ರಾಷ್ಟ್ರದ ಪರಮ ವೈಭವವೇ ಆರ್.ಎಸ್.ಎಸ್ ಗುರಿ ; ಲೋಹಿತಾಶ್ವ ಕೇದಿಗೆರೆ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಪಟ್ಟಣದ ವಿಶ್ವಮಾನವ ಸಭಾಭವನದಲ್ಲಿ “ಮಂಥನ” ಹೊಸನಗರ ವತಿಯಿಂದ ಸಂವಾದ ಕಾರ್ಯಕ್ರಮ ಜರುಗಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಕೃಷಿಕ್ಷೇತ್ರದ ಸಾಧಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅನಂತಮೂರ್ತಿ ಜವಳಿ ಅವರು ಮತ್ತು ಆರೆಸೆಸ್ಸ್ ನ ತಾಲೂಕು ಸಂಘಚಾಲಕರಾದ ಶ್ಯಾಮಸುಂದರ ಉಪಸ್ಥಿತರಿದ್ದರು.

“ಮಂಥನ” ಕಾರ್ಯಕ್ರಮವು ಸಮಾಜ ನಡುವೆ ಅನೇಕ ಕ್ಷೇತ್ರದಲ್ಲಿ ಕೆಲಸ ಮಾಡುವ ಸಕ್ರಿಯರಿಗೆ ಚಿಂತನ – “ಮಂಥನ” ದಲ್ಲಿ ವಿಷಯಾಧಾರಿತ ಚರ್ಚೆ, ಪ್ರಶ್ನೋತ್ತರವನ್ನು ಸಮಾನ ಮನಸ್ಕರನ್ನು ಸೇರಿಸಲಾಗುತ್ತದೆ. ಸಂಘ ಶತಾಬ್ದಿಯ ನಿಮಿತ್ತ “ಆರೆಸೆಸ್ಸ್ ಬೆಳೆದು ಬಂದ ಹಾದಿ” ಎಂಬ ವಿಷಯದಲ್ಲಿ ಮಂಥನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಕ್ತಾರರಾಗಿ ಆರೆಸೆಸ್ಸ್ ನ ವಿಭಾಗ ವ್ಯವಸ್ಥಾ ಪ್ರಮುಖರಾದ ಲೋಹಿತಾಶ್ವ ಕೇದಿಗೆರೆ ಅವರು “ಮಂಥನ”ದಲ್ಲಿ ಮಾತನಾಡಿ ಆರೆಸೆಸ್ಸ್ ಸಮಾಜದ ಸಂಘಟನೆಯಾಗಿ ಕೆಲಸ ಮಾಡಿದ ಪರಿಣಾಮ ಎಲ್ಲಾ ಕ್ಷೇತ್ರವನ್ನೂ ತಲುಪಿ ಸಮಾಜದಲ್ಲಿನ ವ್ಯವಸ್ಥಾ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಹಿಂದೂ ಸಮಾಜ, ಹಿಂದೂ ಸಂಸ್ಕೃತಿ, ಹಿಂದೂ ರಾಷ್ಟ್ರದ ಅಧಿಷ್ಠಾನದೊಂದಿಗೆ ಸಂಘ ಕೆಲಸ ಮಾಡುತ್ತದೆ, ರಾಷ್ಟ್ರದ ಪರಮ ವೈಭವವೇ ಸಂಘದ ಗುರಿಯಾಗಿದೆ ಎಂದರು.

