Crime News | ಓಮ್ನಿ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳು ಅಂದರ್ !

Written by malnadtimes.com

Published on:

ತೀರ್ಥಹಳ್ಳಿ : ಮಾರುತಿ ಓಮ್ನಿ (Maruthi Omni) ಕಾರಿನಲ್ಲಿ ಗಾಂಜಾ (Ganja) ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ತೀರ್ಥಹಳ್ಳಿ (Thirthahalli) ಪೊಲೀಸರು (Police) ಬಂಧಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಸಾಗರ (Sagara) ತಾಲೂಕಿನ ಆನಂದಪುರ ಸಮೀಪದ ಆಚಾಪುರ ಗ್ರಾಮದ ಮಹಮ್ಮದ್ ಬೇಗ್ (38) ಮತ್ತು ಹೊಸನಗರ (Hosanagara) ತಾಲೂಕಿನ ಕೆಂಚನಾಲ ಗ್ರಾಮದ ಗಜೇಂದ್ರ@ಗಜ (37) ಬಂಧಿತ ಆರೋಪಿಗಳು. ಇವರು ಗಾಂಜಾ ಮಾರಾಟ ಮಾಡಲು ಸಾಗರ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಓಮ್ನಿ ಕಾರಿನಲ್ಲಿ ಬರುವಾಗ ಮಾಲು ಸಮೇತ ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಇವರಿಂದ 1.60 ಲಕ್ಷ ರೂ. ಮೌಲ್ಯದ 2.150 ಕೆ.ಜಿ ತೂಕದ ಒಣ ಗಾಂಜಾ ಮತ್ತು 2.50 ಲಕ್ಷ ರೂ. ಅಂದಾಜು ಮೌಲ್ಯದ ಓಮ್ನಿ ಕಾರನ್ನು ವಶಕ್ಕೆ ಪಡೆಯಲಾಗಿದೆ.

ಎಸ್ಪಿ ಮಿಥುನ್ ಕುಮಾರ್ ಜಿ.ಕೆ, ಅಡಿಷನಲ್ ಎಸ್ಪಿ ಅನಿಲ್ ಕುಮಾರ ಭೂಮರೆಡ್ಡಿ, ಎ. ಜಿ ಕಾರಿಯಪ್ಪರ ಮಾರ್ಗದರ್ಶನದಲ್ಲಿ, ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರರ ನೇತೃತ್ವದಲ್ಲಿ ತೀರ್ಥಹಳ್ಳಿ ಠಾಣೆಯ ಪಿಐ ಅಶ್ವತ್ ಗೌಡ ಜೆ, ಪಿಎಸ್ ಐ ಶಿವನಗೌಡ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ಈ ದಾಳಿ ನಡೆಸಿದೆ.‌

Read More:ಹೊಟ್ಟೆ ನೋವು ತಾಳಲಾರದೆ ನೇಣಿಗೆ ಶರಣಾದ ಗೃಹಿಣಿ !

Leave a Comment