಕರು ಮತ್ತು ಬೆಂಗಳೂರು-ಮೈಸೂರು ಭಾಗಗಳಲ್ಲಿ ಈಡಿಗರು ಎಂದು ಕರೆಯಲ್ಪಡುತ್ತಾರೆ. ಈ ಎಲ್ಲ ಒಳಪಂಗಡಗಳು ಒಂದಾಗದಿದ್ದರೆ ಸಮುದಾಯದ ಅಸ್ತಿತ್ವವೇ ಚಿದ್ರವಾಗುತ್ತದೆ” ಎಂದು ಶಿವಮೊಗ್ಗದ ಬಸವೇಶ್ವರ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕಿ ಡಿ.ಪಿ. ಪ್ರತಿಭಾ ಎಚ್ಚರಿಸಿದರು.

WhatsApp Group Join Now
Telegram Group Join Now
Instagram Group Join Now

ಪಟ್ಟಣದ ಪೌರವಿಹಾರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಶ್ರೀ ನಾರಾಯಣಗುರು ಈಡಿಗರ ಬಳಗದ ವಾರ್ಷಿಕ ಮಹಾಸಭೆಯಲ್ಲಿ ಅವರು ಪ್ರಧಾನ ಭಾಷಣ ಮಾಡಿ, “ಇಂದಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಅಂತಹ ಒಗ್ಗಟ್ಟಿನ ಕುಟುಂಬ ವ್ಯವಸ್ಥೆಯನ್ನು ಮರುಸ್ಥಾಪಿಸುವ ಅಗತ್ಯವಿದೆ. ಸಂಸ್ಥೆಗಳು ಸಹ ಕುಟುಂಬದ ರೀತಿಯಲ್ಲೇ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಪ್ರಗತಿ ಸಾಧ್ಯ” ಎಂದರು.

ಮುಂದುವರಿದು ಮಾತನಾಡಿದ ಅವರು, “ಈಡಿಗ ಸಮುದಾಯವು ಸ್ವಾಭಿಮಾನಿ ಹಾಗೂ ಶ್ರಮಜೀವಿ ಸಮಾಜವಾಗಿದೆ. ಪ್ರಸ್ತುತ ಪ್ರತಿಯೊಂದು ರಂಗದಲ್ಲೂ ನಮ್ಮವರ ಪ್ರಾತಿನಿಧ್ಯವಿದ್ದರೂ, ಸಮಾಜದ ಹಿತರಕ್ಷಣೆ ನಮ್ಮ ಮುಖ್ಯ ಗುರಿಯಾಗಬೇಕು. ಮಲೆನಾಡು ಭಾಗದಲ್ಲಿ ಕೃಷಿಯೇ ಮೂಲ ಆಧಾರವಾಗಿದ್ದು, ಹಲವರು ತಮ್ಮ ಸಾಂಪ್ರದಾಯಿಕ ಕಸುಬನ್ನು ನೆಚ್ಚಿಕೊಂಡಿದ್ದಾರೆ. ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಸಮುದಾಯದ ಏಳಿಗೆಗೆ ಶ್ರಮಿಸೋಣ” ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಳಗದ ಅಧ್ಯಕ್ಷ ಚಾಮರಾಜ್ ಮಾತನಾಡಿ, “ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಗತ್ಯ ನೆರವು ತಲುಪಬೇಕು ಮತ್ತು ನಮ್ಮ ಸಂಘಟನೆ ಇನ್ನಷ್ಟು ಶಕ್ತಿಯುತವಾಗಿ ಬೆಳೆಯಬೇಕು. ನಮ್ಮ ಜನಾಂಗದವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಈಡಿಗ ಸಮುದಾಯವು ಎಂದಿಗೂ ಸಮಾಜಮುಖಿ ಚಿಂತನೆ ಉಳ್ಳದ್ದಾಗಿದೆ” ಎಂದು ತಿಳಿಸುತ್ತಾ, ಸಂಘದ ಬೆಳವಣಿಗೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳ ಪೋಷಕರನ್ನು ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ತಾಲೂಕು ಅಧ್ಯಕ್ಷ ಮುಡುಬಾ ಸಿದ್ದಾಪುರ ಪ್ರಕಾಶ್, ಸಂಘದ ಪದಾಧಿಕಾರಿಗಳಾದ ಕೊಡಕಣಿ ದೇವರಾಜ್, ದುರ್ಗಪ್ಪ, ಜಯರಾಮ್, ದಾನಶೇಖರ, ಕೃಷ್ಣಮೂರ್ತಿ, ಗೋಪಾಲಪ್ಪ, ನಾಗರಾಜ ಬೇಕರಿ, ರಾಮಚಂದ್ರ, ಬಸವರಾಜ್, ಪ್ರಭಾಕರ್, ವಿಜಯಕುಮಾರ, ನಾಗರಾಜಪ್ಪ, ಜಗದೀಶ್, ರವಿ ಕುಮಾರ್ ಹಾಗೂ ಸಮಾಜದ ಹಲವು ಪ್ರಮುಖರು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]