ಹೊಸನಗರ

10 ಲಕ್ಷ ರೂ. ಮೊತ್ತದ ಶೌಚಾಲಯ ಕೊಠಡಿ ನಿರ್ಮಿಸಿ ಕೊಡುಗೆ ನೀಡಿದ ಉಜ್ಜೀವನ್ ಮೈಕ್ರೊ ಬ್ಯಾಂಕಿಂಗ್, ಬ್ಯಾಂಕ್‌ನ ಕಾರ್ಯವೈಖರಿಗೆ ಗ್ರಾಮಸ್ಥರ ಶ್ಲಾಘನೆ | ಶಿಕ್ಷಣ ಕ್ಷೇತ್ರದ ಪ್ರಗತಿಗೆ ದಾನಿಗಳು ಮುಂದಾಗಬೇಕಿದೆ ; ಬಿಇಒ ಕೃಷ್ಣಮೂರ್ತಿ

ಹೊಸನಗರ ; ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ಸೃಷ್ಠಿಸುವ ಗುರುತರ ಜವಾಬ್ದಾರಿ ಪೋಷಕವರ್ಗ ಹಾಗು ದಾನಿಗಳ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್. ಕೃಷ್ಣಮೂರ್ತಿ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ತಾಲೂಕಿನ ಮೇಲಿನಬೆಸಿಗೆ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಉಜ್ಜೀವನ್ ಮೈಕ್ರೋ ಬ್ಯಾಂಕ್‌ನ ಸ್ಥಳೀಯ ಶಾಖೆ, ತನ್ನ ಛೋಟಾ ಕದಮ್ ಯೋಜನೆ ಅಡಿಯಲ್ಲಿ ರೂ. 10 ಲಕ್ಷ ಅನುದಾನದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತವಾಗಿ ನಿರ್ಮಿಸಿಕೊಟ್ಟ ಗ್ರಂಥಾಲಯ ಹಾಗೂ ಸುಸಜ್ಜಿತ ಶೌಚಾಲಯದ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಎಲ್ಲಾ ವಿಭಾಗದಲ್ಲೂ ಪೈಪೋಟಿ ನೀಡುವ ಮೂಲಕ ಸಾರ್ವಜನಿಕರ ಗಮನ ಸೆಳೆಯುತ್ತಿದ್ದು, ಪ್ರಶಂಸೆಗೆ ಪಾತ್ರವಾಗಿವೆ. ಶಿಕ್ಷಣದ ಜೊತೆಗೆ ಕ್ರೀಡೆ, ಸಾಹಿತ್ಯ, ಕಲೆ ಸೇರಿದಂತೆ ಹಲವು ವಿಭಾಗದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಾಧನೆಗೆ ಪಾತ್ರವಾಗಿವೆ. ಸರ್ಕಾರ ವಿದ್ಯಾರ್ಥಿಗಳ ಭೌತಿಕ ಹಾಗು ಮಾನಸಿಕ ಆರೋಗ್ಯ ಕಾಪಾಡಲು ಬಿಸಿಯೂಟ, ಶೂ, ಸಮವಸ್ತ್ರ, ಮೊಟ್ಟೆ, ಬಾಳೆಹಣ್ಣು, ಕಡಲೆ ಮಿಠಾಮಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ ಹಳೇ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಕಂಪ್ಯೂಟರ್, ತಟ್ಟೆ, ಲೋಟ, ಕ್ರೀಡಾ ಸಾಮಾಗ್ರಿ ಸೇರಿದಂತೆ ಹಲವು ಕೊಡುಗೆ ನೀಡುವ ಪರಿಪಾಠ ಮುಂದುವರೆದಿದೆ. ಇಂತಹ ದಾನಿಗಳಿಂದ ಮಾತ್ರವೇ ಸರ್ಕಾರಿ ಶಾಲೆಗಳಿಂದು ಶೈಕ್ಷಣಿಕವಾಗಿ ಪ್ರಗತಿ ಪಥದತ್ತ ದಾಲುಗಾಲು ಹಾಕಲು ಸಹಕಾರಿ ಆಗಿದೆ. ಉಜ್ಜೀವನ್ ಮೈಕ್ರೋ ಬ್ಯಾಂಕ್ ಶಾಲೆಗೆ ನೀಡಿದ ಕೊಡುಗೆ ಮಹತ್ತರವಾಗಿದ್ದು, ವಿದ್ಯಾರ್ಥಿಗಳು ಸೂಕ್ತವಾಗಿ ಸದ್ಬಳಿಕೆ ಮುಂದಾಗಲಿ ಎಂಬ ಸಲಹೆ ನೀಡಿದರು.

