DCC ಬ್ಯಾಂಕ್ ವ್ಯವಸ್ಥಾಪಕ ಹಾಲಪ್ಪರ ಸೇವೆ ಅಮೋಘವಾದದ್ದು ; ಎಂ.ಎಂ. ಪರಮೇಶ್

Written by Mahesha Hindlemane

Published on:

ಹೊಸನಗರ ; ಸತತ 29 ವರ್ಷಗಳ ಕಾಲ ಡಿ.ಸಿ.ಸಿ ಬ್ಯಾಂಕ್‌ಗಳಲ್ಲಿ ವಿವಿಧ ಶಾಖೆಗಳಲ್ಲಿ ಗುಮಾಸ್ಥರಾಗಿ ವ್ಯವಸ್ಥಾಪಕರಾಗಿ ಡಿ.ಸಿ.ಸಿ ಬ್ಯಾಂಕ್‌ಗೆ ಅಪಾರ ಕೊಡುಗೆ ನೀಡಿದ್ದಾರೆ ಇವರ ಸೇವೆ ಡಿ.ಸಿ.ಸಿ ಬ್ಯಾಂಕ್‌ಗೆ ಅಮೋಘವಾಗಿದೆ ಎಂದು ಡಿ.ಸಿ.ಸಿ ನಿರ್ದೇಶಕ ಎಂ.ಎಂ. ಪರಮೇಶ್ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಪಟ್ಟಣದ ಡಿ.ಸಿ.ಸಿ ಬ್ಯಾಂಕ್ ಸಭಾಂಗಣದಲ್ಲಿ ಸತತ 29 ವರ್ಷಗಳ ಕಾಲ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಾಲಪ್ಪನವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಬೀಳ್ಕೊಡುವ ಸಂದರ್ಭದಲ್ಲಿ ಮಾತನಾಡಿದರು.

ಮಲೆನಾಡು ಪ್ರದೇಶದಲ್ಲಿ ಡಿ.ಸಿ.ಸಿ ಬ್ಯಾಂಕ್ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಕಷ್ಟಕಾಲದಲ್ಲಿ ಜಿ.ಹಾಲಪ್ಪನಂತ ವ್ಯವಸ್ಥಾಪಕರು ಇರುವುದರಿಂದ ಬ್ಯಾಂಕ್‌ಗೆ ಬರುವ ಪ್ರತಿಯೊಬ್ಬ ಗ್ರಾಹಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮಗೆ ನೀಡಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಇವರ ಸೇವೆ ನಮಗೆ ಉತ್ತಮ ಕೊಡಿಗೆಯನ್ನೆ ನೀಡಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ.ಹಾಲಪ್ಪ, ನನಗೆ ಡಿ.ಸಿ.ಸಿ ಉತ್ತಮವಾಗಿ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟಿದೆ ಡಿ.ಸಿ.ಸಿ ಬ್ಯಾಂಕ್‌ನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಉತ್ತಮ ಕೆಲಸ ನಿರ್ವಹಿಸಲು ಸಹಕಾರ ನೀಡಿರುವುದರಿಂದ ನಾನು 29 ವರ್ಷಗಳ ಕಾಲ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಲು ಸಹಕಾರಿಯಾಯಿತು. ನಾನು ನಿವೃತ್ತಿಯಾದರೂ ಮುಂದೆಯು ಸಹ ಡಿ.ಸಿ.ಸಿ ಬ್ಯಾಂಕ್‌ಗೆ ನನ್ನ ಕೊಡುಗೆ ಇದ್ದೇ ಇರುತ್ತದೆ ಎಂದರು.

ವ್ಯವಸ್ಥಾಪಕರಾಗಿ ಕೆ.ಎಸ್.ಪ್ರದೀಪ್ ಅಧಿಕಾರ ಸ್ವೀಕಾರ ;

ಸುಮಾರು 28 ವರ್ಷ ವಿವಿಧ ಶಾಖೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಪ್ರದೀಪ್‌ ಹೊಸನಗರ ಡಿ.ಸಿ.ಸಿ ಬ್ಯಾಂಕ್ ಶಾಖೆಗೆ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿ, ನಾನು 2003-04ನೇ ಸಾಲಿನಲ್ಲಿ ಹೊಸನಗರ ಶಾಖೆಯಲ್ಲಿ ಗುಮಾಸ್ಥರಾಗಿ ಸೇವೆ ಸಲ್ಲಿಸಿದ ಅನುಭವವಿದ್ದು ಇಲ್ಲಿನ ಗ್ರಾಹಕರ ಬಗ್ಗೆ ತಿಳಿದುಕೊಂಡಿದ್ದೇವೆ ಮುಂದಿನ ದಿನದಲ್ಲಿ ಹೊಸನಗರ ಡಿ.ಸಿ.ಸಿ ಬ್ಯಾಂಕ್ ಶಾಖೆಗೆ ಉತ್ತಮ ಕೊಡುಗೆ ನೀಡಲು ಪ್ರಯತ್ನಿಸುತ್ತೇನೆಂದು ಹೇಳಿದರು.

ಬೀಳ್ಕೊಡಿಗೆ ಸಮಾರಂಭದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷವಾಟಗೋಡು ಸುರೇಶ್, ವ್ಯವಸ್ಥಾಪಕರಾದ ಪ್ರದೀಪ್, ಡಿ.ಸಿ.ಸಿ ಬ್ಯಾಂಕ್ ನೌಕರರ ಒಕ್ಕೂಟದ ಅಧ್ಯಕ್ಷ ಮಹಾದೇವಪ್ಪ ಜಿ, ಒಕ್ಕೂಟದ ನಿರ್ದೇಶಕ ಚಂದ್ರಶೇಖರ ಕೆ.ಎಸ್, ಲೋಕೇಶ್, ಕ್ಷೇತ್ರಾಧಿಕಾರಿ ಶಿವಕುಮಾರ್, ಜಯಕರ, ನಾಗರಾಜ್ ಹೆಚ್.ಈ, ಆಂಜನೇಯ, ಆನಂದ, ವೆಂಕಟೇಶ್, ಗುರುಸಿದ್ಧಸ್ವಾಮಿ, ಸುಕೇಶ್ ಅನ್ನಪೂರ್ಣ, ವೀಣಾ, ನಿಟ್ಟೂರು ಪರಮೇಶ್ವರ, ರಾಮಪ್ಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment