ಹೊಸನಗರ

ಕುಂಬಾರ ಜನಾಂಗದವರು ಅತ್ಯಂತ ಪ್ರಾಮಾಣಿಕದಿಂದ ಜೀವನ ನಡೆಸುತ್ತಿರುವುದು ಸಮಾಜಕೊಂದು ಕೊಡುಗೆ ; ಆರಗ ಜ್ಞಾನೇಂದ್ರ

ಹೊಸನಗರ ; ಕುಂಬಾರ ಜನಾಂಗದವರು ಅತ್ಯಂತ ಪ್ರಾಮಾಣಿಕದಿಂದ ಜೀವನ ನಡೆಸುತ್ತಿರುವುದು ಸಮಾಜಕೊಂದು ಕೊಡುಗೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಅವರು ಇಂದು ಮೇಲಿನಬೆಸಿಗೆ ಗ್ರಾ.ಪಂ ವ್ಯಾಪ್ತಿಯ ಹೇರಗಲ್ಲಿನಲ್ಲಿ ನಡೆದ ಹೊಸನಗರ ತಾಲೂಕು ಕುಂಬಾರರ ಸಂಘದ 18ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಇಂದಿನ ಫೈಬರ್, ಪ್ಲಾಸ್ಟಿಕ್ ಯುಗದಲ್ಲಿ ಕುಂಬಾರಿಕೆ ವ್ಯಕ್ತಿಗೆ ದೊಡ್ಡ ಪೆಟ್ಟು ಬಿದ್ದಿದ್ದು ಕುಂಬಾರ ಕುಟುಂಬದವರ ಜೀವನ ಶೈಲಿ ಅಯೋಮಯವಾಗಿದ್ದರು ಈಗ ಕುಟುಂಬದ ಯುವಕ-ಯುವತಿಯರು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು.

ಈ ಸಮಾರಂಭದಲ್ಲಿ ಜನಾಂಗದ ಹಿರಿಯರನ್ನು ಗುರುತಿಸಿ ಗೌರವಿಸುತ್ತಿರುವುದರ ಜೊತೆಗೆ ಸಾಧಕ ವ್ಯಕ್ತಿಗಳನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುತ್ತಿರುವ ಕಾರ್ಯ ತ್ಯಾಗೀಯವಾಗಿದೆ ಎಂದರು.

ತಾಲೂಕು ಸಂಘದ ಅಧ್ಯಕ್ಷ ಹಿಂಡ್ಲೆಮನೆ ಎಲ್. ಶೇಖರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಉಪಾಧ್ಯಕ್ಷೆ ಪೂರ್ಣಿಮಾ ಸೋಮಶೇಖರ್, ಸದಸ್ಯರಾದ ಜ್ಯೋತಿ ನಾಗರಾಜ್, ಜಿ. ನಾಗರಾಜ್, ಎನ್ ಸತೀಶ್, ಕೆ ಅರವಿಂದ, ಗಣಪತಿ, ಕುಮಾರ, ಎಚ್.ವಿ ಗಣೇಶ್ ಯೋಗೇಂದ್ರ ಎಂ.ಎನ್, ಮಂಜಪ್ಪ, ಸರಿತಾ ವಾಸುದೇವ, ದುಗ್ಗಪ್ಪ, ದೇವೇಂದ್ರ, ಪಾರ್ವತಮ್ಮ ರಮೇಶ, ಉಮೇಶ ಮೊದಲಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಸಮಾಜದ ಹಿರಿಯರಾದ ಹೇರಗಲ್ಲು ಹೊನ್ನಮ್ಮ, ದೊಡ್ಮನೆ ವೆಂಕಟೇಶರನ್ನು ರಾಜ್ಯ ಮಟ್ಟದ ಕ್ರೀಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾವಂತರಿಗೆ ಹಾಗೂ ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ನಗರ ಸಿಆರ್‌ಪಿ ರವಿ ಕೆ.ಆರ್ ಉಪನ್ಯಾಸ ನೀಡಿದರು. ಕು. ನಂದಿನಿ ಸ್ವಾಗತ ನೃತ್ಯ ಅಭಿನಯಿಸಿದರು. ಎನ್ ಅಮೂಲ್ಯ ಹಾಗೂ ಕೆ ಸ್ನೇಹ ವಾರ್ಷಿಕ ವರದಿ ಓದಿದರು. ರೇವತಿ ರಾಜು ಸ್ವಾಗತಿಸಿದರು. ಜಿ ಪ್ರವೀಣ ಅಭಾರ ಮನ್ನಿಸಿದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]