ಬ್ಯಾಂಕ್‌ನ ಆಪರೇಷನ್, ಸರ್ವಿಸ್ ಏರಿಯಾ ಮ್ಯಾನೇಜರ್ ಮೆಲ್ವಿನ್ ಡಿಮೆಲ್ಲೋ ಮಾತನಾಡಿ, ರಾಷ್ಟ್ರದಲ್ಲಿ ಉಜ್ಜೀವನ್ ಮೈಕ್ರೋ ಬ್ಯಾಂಕಿನ 735 ಶಾಖೆಗಳಿದ್ದು, ಗ್ರಾಹಕರಿಗೆ ಅಗತ್ಯ ಸಾಲ ವಿತರಿಸುವ ಮೂಲಕ ಗ್ರಾಮಾಭಿವೃದ್ದಿಗೆ ಸಹಕಾರ ನೀಡುತ್ತಿದೆ. ಸ್ಥಳೀಯ ಶಾಖೆ ರೂ 3 ಕೋಟಿ ವಹಿವಾಟು ನಡೆಸಿದ್ದು, ಮುಂದೆಯೂ ಸಾರ್ವಜನಿಕರಿಂದ ಹೆಚ್ಚಿನ ಸಹಕಾರದ ನಿರೀಕ್ಷೆಯಲ್ಲಿದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಗೋಪಿನಾಥ್ ಜಯನಗರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಬ್ಯಾಂಕ್‌ನ ವ್ಯವಸ್ಥಾಪಕ ಹೆಚ್.ಎಂ. ನಾಗರಾಜ್, ವಿತರಣಾ ವ್ಯವಸ್ಥಾಪಕ ಬಾಲಕೃಷ್ಣ, ಸ್ಟೇಟ್ ಅಡ್ಮಿನ್ ಮಂಜುನಾಥ್, ಏರಿಯಾ ವ್ಯವಸ್ಥಾಪಕ ಶ್ರೀನಿವಾಸ ಮೂರ್ತಿ, ಸರ್ವಿಸ್ ಕ್ವಾಲಿಟಿ ಮ್ಯಾನೇಜರ್ ಸುಕೇಶ್ ಜೈನ್, ಪ್ರಗತಿಪರ ಕೃಷಿಕ ಜಟ್ಟಿಮನೆ ನಾಗರಾಜ್, ದಾನಿಗಳಾದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಹಾಲಗದ್ದೆ ಉಮೇಶ್, ಹರೀಶ್ ಬಂಡಿಕೊಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಉಪಾಧ್ಯಕ್ಷೆ ಪೂರ್ಣಿಮಾ ಸದಸ್ಯರಾದ ಲಕ್ಷ್ಮಣಗೌಡ, ಜ್ಯೋತಿ, ಲಕ್ಷ್ಮಿದೇವಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೇತನ್ ಕುಮಾರ್, ಪ್ರಮುಖರಾದ ಸುರೇಶ್ ಆಚಾರ್ಯ, ಪ್ರಹ್ಲಾದ್, ನಕ್ಷತ್ರ ಮಂಜುನಾಥ್, ಶಿಕ್ಷಣ ಸಂಯೋಜಕ ಕರಿಬಸಪ್ಪ, ಸಿಆರ್‌ಪಿ ನಾಗಭೂಷಣ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಗುರುಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಇದೇ ಸಂದರ್ಭದಲ್ಲಿ ದಾನಿಗಳು ಮಕ್ಕಳಿಗೆ ನೀಡಿದ್ದ ಉಚಿತ ನೋಟ್ ಪುಸಕ್ತ, ವಾಟರ್ ಬಾಟಲ್ ವಿತರಿಸಲಾಯಿತು.

ಶಿಕ್ಷಕಿ ಕೆ.ಆರ್. ರೇಣುಕಾ ಉಡುಪ ಪ್ರಾರ್ಥಿಸಿ, ಶಿಕ್ಷಕ ಎಂ. ಸುರೇಂದ್ರ ನಿರೂಪಿಸಿ, ಮುಖ್ಯ ಶಿಕ್ಷಕ ವಿ.ರಂಗಸ್ವಾಮಿ ಪ್ರಾಸ್ಥಾವಿಕ ಮಾತನಾಡಿದರು. ಶಿಕ್ಷಕಿ ಹೆಚ್.ಡಿ. ಭವ್ಯ ವಂದಿಸಿದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]