Ripponpete

ಧರ್ಮ ಸಂಸ್ಕಾರದಿಂದ ವೀರಶೈವ ಧರ್ಮದ ಉಳಿವಿಕೆ ಅಗತ್ಯ

ರಿಪ್ಪನ್‌ಪೇಟೆ : ಧರ್ಮ ದ್ರೋಹಿಗಳಾದರೆ ಮಾತ್ರ ಪಾಪ ಬರುತ್ತದೆ. ತಾಯಿ-ತಂದೆ, ಅಣ್ಣ-ತಂಗಿ, ಅಕ್ಕ-ತಮ್ಮ, ಲೌಕಿಕ ಸಂಬಂಧ ಯಾವುದು ನಮ್ಮ ಜೊತೆ ಬರುವುದಿಲ್ಲ. ನಾವು ಅರಿಷಡ್ ವರ್ಗಗಳ ಪಾಲನೆಯಿಂದ ಧರ್ಮ ಸಂಸ್ಕಾರವಂತರಾಗಬೇಕು ಎಂದು ಬೀರೂರು ಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

WhatsApp Group Join Now
Telegram Group Join Now
Instagram Group Join Now

ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಉಡೇವು ಬೃಹನ್ಮಠದಲ್ಲಿ ಲಿಂ.ಶಿವಲಿಂಗೇಶ್ವರ ಮಹಾಸ್ವಾಮೀಜಿಯವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ನಮ್ಮ ಮನಸ್ಥಿತಿಯ ಮಲೀನತೆಯನ್ನು ತೊಡೆದು ಹಾಕಿ ಮನಸ್ಸಿನ ಪರಿವರ್ತನೆ ಮಾಡಿಕೊಳ್ಳುವ ಮೂಲಕ ನಮ್ಮ ಧರ್ಮ ಸಂಸ್ಕಾರವನ್ನು ಪರಿಪಾಲಿಸಿದಾಗ ಮಾತ್ರ ನೆಮ್ಮದಿಯನ್ನು ಕಾಣಬಹುದಾಗಿದೆ ಎಂದರು.

ಕೋಣಂದೂರು ಉಡೇವು ಬೃಹನ್ಮಠದಲ್ಲಿ ಲಿಂ.ಶಿವಲಿಂಗೇಶ್ವರ ಮಹಾಸ್ವಾಮೀಜಿಯವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಇದೇ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಎಂಎಸ್ಸಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದ ಬಿಲ್ಲೇಶ್ವರದ ಕು. ಐಶ್ವರ್ಯ ಇವರನ್ನು ಸಮಾಜದ ವತಿಯಿಂದ ಗುರುಗಳ ಸಮ್ಮುಖದಲ್ಲಿ ಶ್ರೀಗಳು ಗುರುರಕ್ಷೆ ನೀಡಿ ಸನ್ಮಾನಿಸಿದರು.

ಮಠದ ಶಾಸ್ತ್ರಿಗಳು ವೇದಘೋಷ ಮಾಡಿದರು. ಶಶಿಕಲಾ ಮಲ್ಲಪ್ಪ ಪ್ರಾರ್ಥಿಸಿದರು. ಜೆ.ಎಂ.ಶಾಂತಕುಮಾರ್ ಸ್ವಾಗತಿಸಿದರು. ರಾಜೇಂದ್ರಗೌಡ ಆವಿನಹಳ್ಳಿ ವಂದಿಸಿದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!