ಜಲಪಾತದಲ್ಲಿ ಈಜಲು ಹೋಗಿ ಪ್ರವಾಸಿಗ ನೀರುಪಾಲು !

Written by Mahesha Hindlemane

Published on:

THARIKERE | ಸ್ನೇಹಿತರ ಜೊತೆ ಹೆಬ್ಬೆ ಜಲಪಾತಕ್ಕೆ ಬಂದಿದ್ದ ಪ್ರವಾಸಿಗನೋರ್ವ ಜಲಪಾತದಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹೆಬ್ಬೆ ಜಲಪಾತದಲ್ಲಿ ಭಾನುವಾರ ಸಂಭವಿಸಿದೆ.

WhatsApp Group Join Now
Telegram Group Join Now
Instagram Group Join Now

ಛತ್ತಿಸಘಡದ ಮೂಲದ ಪ್ರವಾಸಿಗ ಅಮೀತ್ ಕುಮಾರ್ (30) ಮೃತ ದುರ್ದೈವಿ. ಈತ ಮೂಲತಃ ಛತ್ತಿಸ್ ಘಡದವನಾಗಿದ್ದು ಬೆಂಗಳೂರಿನಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಅದರಂತೆ ಭಾನುವಾರ ಸ್ನೇಹಿತರ ಜತೆ ಕೆಮ್ಮಣ್ಣುಗುಂಡಿ ಸಮೀಪದ ಹೆಬ್ಬೆ ಜಲಪಾತಕ್ಕೆ ತೆರಳಿದ ವೇಳೆ ಈಜಲು ಹೋಗಿ ನೀರುಪಾಲಾಗಿರುವ ಘಟನೆ ನಡೆದಿದೆ.

ಘಟನೆ ಸಂಬಂಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment