ರಿಪ್ಪನ್‌ಪೇಟೆ ; ತಮ್ಮಡಿಕೊಪ್ಪದ ಶ್ರೀ ಕರಿಬಸವೇಶ್ವರ ಶ್ರೀ ಬಾಲಚಿಕ್ಕಮ್ಮ ಹಾಗೂ ಬಾಲಸುಬ್ರಹ್ಮಣ್ಯ ಪರಿವಾರ ದೇವರ ಸನ್ನಿಧಾನದಲ್ಲಿ ಪ್ರತಿ ಭಾನುವಾರ ದೇವರ ಸನ್ನಿಧಾನದಲ್ಲಿ ವಿಶೇಷ ಪೂಜೆ ಪುನಸ್ಕಾರ ಆದ ನಂತರ ಪ್ರತಿ ಭಾನುವಾರವು ಮದ್ಯವರ್ಜನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಭಕ್ತಾದಿಗಳು ಹಾಗೂ ಸಾರ್ವಜನಿಕರು ಈ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಮದ್ಯಪಾನದಿಂದ ಬೀದಿಗೆ ಬಂದ ಸಾವಿರಾರು ಕುಟುಂಬಗಳು ಈ ಸನ್ನಿಧಾನಕ್ಕೆ ಬಂದು ಅಲ್ಲಿ ನೆಲೆಸಿರುವ ದೈವಕ್ಕೆ ಇಚ್ಛಾನುಶಕ್ತಿ ಕಾಣಿಕೆ ಹಾಕಿ ಅಥವಾ ಹಾಕದೆ ಹೋಗಬಹುದು. ಮದ್ಯಪಾನ ಮಾಡುವವರಿಗೆ ನೀಡುವ ಔಷಧಿಗೆ ಖರ್ಚು ಬಂದರೂ ಸಹ ಈ ದೇವಾಲಯದ ಧರ್ಮದರ್ಶಿ ಪ್ರಕಾಶ್ ರವರು ಯಾವುದೇ ಶುಲ್ಕವನ್ನು ತೆಗೆದುಕೊಳ್ಳದೆ ಭಕ್ತಾದಿಗಳಿಗೆ ಇಷ್ಟವಾದಲ್ಲಿ ದೇವರಿಗೆ ಕಾಣಿಕೆ ಹಾಕಬಹುದು. ಭಕ್ತಾದಿಗಳು ದೇವರಿಗೆ ಕಾಣಿಕೆ ಹಾಕಲಿ ಇಲ್ಲದೆ ಇದ್ದರೆ ಬೇಡ ಎಂಬ ಮನೋಭಾವನೆ ಯೊಂದಿಗೆ ಶ್ರದ್ಧಾ ಭಕ್ತಿಯಿಂದ ನಿಸ್ವಾರ್ಥ ಸೇವೆಯನ್ನು ಹಲವಾರು ವರ್ಷಗಳಿಂದ ಸಲ್ಲಿಸುತ್ತಿರುವ ಧರ್ಮದರ್ಶಿಗಳು ಬಡ ಜನರಿಗೆ ಒಳಿತಾಗಲಿ ಎಂಬ ಆಶಯವನ್ನು ಹೊಂದಿದ್ದಾರೆ.
ಈ ಮದ್ಯವರ್ಜನ ಔಷಧಿಯನ್ನು ನೂರಾರು ಕುಟುಂಬಗಳಿಗೆ ನೀಡುತ್ತಾ ಬಂದಿರುವ ಧರ್ಮದರ್ಶಿಗಳು ಹತ್ತಾರು ವರ್ಷಗಳಿಂದ ನಿರಂತರವಾಗಿ ತಮ್ಮ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರ ಔಷಧಿಯಿಂದ ನೂರಾರು ಕುಟುಂಬಗಳು ನೆಮ್ಮದಿಯ ಬದುಕು ಕಂಡುಕೊಂಡಿವೆ. ಇದರಿಂದ ಮುಕ್ತಿಯಾದ ಅನೇಕ ಕುಟುಂಬಗಳು ಈ ಸನ್ನಿದಾನಕ್ಕೆ ಬಂದು ಸಾರ್ಥಕ ಬದುಕನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ಈ ದೇವಾಲಯದ ಧರ್ಮದರ್ಶಿ ಪ್ರಕಾಶ್ ರವರು ಜನರು ಭಕ್ತರು ಸಾರ್ವಜನಿಕರು ಒಳ್ಳೆಯ ಜೀವನ ನಡೆಸಲಿ ನೆಮ್ಮದಿಯ ಬದುಕು ಕಾಣಲಿ ಎಂಬುದೇ ಇವರ ಆಸೆಯಾಗಿದೆ.
ಈ ಕ್ಷೇತ್ರದಲ್ಲಿ ಪ್ರತಿವರ್ಷ ವಿಶೇಷ ಹೋಮ-ಹವನ ಇನ್ನು ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿದ್ದು. ರಾಜಕಾರಣಿಗಳು ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಈ ಕ್ಷೇತ್ರಕ್ಕೆ ಬಂದು ದೇವರ ದರ್ಶನ ಮಾಡುತ್ತಿರುವುದು ವಿಶೇಷವಾಗಿದೆ. ರಿಪ್ಪನ್‌ಪೇಟೆ ಸಮೀಪದ ಮಲೆನಾಡಿನ ಸಣ್ಣ ಕುಗ್ರಾಮವಾದಂತ ತಮ್ಮಡಿಕೊಪ್ಪದಲ್ಲಿ ದೈವಿಕ ಶಕ್ತಿಗೆ ಅತ್ಯಂತ ಪ್ರಸಿದ್ಧಿಯಾಗಿ ಹೆಸರುವಾಸಿಯಾದ ಈ ದೇವಾಲಯ ಅನೇಕ ಭಕ್ತರ ಶ್ರದ್ಧಾ ಕೇಂದ್ರವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶ್ರೀ ಕ್ಷೇತ್ರದ ಧರ್ಮದರ್ಶಿ ಪ್ರಕಾಶ್ ಇವರನ್ನ ಸಂಪರ್ಕ ಸಂಖ್ಯೆ 9741834651 ಸಂಪರ್ಕಿಸಬಹುದು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.