ಹೊಸನಗರ

HOSANAGARA ; ಗೋ ಶಾಲೆಯಲ್ಲಿದ್ದ ಹಸುವಿನ ಕುತ್ತಿಗೆಗೆ ಹಗ್ಗ ಬಿಗಿದು ಬಾವಿಯೊಳಗೆ ನೇತು ಬಿಟ್ಟು ಸಾಯಿಸಿದ ಕಿಡಿಗೇಡಿಗಳು !

HOSANAGARA ; ಪಟ್ಟಣದ ಹೊರ ವಲಯದ ಕುವೆಂಪು ಶಾಲೆಯ ಹತ್ತಿರ ನೇಣು ಬಿಗಿದ ಸ್ಥಿತಿಯಲ್ಲಿ ಹಸುವಿನ ಶವ ಪತ್ತೆಯಾದ ಘಟನೆ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಪಟ್ಟಣದಿಂದ ಸುಮಾರು 0.5 ಕಿ.ಮೀ. ದೂರದಲ್ಲಿ ಹೊಸನಗರದ ಕೆಲವು ಯುವಕರು ರಮೀತ್‌ರವರ ನೇತೃತ್ವದಲ್ಲಿ ಗೋ ಶಾಲೆಯನ್ನು ಆರಂಭಿಸಿದ್ದು ಆ ಗೋಶಾಲೆಯಲ್ಲಿ 10-20 ಬೀದಿ ಹಸುಗಳು ಇದರ ಜೊತೆಗೆ ಅಪಘಾತದಲ್ಲಿ ಕಾಲು ಮುರಿದುಕೊಂಡ ಹಸು, ಕರುಗಳನ್ನು ಬಿಡಾಡಿ ದನಗಳನ್ನು ಸಾಕುತ್ತಿದ್ದರು‌. ಭಾನುವಾರ ರಾತ್ರಿ 12 ಗಂಟೆಯವರೆಗೆ ಗೋ ಶಾಲೆಯ ಗೋ ಸೇವಕರು ದನ-ಕರುಗಳಿಗೆ ಆಹಾರ ಹಾಕಿ ಮನೆಗೆ ಹೋದ ಸಂದರ್ಭದಲ್ಲಿ ಕಿಡಿಗೇಡಿಗಳು ದನದ ಕೊಟ್ಟಿಗೆಗೆ ಹೋಗಿ ಒಂದು ದನವನ್ನು ಎಳೆದುಕೊಂಡು ಹೋಗಿ ಅಲ್ಲೇ ಸಮೀಪವಿದ್ದ ದನಗಳಿಗೆ ನೀರುಣಿಸುವ ಬಾವಿಗೆ ನೇತು ಹಾಕಿ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪೊಲೀಸ್, ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ, ಪರಿಶೀಲನೆ ;

ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ರವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ಪೇಕ್ಟರ್ ಶಂಕರಗೌಡ ಪಾಟೇಲ್ ನೇತೃತ್ವದ ಪೋಲೀಸ್ ತಂಡ ನೇಣು ಬಿಗಿದ ಸ್ಥಿತಿಯಲ್ಲಿರುವ ದನದ ಶವವಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಗ್ನಿಶಾಮಕ ಸಿಬ್ಬಂದಿಯಾದ ಕೆ.ಟಿ ರಾಜಪ್ಪ, ರಾಜೇಶ್, ಸುರೇಶ, ಶಿವರಾಜ್ ಬಿ.ಜೆ, ಕೃಷ್ಣಚಾರಿ ಹೇಮಾಂತ್‌ಕುಮಾರ್‌ರವರ ಸಹಾಯದಿಂದ ನೇಣು ಹಾಕಿರುವ ಕುಣಿಕೆ ತಪ್ಪಿಸಿ ಬಾವಿಯಿಂದ ದನವನ್ನು ಮೇಲೆತ್ತಲಾಯಿತು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಮಂಜುನಾಥ್, ಮಧುಸೂದನ್ ಎ.ಹೆಚ್.ಸಿ, ಸುನೀಲ್, ಜಗದೀಶ್ ಇನ್ನೂ ಮುಂತಾದವರು ಇದ್ದರು.

ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ :

ಘಟನಾ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಸಂಜೀವ್ ರವರು ಯಾರೇ ತಪ್ಪು ಮಾಡಿದರೂ ಅವರಿಗೆ ಉಗ್ರವಾದ ಶಿಕ್ಷೆ ನೀಡಬೇಕು‌. ತಪ್ಪಿತಸ್ಥರನ್ನು ಆದಷ್ಟು ಬೇಗ ಹುಡುಕುವ ಕಾರ್ಯ ಪೋಲೀಸ್ ಇಲಾಖೆ ಕೈಗೊಳ್ಳಲಿ. ಮುಂದೆ ಇಂತಹ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಜಾಗೃತಿ ವಹಿಸಲಿ ಎಂದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!