ಪ್ರಶ್ನೋತ್ತರ ಅವಧಿಯಲ್ಲಿ ಸಾರ್ವಜನಿಕ ರಿಂದ ಆರೆಸೆಸ್ಸ್ ಗೆ 100 ವರ್ಷದ ಹೊಸ್ತಿಲಿನಲ್ಲಿ ಇರುವಾಗ ಸಂಘ ಎಷ್ಟು ಸ್ಥಾನಗಳನ್ನು ತಲುಪಿದೆ ಹೇಗೆ ದೇಶದಲ್ಲಿ ಕೆಲಸ ಮಾಡುತ್ತಿದೆ? ಎಂದು ಪ್ರಶ್ನೆ ಕೇಳಿದಾಗ ಉತ್ತರಿಸಿದ ಲೋಹಿತಾಶ್ವ ಆರೆಸೆಸ್ಸಿನ ಮೊದಲ ಸರ ಸಂಘಚಾಲಕ ಡಾಕ್ಟರ್ ಜೀ ಅವರಿಗೆ ಗ್ರಾಮಾಂತರ ಭಾಗದಲ್ಲಿ ಶೇ.1ರಷ್ಟು ಮತ್ತು ನಗರ ಭಾಗದಲ್ಲಿ ಶೇ.3ರಷ್ಟು ಕಾರ್ಯಕರ್ತರಾಗಬೇಕೆಂದು ಅಪೇಕ್ಷೆ ಇತ್ತು. ಅದರ ಪರಿಣಾಮ ಸಂಘ ಇಂದು 51 ಸಾವಿರ ಸ್ಥಾನಗಳಲ್ಲಿ 83 ಸಾವಿರ ನಿತ್ಯ ಶಾಖೆ, 32 ಸಾವಿರ ವಾರಕ್ಕೊಮ್ಮೆ ನಡೆಯುವ ಮಿಲನ್,12 ಸಾವಿರ ತಿಂಗಳೊಮ್ಮೆ ನಡೆಯುವ ಮಂಡಳಿ ಸೇರಿ ಸರಿ ಸುಮಾರು 1.3 ಲಕ್ಷ ಚಟುವಟಿಕೆಗಳನ್ನು ಮೂಲಕ ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಆರೆಸೆಸ್ಸ್ ತಲುಪಿದೆ ಎಂದರು.

ಮಹಿಳೆಯೊಬ್ಬರು ಎದ್ದು ನಿಂತು ಆರ್.ಎಸ್.ಎಸ್ ನಲ್ಲಿ ಮಹಿಳೆಯರಿಗೆ ಅವಕಾಶವಿದೆಯೇ? ಎಂದು ಪ್ರಶ್ನೆ ಮಾಡಿದರು. ಉತ್ತರಿಸಿದ ವಕ್ತಾರರು ರಾಷ್ಟ್ರೀಯ ಸ್ವಯಂಸೇವಕ ಸಂಘ ಒಂದು ಪುರುಷರ ಸಂಘಟನೆ, ಮಾತೆಯರಿಗೆ ರಾಷ್ಟ್ರ ಸೇವಿಕಾ ಸಮಿತಿಯ ಹೆಸರಿನಲ್ಲಿ ಮಹಿಳಾ ಸಂಘಟನೆ ಸಕ್ರಿಯವಾಗಿದೆ. ಇನ್ನು ಸಂಘದಿಂದ ಮಾತೃ ಮಂಡಳಿ, ಶಿಶು ಮಂದಿರಗಳಲ್ಲಿ ಮಾತಾಜೀಗಳಾಗಿ ಮಾತೆಯರು ಸೇವೆ ಸಲ್ಲಿಸುತ್ತಿದ್ದಾರೆ. ಸಂಘದ ವಿವಿಧ ಕ್ಷೇತ್ರದ ಸಂಸ್ಥೆಗಳಲ್ಲಿ ಮಾತೆಯರು ಸಕ್ರಿಯರಾಗಿದ್ದಾರೆ ನಿಮಗೂ ಸ್ವಾಗತ ಎಂದರು. ಹೀಗೆ ಅನೇಕ ಸಾರ್ವಜನಿಕರ ಪ್ರಶ್ನೆಗಳನ್ನು ಲೋಹಿತಾಶ್ವ ಪರಿಹರಿಸಿದರು.

“ಮಂಥನ” ಕಾರ್ಯಕ್ರಮವನ್ನು ಕೋಡೂರಿನ ಚಿದಂಬರ್ ರಾವ್ ನಿರೂಪಿಸಿದರು. ಆಲವಳ್ಳಿ ದಾನೇಶ್ ಸ್ವಾಗತಿಸಿದರು. ಕು. ಕುಮುದ ಪ್ರಾಥಿಸಿದರು. ಕಿರಣ್ ಕರಡಿಗ ವಂದಿಸಿದರು.

Leave a Comment