ಹೊಟ್ಟೆ ನೋವು ತಾಳಲಾರದೆ ನೇಣಿಗೆ ಶರಣಾದ ಗೃಹಿಣಿ !

Written by malnadtimes.com

Published on:

ಸೊರಬ: ಹೊಟ್ಟೆನೋವು ತಾಳಲಾರದೆ ನೇಣು (Hanging) ಬಿಗಿದುಕೊಂಡು ಗೃಹಿಣಿಯೋರ್ವಳು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಪಟ್ಟಣದ ವಿದ್ಯುತ್ ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಪಟ್ಟಣದಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದ ಅಕ್ಷತಾ (30) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯು ಹೊಟ್ಟೆ ನೋವು ತಾಳಲಾರದೆ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ.

ಗೃಹಿಣಿ
ಗೃಹಿಣಿ

ಭದ್ರಾವತಿ ತಾಲೂಕಿನ ಕೆರೆಭೀರನಹಳ್ಳಿ ಗ್ರಾಮದ ಅಕ್ಷತಾ ಅವರನ್ನು ಚಂದ್ರಗುತ್ತಿ ಗ್ರಾಮದ ಸಂತೋಷ್ ಎನ್ನುವವರಿಗೆ ವಿವಾಹ ಮಾಡಿಕೊಡಲಾಗಿತ್ತು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಈ ಘಟನೆ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

Karnataka Rain | ಇಂದು ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ, ಯೆಲ್ಲೋ ಅಲರ್ಟ್ ಘೋಷಣೆ

Leave a Comment