5 ಸಾವಿರ ರೂ. ಸಾಲ ಕೊಟ್ಟವನ ಕಾಟ ತಾಳಲಾರದೆ ಆತ್ಮಹತ್ಯೆಗೆ ಶರಣಾದ ವಿಳ್ಯೆದೆಲೆ ವ್ಯಾಪಾರಿ !

Written by Mahesha Hindlemane

Published on:

ಸೊರಬ ; ಆತ ವೀಳ್ಯದೆಲೆ ವ್ಯಾಪಾರಿ. ಹೀಗೆ ಕಷ್ಟ ಬಂದಾಗ 5 ಸಾವಿರ ರೂಪಾಯಿ ಸಾಲ ಪಡೆದಿದ್ದ. ಐದು ಸಾವಿರಕ್ಕೆ ಸಾಕಷ್ಟು ಬಡ್ಡಿಯೂ ಕಟ್ಟಿದ್ದ. ಆದರೆ, 5 ಸಾವಿರಕ್ಕೆ ಬಡ್ಡಿ ಸೇರಿ 9 ಸಾವಿರ ರೂ. ಆಗಿತ್ತು. ಜತೆಗೆ ಸಾಲ ಕೊಟ್ಟವನ ದೌರ್ಜನ್ಯ, ಅವಮಾನದಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ‌.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹೌದು, ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಿರೇಎಡಗೋಡು ಗ್ರಾಮದ ಮಹೇಶಪ್ಪ (48) ವೀಳ್ಯದೆಲೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಹೀಗೆ ಕಷ್ಟ ಬಂದಾಗ ಗ್ರಾಮದ ಒಬ್ಬನಿಂದ 5 ಸಾವಿರ ಕೈ ಸಾಲ ತಗೊಂಡಿದ್ದ. 5 ಸಾವಿರಕ್ಕೆ ಬಡ್ಡಿ ಸೇರಿ 9 ಸಾವಿರ ಸಾಲ ತೀರಿಸಲಾಗದೆ ಸಾಲಗಾರನ ಕಾಟಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಾಲ ಕೊಟ್ಟ ವ್ಯಕ್ತಿ ಬಡ್ಡಿ ಸಮೇತ 9 ಸಾವಿರ ರೂ. ಕೊಡುವಂತೆ ಕೇಳಿದ್ದ. ಸಾಲ ಹಿಂದಿರುಗಿಸದ ಕಾರಣ ಮಹೇಶಪ್ಪ ಬಳಿ ಇದ್ದ ಬೈಕ್ ಅನ್ನು ಎತ್ತಿಕೊಂಡು ಹೋಗಿದ್ದ. ಇದರಿಂದ ಅವಮಾನ ತಾಳಲಾರದೇ ಮಹೇಶಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Comment